ETV Bharat / state

ಪೊಲೀಸ್- ಸಾರ್ವಜನಿಕ ಸಭೆ... ಬೈಕ್ ವ್ಹೀಲಿಂಗ್, ರೋಡ್ ರೋಮಿಯೊಗಳಿಗೆ ಎಚ್ಚರಿಕೆ

ಸಮಸ್ಯೆಗಳಿದ್ದರೆ ಹೇಳಿ ಎಂದು ವೃತ್ತ ಆರಕ್ಷಕ ಪ್ರಕಾಶ್​ ಅವರು ಸಾರ್ವಜನಿಕರಿಗೆ ಕೇಳಿದಾಗ ಜನರು ಸಮಸ್ಯೆಗಳ ಸುರಿಮಳೆಯನ್ನೆ ಸುರಿಸಿದ್ರು. ಟ್ರಾಫಿಕ್, ಹೆಣ್ಣು ಮಕ್ಕಳನ್ನು ಚುಡಾಯಿಸುವುದು, ಬೈಕ್ ವ್ಹೀಲಿಂಗ್​, ಮದ್ಯ ವ್ಯಸನಿಗಳ ಹಾವಳಿ ಹೀಗೆ ಹಲವಾರು ಸಮಸ್ಯೆಗಳನ್ನ ಪೊಲೀಸರ ಮುಂದಿಟ್ಟರು.

ಪೊಲೀಸ್ ಸಾರ್ವಜನಿಕ ಸಭೆ
author img

By

Published : Jun 14, 2019, 11:42 AM IST

ಬೆಂಗಳೂರು: ನಗರದ ವಿಜಯಪುರ ಪೊಲೀಸ್ ವೃತ್ತದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಜನರ ಸಮಸ್ಯೆಗಳ ಕುರಿತು ಚರ್ಚಿಸಲಾಯಿತು. ಈ ವೇಳೆ ಜನರಿಂದ ಸಲಹೆಗಳನ್ನೂ ಪಡೆಯಲಾಯಿತು. ಪ್ರತಿ ಗ್ರಾಮಕ್ಕೆ ಓರ್ವ ಬೀಟ್ ಪೊಲೀಸರನ್ನು ನಿಯೋಜಿಸಲಾಗುವುದು, ಅವರು ಆ ಗ್ರಾಮದ ಸಮಸ್ಯೆಗಳನ್ನು ಬಗೆಹರಿಸಲಿದ್ದಾರೆ ಎಂದು ತಿಳಿಸಿದರು.

ನಿಮಗೆ ಸಮಸ್ಯೆಗಳಿದ್ದರೆ ಹೇಳಿ ಎಂದು ವೃತ್ತ ಆರಕ್ಷಕರಾದ ಪ್ರಕಾಶ್​ ಸಾರ್ವಜನಿಕರಿಗೆ ಕೇಳಿದಾಗ ಜನರು ಸಮಸ್ಯೆಗಳ ಸುರಿಮಳೆಯನ್ನೇ ಸುರಿಸಿದ್ರು. ಟ್ರಾಫಿಕ್ ಸಮಸ್ಯೆ, ಹೆಣ್ಣು ಮಕ್ಕಳನ್ನು ಚುಡಾಯಿಸುವ ಪುಂಡರು, ಬೈಕ್ ವ್ಹೀಲಿಂಗ್, ಮದ್ಯ ವ್ಯಸನಿಗಳ ಹಾವಳಿ ಹೀಗೆ ಹಲವಾರು ಸಮಸ್ಯೆಗಳನ್ನ ಪೊಲೀಸರ ಮುಂದಿಟ್ಟರು.

