ETV Bharat / state

ಪ್ರಕರಣ ಬೆಳಕಿಗೆ ಬಂದ 9 ತಿಂಗಳ ಬಳಿಕ ಚಾರ್ಮಾಡಿ ಘಾಟ್​​ನಲ್ಲಿ ಪೊಲೀಸರಿಂದ ಶವ ಹುಡುಕಾಟ

ಸಾಲದ ಹಣ ಮರಳಿಸಲಿಲ್ಲವೆಂದು ವ್ಯಕ್ತಿಯನ್ನು ಬೆಂಗಳೂರಿನಿಂದ ಅಪಹರಿಸಿ ಕೊಲೆ ಮಾಡಿರುವ ಪ್ರಕರಣ ಸಂಬಂಧ ಪೊಲೀಸರಿಗೆ ಶವ ಹುಡುಕುವುದೇ ತಲನೋವಾಗಿ ಪರಿಣಮಿಸಿದೆ. ಕೊಲೆಗೈದ ಆರೋಪಿಗಳು ಶವವನ್ನು ಚಾರ್ಮಾಡಿ ಘಾಟ್​ನಲ್ಲಿ ಎಸೆದಿದ್ದು, ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ.

police-searching-for-dead-body-in-charmadi-ghat
ಪ್ರಕರಣ ಬೆಳಕಿಗೆ ಬಂದ 9 ತಿಂಗಳ ಬಳಿಕ ಚಾರ್ಮಾಡಿ ಘಾಟ್​​ನಲ್ಲಿ ಶವ ಹುಡುಕುತ್ತಿರುವ ಪೊಲೀಸರು
author img

By

Published : Jan 4, 2023, 2:05 PM IST

ಬೆಂಗಳೂರು: ಕಳೆದ 9 ತಿಂಗಳುಗಳ ಹಿಂದೆ ಹತ್ಯೆಗೊಳಗಾಗಿದ್ದ ನಗರದ ಕೋಣನಕುಂಟೆ ನಿವಾಸಿ ಶರತ್ ಶವ ಪತ್ತೆಗಾಗಿ ಕಬ್ಬನ್ ಪಾರ್ಕ್ ಠಾಣೆ ಪೊಲೀಸರು ಚಾರ್ಮಾಡಿ ಘಾಟ್​​ನಲ್ಲಿ ಶೋಧ ನಡೆಸುತ್ತಿದ್ದಾರೆ. ಸಾಲದ ಹಣ‌ ಕೊಟ್ಟಿಲ್ಲ ಎಂಬ ಕಾರಣಕ್ಕಾಗಿ ಶರತ್​ ಎಂಬಾತನನ್ನು ಅಪಹರಿಸಿ ಕೊಲೆಗೈದ ಆರೋಪದಡಿ ಪ್ರಮುಖ ಆರೋಪಿಗಳಾದ ಶರತ್ ಕುಮಾರ್​​ ಹಾಗೂ ಆತನ ತಂದೆ ವೆಂಕಟಚಲಪತಿ ಸೇರಿದಂತೆ 10 ಮಂದಿ‌ ಆರೋಪಿಗಳನ್ನು ಬಂಧಿಸಲಾಗಿತ್ತು‌.

ವಿಚಾರಣೆಯ ವೇಳೆ ಕೊಲೆ‌ ಮಾಡಿ ಶವವನ್ನು ಚಾರ್ಮಾಡಿ ಘಾಟ್‌ನಲ್ಲಿ‌ ಬಿಸಾಕಿರುವ ಬಗ್ಗೆ ಆರೋಪಿಗಳು ಹೇಳಿಕೆ ನೀಡಿದ್ದರು. ಇದರ ಆಧಾರದ ಮೇಲೆ ಕಬ್ಬನ್ ಪಾರ್ಕ್‌ ಪೊಲೀಸರು ಆರೋಪಿಗಳೊಂದಿಗೆ ಚಾರ್ಮಾಡಿ ಘಾಟ್​​ನಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ. ಘಾಟ್​ನ ಕಂದಕ ಹಾಗೂ ಪೊದೆಗಳಲ್ಲಿ ಹುಡುಕಾಡಿದ್ದರೂ ಇನ್ನೂ ಶವ ಪತ್ತೆಯಾಗಿಲ್ಲ. ರಾತ್ರಿ ವೇಳೆ ಶವ ಎಸೆದಿದ್ದರಿಂದ ಆರೋಪಿಗಳೂ ಸಹ ಗೊಂದಲದ ಹೇಳಿಕೆ ನೀಡಿದ್ದಾರೆ. ನಿಖರವಾದ ಸ್ಥಳದ ಬಗ್ಗೆ ಹೇಳುವಲ್ಲಿ ವಿಫಲರಾಗಿರುವುದು ಪೊಲೀಸರನ್ನು ಚಿಂತೆಗೀಡು ಮಾಡಿದೆ.

