ETV Bharat / state

ಬಿಗಿ ಬಂದೋಬಸ್ತ್​​ನಲ್ಲಿ ಮಧ್ಯಪ್ರದೇಶದ ಅತೃಪ್ತ ಶಾಸಕರು: ರೆಸಾರ್ಟ್ ಸುತ್ತ ಪೊಲೀಸ್ ಕಣ್ಗಾವಲು

author img

By

Published : Mar 15, 2020, 4:45 PM IST

ರಮಡಾ ರೆಸಾರ್ಟ್‌ನಲ್ಲಿ 4 ಕೆಎಸ್​ಆರ್​ಪಿ ತುಕಡಿ ಸೇರಿ 300 ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ. ಅಪರಿಚಿತ ವ್ಯಕ್ತಿಯಾಗಲಿ, ವಾಹನವಾಗಲಿ ಒಳಹೋಗದಂತೆ ಎಚ್ಚರಿಕೆ ವಹಿಸಲಾಗಿದೆ.

police security in RAMADA resort at Bangalore
ರಮಡಾ ರೆಸಾರ್ಟ್‌

ಬೆಂಗಳೂರು: ರಮಡಾ ರೆಸಾರ್ಟ್‌ನಲ್ಲಿ ಮಧ್ಯಪ್ರದೇಶದ 22 ಅತೃಪ್ತ ಶಾಸಕರು ವಾಸ್ತವ್ಯ ಹೂಡಿದ್ದು ಸುತ್ತಮುತ್ತ ಪೊಲೀಸ್ ಬಿಗಿ ಭದ್ರತೆ ಒದಗಿಸಲಾಗಿದೆ.

4 ಕೆಎಸ್​ಆರ್​ಪಿ ತುಕಡಿ ಸೇರಿ 300 ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಯಲಹಂಕ ದೊಡ್ಡಬಳ್ಳಾಪುರ ರಸ್ತೆಯ ನಾಗೇನಹಳ್ಳಿ ಗೇಟ್ ಬಳಿ ಹಾಗೂ ರಾಜಾನುಕುಂಟೆಯಲ್ಲಿ ಬ್ಯಾರಿಕೇಡ್​ಗಳನ್ನು ಹಾಕಿ ಪೊಲೀಸರು ಸ್ಥಳದಲ್ಲಿ ಬೀಡುಬಿಟ್ಟಿದ್ದಾರೆ.

ಪೊಲೀಸ್ ಬಂದೋಬಸ್ತ್​​ನಲ್ಲಿ ಮಧ್ಯಪ್ರದೇಶದ ಅತೃಪ್ತ ಶಾಸಕರು

ಹೆಚ್ಚಿನ ಓದಿಗಾಗಿ : ಮಧ್ಯಪ್ರದೇಶದ ಕಾಂಗ್ರೆಸ್ ಬಂಡಾಯ ಶಾಸಕರು ರಮಡಾ ರೆಸಾರ್ಟ್​​ಗೆ ಶಿಫ್ಟ್​​​..

ಇನ್ನುಳಿದಂತೆ ಹೊನ್ನೇನಹಳ್ಳಿ ಗೇಟ್​ನಿಂದ ರಮಡಾ ರೆಸಾರ್ಟ್ ಇರುವ ಮಾರ್ಗದಲ್ಲಿ ಯಾವುದೇ ಅಪರಿಚಿತ ವಾಹನಗಳು ಓಡಾಡದಂತೆ ಕಟ್ಟೆಚ್ಚರ ವಹಿಸಿದ್ದಾರೆ. ಇನ್ನುಳಿದಂತೆ, ರೆಸಾರ್ಟ್​ನಲ್ಲಿ ತಂಗಿರುವ ಶಾಸಕರು ಹೊರ ಬಂದಿಲ್ಲ. ಹೊರಗಿನ ಯಾವುದೇ ವಾಹನಗಳು ಸೇರಿದಂತೆ ಯಾರೊಬ್ಬರು ಒಳ ಪ್ರವೇಶಿಸಬೇಕಾದರೂ ರೆಸಾರ್ಟ್ ಮ್ಯಾನೇಜ್ಮೆಂಟ್​ನ ಅನುಮತಿ ಜೊತೆಗೆ, ಸ್ಥಳೀಯ ಬಿಜೆಪಿ ಮುಖಂಡರ ಅನುಮತಿ ಪಡೆಯಬೇಕಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.