ಪೊಲೀಸ್ ಸಾರ್ವಜನಿಕ ಸಭೆ

ಈ ವೇಳೆ ಎಸ್ಪಿ ಸುಜಿತ್ ಮಾತನಾಡಿ, ಪ್ರಮುಖವಾಗಿ ವ್ಹೀಲಿಂಗ್ ಮಾಡುವವರ ವಿರುದ್ದ ಸೂಕ್ತ ಕ್ರಮ‌ ಕೈಗೊಳ್ಳಲಾಗುತ್ತದೆ. ‌ಇಂದೇ ಅದಕ್ಕೆ ಹೊಸ ತಂಡ ರಚನೆ‌ ಮಾಡಿ ಅಂತಹವರಿಗೆ ಶಿಕ್ಷೆ ಅಥವಾ ದಂಡ‌ ವಿಧಿಸುತ್ತೇವೆ. ಅಲ್ಲದೇ ಬೀದಿ ಬೀದಿಗಳಲ್ಲಿ ತಲೆಎತ್ತಿರುವ ಮದ್ಯದ ಮಾರಾಟವನ್ನು ತಡೆಯಲು ಕ್ರಮ‌ ಕೈಗೊಳ್ಳಲಾಗುತ್ತದೆ. ಕಾಲೇಜಿಗೆ ಹೋಗಿ ಬರುವ ಹೆಣ್ಣು ಮಕ್ಕಳನ್ನ ಚುಡಾಯಿಸುವ ಪುಂಡರಿಗಾಗಿ ಟೀಂ ರಚನೆ ಮಾಡಿ‌ ಕಾಲೇಜು ಆರಂಭವಾಗುವ ಮತ್ತು ಬಿಡುವ ವೇಳೆಯಲ್ಲಿ ತಂಡ ಕಾರ್ಯ ಪ್ರವೃತ್ತವಾಗಲಿದೆ ಎಂದು ತಿಳಿಸಿದ್ರು.

ಹೆದ್ದಾರಿಗಳಲ್ಲಿ ಖಾಸಗಿ ಬಸ್​​ಗಳ ವೇಗ ಮತ್ತು ಕಾನೂನು ಉಲ್ಲಂಘನೆ ಕುರಿತು ಬಸ್ ಮಾಲೀಕರ ಸಭೆ ಕರೆದು ಎಚ್ಚರಿಕೆ ಕೊಡುತ್ತೇವೆ. ಬಳಿಕ ಓವರ್ ಸ್ಪೀಡ್ ಹೋದ್ರೆ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದರು. ಅಲ್ಲದೇ ವಾಹನಗಳ ನಿಯಂತ್ರಣಕ್ಕೆ ಸಂಚಾರ ಸೂಚನಾ ದೀಪಗಳ ಅಳವಡಿಕೆ, ಸಿ.ಸಿ.ಟಿವಿ ಕ್ಯಾಮರಾ ಅಳವಡಿಸುವುದು ಸೇರಿದಂತೆ ಸಾರ್ವಜನಿಕರ ಸಮಸ್ಯೆಗಳಿಗೆ ಪರಿಹಾರ ನೀಡುವ ಪ್ರಯತ್ನ ಮಾಡಿದ್ರು.

ಇನ್ನು 15 ದಿನಗಳಲ್ಲಿ ಎಲ್ಲಾ ಕೆಲಸಗಳು ಆರಂಭವಾಗುವುದಲ್ಲದೇ, ಯಾವುದೇ ಸಮಸ್ಯೆ ಉಂಟಾಗದಂತೆ ಕ್ರಮ‌ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ರು. ಜನ ಸಂಪರ್ಕ ಸಭೆಯಲ್ಲಿ ವಿಜಯಪುರ ವೃತ್ತ ಆರಕ್ಷಕರಾದ ಪ್ರಕಾಶ್, ವಿಜಯಪುರ ಪಿಎಸ್​ಐ ನರೇಶ್ ನಾಯ್ಕ್, ವಿಶ್ವನಾಥ್ ಪುರ ಪಿಎಸ್​ಐ ಮಂಜುನಾಥ್ ಸೇರಿದಂತೆ ನೂರಾರು ಜನ ಭಾಗಿಯಾಗಿದ್ರು.

Intro:KN_BNG_01_13_asp warning_Ambarish_7203301
ವ್ಹೀಲಿಂಗ್ ಮಾಡುವವರಿಗೆ, ಹೆಣ್ಣುಮಕ್ಕಳನ್ನು ಚುಡಾಯಿಸುವ ಪುಂಡರಿಗೆ ಎಎಸ್ಪಿ ವಾರ್ನಿಂಗ್

ಬೆಂಗಳೂರು: ವ್ಹೀಲಿಂಗ್ ಮಾಡುವವರ ಮತ್ತು ಹೆಣ್ಣುಮಕ್ಕಳನ್ನು ಚುಡಾಯಿಸುವ ಪುಂಡರ ಹಾವಳಿ ಹೆಚ್ಚಾಗಿರುವ ದೂರುಗಳು ಬಂದ‌ ಹಿನ್ನೆಲೆ ಅವುಗಳ ಮಟ್ಟ ಹಾಕಲು ಹೊಸದಾಗಿ ತಂಡ ರಚನೆ ಮಾಡಿ, ಅಂತಹವರನ್ನು ಸದೆಬಡಿಯಲಾಗುವುದು ಎಂದು ಎಎಸ್ಪಿ ಸುಜಿತ್ ಹೇಳಿದ್ರು..