ಸಾಮಾಜಿಕ‌ ಜಾಲತಾಣದಲ್ಲಿ ಯುವಕನನ್ನು ಅರೆಬೆತ್ತಲೆಗೊಳಿಸಿ, ಹಗ್ಗದಿಂದ ಹಲ್ಲೆ ನಡೆಸುತ್ತಿರುವ ವಿಡಿಯೋ ತುಣುಕು ಹಾಗೂ ಫೋಟೊ ವೈರಲ್ ಆಗಿತ್ತು‌‌‌. ಘಟನಾವಳಿ ಬಗ್ಗೆ ಪ್ರಾಥಮಿಕ ತನಿಖೆ ನಡೆಸಿದಾಗ ಕೊತ್ತನೂರಿನ‌ ನಿವಾಸಿ ಶರಣ್ ಎಂಬಾತನನ್ನು ಕಳೆದ‌ ಮಾರ್ಚ್ 21ರಂದು ಬನಶಂಕರಿ ಬಸ್ ನಿಲ್ದಾಣದಿಂದ ಆರೋಪಿಗಳು ಕಾರಿನಲ್ಲಿ ಅಪಹರಿಸಿ ಮಾರಣಾಂತಿಕ ಹಲ್ಲೆ‌ ನಡೆಸಿ ಶರತ್​​ನನ್ನು ಕೊಲೆ‌ ಮಾಡಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ಸುಮೊಟೊ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು 10 ಮಂದಿ ಆರೋಪಿಗಳನ್ನು ಬಂಧಿಸಿದ್ದರು.

ಕೊಲೆಗೀಡಾದವನ ವಿರುದ್ಧವೂ ಪ್ರಕರಣ: ಮೃತ ಶರತ್ ಎಸ್ಸಿ-ಎಸ್ಟಿ ಯೋಜನೆಯಡಿ ಸರ್ಕಾರದಿಂದ ಸಿಗುವ ಸಾಲ ಮಂಜೂರು ಮಾಡಿಸಿಕೊಡುವುದಾಗಿ ಹೇಳಿ‌‌ಕೊಂಡು ಜನರಿಂದ ಹಣ ಪಡೆದು ವಂಚಿಸುತ್ತಿದ್ದ. ವಂಚನೆಯಡಿ ಮೃತನ ವಿರುದ್ಧ ಈ ಹಿಂದೆ ಕೋಣನಕುಂಟೆ ಪೊಲೀಸ್​ ಠಾಣೆಯಲ್ಲಿ ಎರಡು ಪ್ರಕರಣ ದಾಖಲಾಗಿತ್ತು. ‌ಮತ್ತೊಂದೆಡೆ, ಆರೋಪಿ ಶರತ್ ಕುಮಾರ್​​ ತಂದೆ ವೆಂಕಟಚಲಪತಿ ಚಿಕ್ಕಬಳ್ಳಾಪುರದಲ್ಲಿ ಸಂಘಟನೆಯೊಂದರ ಅಧ್ಯಕ್ಷನಾಗಿದ್ದ. ಅಲ್ಲದೆ, ಪ್ರಿಂಟಿಂಗ್ ಪ್ರೆಸ್​​ವೊಂದರ ಮಾಲೀಕನಾಗಿದ್ದಾನೆ. ಫೈನಾನ್ಸ್ ವ್ಯವಹಾರವೂ ನಡೆಸುತ್ತಿದ್ದ ಮುಖಂಡನ ಮಗ ಶರತ್ ಕುಮಾರ್ ಕೊಲೆಗೀಡಾದ ಶರತ್​ಗೆ ಕಳೆದ ವರ್ಷ 20 ಲಕ್ಷ ರೂಪಾಯಿ ಸಾಲ‌ ಕೊಟ್ಟಿದ್ದ ಎನ್ನಲಾಗಿದೆ.‌

