ಬೆಂಗಳೂರು : ಕೊಲೆ ಪ್ರಕರಣವೊಂದರಲ್ಲಿ ಬಂಧಿಸಲು ಹೋದ ಪೊಲೀಸರ ಮೇಲೆಯೇ ಗುಂಡಿನ ದಾಳಿ ನಡೆಸಿದ ಆರೋಪಿಗಳ ಪೈಕಿ ಒಬ್ಬ ಆರೋಪಿಯ ಮೇಲೆ ಪುಟ್ಟೇನಹಳ್ಳಿ ಪೊಲೀಸರು ಫೈರಿಂಗ್ ಮಾಡಿದ್ದು, ಇಬ್ಬರನ್ನು ಬಂಧಿಸಿದ್ದಾರೆ.
ಕೆಜಿ ಹಳ್ಳಿಯ ನಿವಾಸಿ ಮೆಹೆರಜ್ ಹಾಗೂ ಅಬ್ರಹಾಂ ಬಂಧಿತ ಆರೋಪಿಗಳು. ಈ ಪೈಕಿ ಗುಂಡು ತಿಂದ ಮೆಹೆರಾಜ್‌ನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕೆಜಿ ಹಳ್ಳಿಯ ಠಾಣೆಯ ಸುಲ್ತಾನ್ ಹತ್ಯೆಯ ಪ್ರಕರಣದಲ್ಲಿ ಭಾಗಿಯಾಗಿ ಕಳೆದ ಒಂದು ವರ್ಷಗಳಿಂದ ಇಬ್ಬರೂ ತಲೆಮರೆಸಿಕೊಂಡಿದ್ದರು. ಆರೋಪಿಗಳ ಪತ್ತೆಗಾಗಿ ಬಾಣಸವಾಡಿ ಎಸಿಪಿ ನೇತೃತ್ವದಲ್ಲಿ ವಿಶೇಷ ಪೊಲೀಸ್ ತಂಡ ರಚಿಸಲಾಗಿತ್ತು. ನಾಲ್ಕು ದಿನಗಳ ಹಿಂದೆ ಪುಟ್ಟೇನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಆರೋಪಿಗಳ ಬಾಡಿಗೆ ಮನೆ ಪಡೆದು ವಾಸ ಮಾಡಿಕೊಂಡಿದ್ದರು ಎಂಬ ಮಾಹಿತಿ ಆಧಾರದ ಮೇಲೆ ಬಂಧಿಸಲು ಹೋದ ಎಎಸ್ಐ ದಿನೇಶ್ ಶೆಟ್ಟಿಗೆ ಆರೋಪಿಯಾದ ಅಬ್ರಾಹಂ ಡ್ರ್ಯಾಗರ್ನಿಂದ ಚುಚ್ಚಿದ್ದಾನೆ, ಮೆಹರಾಜ್ ತನ್ನ ಬಳಿಯಿದ್ದ ಪಿಸ್ತೂಲ್ನಿಂದ ಶೂಟ್ ಮಾಡಿದ್ದಾನೆ. ಆತ್ಮರಕ್ಷಣೆಗಾಗಿ ಎಎಸ್ಐ ದಿನೇಶ್ ನೇತೃತ್ವದ ತಂಡ ಆರೋಪಿಗಳ ಮೇಲೆ ಗುಂಡು ಹಾರಿಸಿ ಬಂಧಿಸಿದ್ದಾರೆ. ಕ್ಷಣಾರ್ಧದಲ್ಲಿ ಗುಂಡೇಟಿನಿಂದ ಎಎಸ್ಐ ತಪ್ಪಿಸಿಕೊಂಡಿದ್ದಾರೆ.
ಬಂಧಿತ ಮೆಹರಾಜ್ ವಿರುದ್ಧ ನಗರ ವಿವಿಧ ಪೊಲೀಸ್ ಠಾಣೆಗಳಲ್ಲಿ 30ಕ್ಕೂ ಹೆಚ್ಚು ಕೇಸ್ಗಳು ದಾಖಲಾಗಿವೆ. ಈ ಹಿಂದೆ ನಂದಿನಿ ಲೇಔಟ್ ಹಾಗೂ ಕೋಲಾರದಲ್ಲಿ ಬಂಧಿಸಲು ಹೋದಾಗ ಪೊಲೀಸರ ಮೇಲೆಯೇ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ ಎಂದು ಘಟನೆ ಸಂಬಂಧ ಡಿಸಿಪಿ ಶರಣಪ್ಪ ಸ್ಥಳ ಭೇಟಿ ಪರಿಶೀಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ಇದನ್ನೂ ಓದಿ : ವೆಬ್ ಸಿರೀಸ್ ಮಿರ್ಜಾಪುರ್, ಅಮೆಜಾನ್ ಪ್ರೈಮ್ ವಿರುದ್ಧ ಮಿರ್ಜಾಪುರದಲ್ಲಿ ಎಫ್ಐಆರ್!