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವಿಜಯಪುರ ಪೊಲೀಸ್ ವೃತ್ತದ ವ್ಯಾಪ್ತಿಗೆ ಬರುವ ಪೊಲೀಸ್ ಠಾಣಾ ವ್ಯಾಪ್ತಿಯ ಸಾರ್ವಜನಿಕರ ಸಭೆಯಲ್ಲಿ, ಪೊಲೀಸ್‌ ಸಿಬ್ಬಂದಿಗೆ ಸಾರ್ವಜನಿಕರಿಂದ ಸಲಹೆ ಸೂಚನೆಗಳು ಬೇಕು. ನಿಮ್ಮೆಲ್ಲರ ಸಲಹೆ ಪಡೆದು ರೂಪುರೇಷೆ ಸಿದ್ದಪಡಿಸುತ್ತೇವೆ. ಪೊಲೀಸ್ ಇಲಾಖೆಗೆ ಸಂಬಂಧಿಸಿದ ಯಾವುದೇ ಸಮಸ್ಯೆ ಇದ್ದರೂ ಬಗೆಹರಿಸಲು ಪ್ರಯತ್ನಿಸುತ್ತೇವೆ. ಇದಕ್ಕಾಗಿ ಪ್ರತಿ ಗ್ರಾಮಕ್ಕೆ ಒಬ್ಬ ಬೀಟ್ ಪೊಲೀಸ್ ರನ್ನು ನೇಮಕ ಮಾಡಲಾಗಿದೆ.. ಅವರು ಆ ಗ್ರಾಮದ ಸಮಸ್ಯೆಗಳನ್ನು ಬಗೆಹರಿಸಲಿದ್ದಾರೆ.. ಇದರಿಂದ ಸಮಸ್ಯೆ ಬಗೆಹರಿಯದಿದ್ದಲ್ಲಿ ನಿಮಗೆ ಇರುವ ಸಮಸ್ಯೆಗಳನ್ನು ಇಲ್ಲಿ ಮುಕ್ಯವಾಗಿ ಚರ್ಚೆ ಮಾಡಿ ಹಾಗೆ ಅದಕ್ಕೆ ಪರಿಹಾರ ಇದ್ದರೂ ಹೇಳಿ..‌ಉತ್ತಮವೆನಿಸಿದರೆ ಜಾರಿಗೆ ತರೋಣ ಎಂದು ಸಭೆಯಲ್ಲಿ ‌ವೃತ್ತ ಆರಕ್ಷಕರಾದ ಪ್ರಕಾಶ್ ಸಾರ್ವಜನಿಕರಿಗೆ ತಿಳಿಸಿದ್ರು..‌

ಇನ್ನು ಸಾರ್ವಜನಿಕರಿಗೆ ಸಮಸ್ಯೆಗಳ ಕುರಿತು ಕೇಳಲು ಹೇಳಿದ್ದೇ ತಡ, ಇತ್ತ ಜನರು‌ ಸಮಸ್ಯೆಗಳ ಸುರಿಮಳೆಯನ್ನೇ ಸುರಿಸಿದ್ರು.. ಟ್ರಾಫಿಕ್‌ ಸಮಸ್ಯೆ ಬಗೆಹರಿಸುವುದು, ಹೆಣ್ಣುಮಕ್ಕಳನ್ನು ಚುಡಾಯಿಸುವುದು, ಸಿಸಿಟಿವಿ ಅಳವಡಿಕೆ, ಬೈಕ್ ವೀಲಿಂಗ್ ಮಾಡುವುದು, ಇದರಿಂದ‌ ಸಾರ್ವಜನಿಕರಿಗೆ ಕಿರಿಕಿರಿ ಉಂಟಾಗುತ್ತಿರುವುದು, ಮಧ್ಯವ್ಯಸನಿಗಳ ಹಾವಳಿ‌ ತಡೆಗಟ್ಟಬೇಕು ಎಂಬ ವಿಷಯಗಳು ಸೇರಿದಂತೆ ಹಲವಾರು ಸಮಸ್ಯೆಗಳ ಬಗ್ಗೆ ಜನರು ಸಭೆಯಲ್ಲಿ ಪ್ರಸ್ತಾಪಿಸಿದರು.