ಶರತ್​ ಕಿಡ್ನಾಪ್‌: ಕೊಟ್ಟಿದ್ದ ಹಣ ಹಿಂತಿರುಗಿಸಲು ಆರೋಪಿಯು ಸತಾಯಿಸುತ್ತಿದ್ದ‌. ಹೀಗಾಗಿ ಕಳೆದ ಜನವರಿಯಲ್ಲಿ ಶರತ್​ನನ್ನು ಅಪಹರಿಸಿ ಹಣ ನೀಡುವಂತೆ ಆರೋಪಿಯು ಪೀಡಿಸಿದ್ದ. ಆಗ ಕೆಲವೇ ದಿನಗಳಲ್ಲಿ ಹಣ ಕೊಡುವುದಾಗಿ ಶರತ್​​ ಹೇಳಿದ್ದ.‌ ಆದರೆ ನುಡಿದಂತೆ ನಡೆದುಕೊಳ್ಳದ ಕಾರಣ ಮಾರ್ಚ್ 23ರಂದು ಆರೋಪಿಗಳು ಬನಶಂಕರಿಯಲ್ಲಿ ಕಿಡ್ನಾಪ್‌ ಮಾಡಿದ್ದರು. ಕಾರಿನಲ್ಲಿ ಅಪಹರಿಸಿ ಚಿಕ್ಕಬಳ್ಳಾಪುರದ ಫಾರ್ಮ್‌ ಹೌಸ್​​ವೊಂದದಕ್ಕೆ ಶರತ್ ಹಾಗೂ ಆತನ ಸಹಚರರು ಕರೆದೊಯ್ದು ಮನಬಂದಂತೆ ಹಲ್ಲೆ ಮಾಡಿದ್ದಾರೆ. ಸತತ ಒಂದು ವಾರದವರೆಗೂ ನಿರಂತರವಾಗಿ ದೈಹಿಕವಾಗಿ ಕಿರುಕುಳ ನೀಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಅಲ್ಲದೆ, ಅಪಹರಣದ ಬಗ್ಗೆ ಅನುಮಾ‌ನ ಬಾರದಿರಲು ವ್ಯೂಹ ರಚಿಸಿದ ಆರೋಪಿಗಳು ಶರತ್ ಕಡೆಯಿಂದ ಪೋಷಕರಿಗೆ ಕರೆ‌ ಮಾಡಿಸಿ 'ಸಾಲಗಾರರ ತೊಂದರೆ ಹೆಚ್ಚಾಗಿದ್ದು ಬೇರೆ ಊರಿಗೆ ಹೋಗಿ ಹಣ ಸಂಪಾದ‌ನೆ‌ ಮಾಡಿಕೊಂಡು ಬರುತ್ತೇನೆ. ಹೀಗಾಗಿ ನನ್ನನ್ನು ಹುಡುಕುವ ಪ್ರಯತ್ನ ಮಾಡಬೇಡಿ' ಎಂದಷ್ಟೆ ಹೇಳಲು ಅವಕಾಶ ಕಲ್ಪಿಸಿ ಪೋನ್ ಸಂಪರ್ಕ ಕಡಿತಗೊಳಿಸಿದ್ದಾರೆ‌. ಅಂದೇ ಪೋನ್ ಸ್ವಿಚ್ ಆಫ್ ಮಾಡಿ ಲಾರಿಯೊಂದರ ಮೇಲೆ ಬಿಸಾಕಿದ್ದಾರೆ‌. ತೀವ್ರತರದ ಹಲ್ಲೆಯಿಂದ ಬಳಲುತ್ತಿದ್ದರಿಂದ ಶರತ್ ಮಾರ್ಚ್ 29ರಂದು ಮೃತನಾಗಿದ್ದ' ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಗೋಣಿ ಚೀಲದಲ್ಲಿ ಶವ ತುಂಬಿ ಚಾರ್ಮಾಡಿಯಲ್ಲಿ ಬಿಸಾಕಿದ್ರು: ಕೊಲೆ ಮಾಡಿದ ಬಳಿಕ ಸಾಕ್ಷ್ಯಾಧಾರ ನಾಶಪಡಿಸಲು ಮುಂದಾದ ಆರೋಪಿಗಳು ಗೋಣಿಚೀಲದಲ್ಲಿ ಶವ ತುಂಬಿ ಕಾರಿನಲ್ಲಿ ಇಟ್ಟುಕೊಂಡು ಚಾರ್ಮಾಡಿ ಘಾಟ್​ನ ಘಟ್ಟ ಪ್ರದೇಶದ ಬಳಿ ಬಿಸಾಕಿದ್ದರು. ಬಳಿಕ ಬೆಂಗಳೂರಿಗೆ ಬಂದು ಏನೂ ನಡೆದಿಲ್ಲ ಎಂಬಂತೆ ಆರೋಪಿಗಳು ಓಡಾಡಿಕೊಂಡಿದ್ದರು. ಆರೋಪಿಗಳು ಹಲ್ಲೆ ಮಾಡಿರುವ ದೃಶ್ಯಾವಳಿ ಮೊಬೈಲ್ ಸೆರೆ ಹಿಡಿದುಕೊಂಡಿದ್ದು, ಅದು ವೈರಲ್ ಆಗಿತ್ತು.

ಸ್ಥಳೀಯ ವ್ಯಕ್ತಿಯೋರ್ವ ವಿಡಿಯೋ ಇಟ್ಟುಕೊಂಡು ಮಾಧ್ಯಮದವರ ಸೋಗಿನಲ್ಲಿ ಕರೆ ಮಾಡಿ ಹಣದ ಬೇಡಿಕೆ ಇಟ್ಟಿದ್ದ. ಆದರೆ, ಇದಕ್ಕೆ ಆರೋಪಿ ಶರತ್ ತಲೆಕೆಡಿಸಿಕೊಂಡಿರಲಿಲ್ಲ. ಕಾಲಕ್ರಮೇಣ ವಿಡಿಯೋ ವೈರಲ್ ಆಗಿದ್ದು, ಕಬ್ಬನ್ ಪಾರ್ಕ್ ಉಪವಿಭಾಗದ ಎಸಿಪಿ ಗಮನಕ್ಕೂ ಬಂದು ತನಿಖೆ ನಡೆಸಿದಾಗ ಕೊಲೆ‌‌‌ಯ ಸತ್ಯ ಸಂಗತಿ ಬಯಲಾಗಿದೆ‌ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರಲ್ಲಿ ಮಂಗಳಮುಖಿಯರಿಂದ ವ್ಯಕ್ತಿಯನ್ನು ಬೆತ್ತಲೆಗೊಳಿಸಿ ಸುಲಿಗೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.