ಇದಕ್ಕೆ ಖಡಕ್ ಆಗಿ ಉತ್ತರ ನೀಡಿದ ಅಡಿಶನಲ್ ಎಸ್ಪಿ ಸುಜಿತ್ ಅವರು, ಪ್ರಮುಖವಾಗಿ ವ್ಹೀಲಿಂಘ ಮಾಡುವವರ ವಿರುದ್ದ ಸೂಕ್ತ ಕ್ರಮ‌ಕೈಗೊಳ್ಳಲಾಗುತ್ತದೆ..‌ಇಂದೆ ಅದಕ್ಕೆ ಹೊಸ ತಂಡ ರಚನೆ‌ ಮಾಡಿ ಅಂತಹವರಿಗೆ ಶಿಕ್ಷೆ ಅಥವಾ ದಂಡ‌ ವಿಧಿಸುವ ಕಾರ್ಯ ಮಾಡಲಾಗುತ್ತದೆ ಎಂದರು.. ಅಲ್ಲದೇ ಬೀದಿ ಬೀದಿಗಳಲ್ಲಿ ತಲೆಎತ್ತಿರುವ ಮದ್ಯದ ಮಾರಾಟವನ್ನು ತಡೆಯಲು ಕ್ರಮ‌ಕೈಗೊಳ್ಳಲಾಗುತ್ತದೆ.. ಅಲ್ಲದೇ ಕಾಲೇಜಿಗೆ ಹೋಗಿ ಬರುವ ಹೆಣ್ಣು ಮಕ್ಕಳಿ ಚುಡಾಯಿಸುವ ಪುಂಡರಿಗಾಗಿ ಟೀಮ್ ರಚನೆ ಮಾಡಿ‌ ಕಾಲೇಜು ಆರಂಭವಾಗುವ ಮತ್ತು ಬಿಡುವ ವೇಳೆಯಲ್ಲಿ ತಂಡ ಕಾರ್ಯ ಪ್ರವೃತವಾಗಲಿದೆ... ಹೆದ್ದಾರಿಗಳಲ್ಲಿ ಖಾಸಗಿ ಬಸ್ ಗಳ ವೇಗ ಮತ್ತು ಕಾನೂನನ್ನು ಗಾಳಿಗೆ ತೀರಿ ಓಡಾಡುತ್ತಿರುವುದಕ್ಕೆ, ಬಸ್ ಮಾಲೀಕರ ಸಭೆ ಕರೆದು ವಾರ್ನಿಂಗ್ ಮಾಡುತ್ತೇವೆ.. ಬಳಿಕ ಓವರ್ ಸ್ಪೀಡ್ ಹೋದರೆ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದರು..

ಅಲ್ಲದೇ ವಾಹನಗಳ ನಿಯಂತ್ರಣಕ್ಕೆ ಸಂಚಾರ ಸೂಚನಾ ದೀಪಗಳ ಅಳವಡಿಕೆ, ಸಿ.ಸಿ.ಟಿವಿ ಕ್ಯಾಮೆರಾ ಅಳವಡಿಸುವುದು ಸೇರಿದಂತೆ ಸಾರ್ವಜನಿಕರ ಸಮಸ್ಯೆಗಳಿಗೆ ಪರಿಹಾರ ನೀಡುವ ಪ್ರಯತ್ನ ಮಾಡಿದ್ರು.. ಇನ್ನು ಹದಿನೈದು ದಿನಗಳಲ್ಲಿ ಎಲ್ಲಾ ಕೆಲಸಗಳು ಆರಂಭವಾಗುವುದಲ್ಲದೇ, ಯವುದೇ ಸಮಸ್ಯೆ ಉಂಟಾಗದಂತೆ ಕ್ರಮ‌ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ರು..

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯ ವಿಜಯಪುರ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಇಲಾಖೆ ನೇತೃತ್ವದಲ್ಲಿ ಜನ ಸಂಪರ್ಕ ಸಭೆ ನಡೆಸಲಾಯಿತು. ಭಯ ಮುಕ್ತ ವಾತಾವರಣ ನಿರ್ಮಾಣಕ್ಕಾಗಿ ಅಡಿಶಿನಲ್ ಎಸ್ಪಿ ಸುಜಿತ್ ಈ ಜನ ಸಂಪರ್ಕ ಸಭೆ ಆಯೋಜಿಸಿದ್ದು, ಸಭೆಯಲ್ಲಿ ವಿಜಯಪುರ ವೃತ್ತ ಆರಕ್ಷಕರಾದ ಪ್ರಕಾಶ್, ವಿಜಯಪುರ ಪಿಎಸ್ ಐ ನರೇಶ್ ನಾಯ್ಕ್, ವಿಶ್ವನಾಥ್ ಪುರ ಪಿಎಸ್ ಐ ಮಂಜುನಾಥ್ ಸೇರಿದಂತೆ ನೂರಾರು ಜನ ಭಾಗಿಯಾಗಿದ್ರು.

Body:NoConclusion:Mo
ETV Bharat Logo

Copyright © 2024 Ushodaya Enterprises Pvt. Ltd., All Rights Reserved.