ETV Bharat / state

ಪೊಲೀಸ್​ ಇನ್ಸ್​ಪೆಕ್ಟರ್​ ವಿರುದ್ದ ಪೊಲೀಸರಿಂದಲೇ ದೂರು!! - Raghavendra babu

ಠಾಣೆಯ ಕೆಲ ಸಿಬ್ಬಂದಿಗಳು ಕಳೆದ ಮೂರು ವರ್ಷಗಳಿಂದ ಹೊಯ್ಸಳ ವಾಹನ ಕರ್ತವ್ಯದಲ್ಲಿ ಮುಂದುವರಿದಿದ್ದಾರೆ. ಇವರು ಠಾಣಾಧಿಕಾರಿಗೆ ಹಣ ಮಾಡಿಕೊಡುತ್ತಿರುವುದರಿಂದ ಬದಲಾವಣೆ ಮಾಡುತ್ತಿಲ್ಲ. ಠಾಣಾಧಿಕಾರಿ ರಾಘವೇಂದ್ರ ಬಾಬು ಅವರು ಸಿಬ್ಬಂದಿ ಜತೆ ಸೌಜನ್ಯಯುತವಾಗಿ ವರ್ತಿಸುವಂತೆ ಎಚ್ಚರಿಕೆ ನೀಡಬೇಕು. ಮುಖ್ಯಪೇದೆ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ವಿವರಿಸಲಾಗಿದೆ.

ಇನ್ಸ್​ಪೆಕ್ಟರ್​ ವಿರುದ್ದ ಪೊಲೀಸರಿಂದಲೇ ದೂರು
ಇನ್ಸ್​ಪೆಕ್ಟರ್​ ವಿರುದ್ದ ಪೊಲೀಸರಿಂದಲೇ ದೂರು
author img

By

Published : Nov 26, 2020, 3:49 AM IST

ಬೆಂಗಳೂರು: ಠಾಣೆಯಲ್ಲಿ ಕೆಲಸ ನಿರ್ವಹಿಸುವ ಪೊಲೀಸ್ ಸಿಬ್ಬಂದಿಗಳನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿ, ಮಾನಸಿಕ ಹಿಂಸೆ ನೀಡುತ್ತಿದ್ದಾರೆ ಎಂದು ಆರೋಪಿಸಿ ಠಾಣೆಯ ಇನ್ಸ್​ಪೆಕ್ಟರ್​ ವಿರುದ್ಧ ಪೊಲೀಸ್​ ಸಹದ್ಯೋಗಿಗಳೇ ಜಂಟಿ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.

ಇನ್‌ಸ್ಪೆಕ್ಟರ್ ರಾಘವೇಂದ್ರ ಬಾಬು ಎಂಬುವವರು ಜನವರಿ 18ರಂದು ಕೊಡಿಗೇಹಳ್ಳಿ ಠಾಣೆಗೆ ವರ್ಗಾವಣೆಯಾಗಿ ಬಂದಿದ್ದಾರೆ. ಮುಖ್ಯಪೇದೆಯೊಬ್ಬರ ಚಾಡಿ ಮಾತನ್ನು ಕೇಳಿಕೊಂಡು ಸಿಬ್ಬಂದಿಗಳಿಗೆ ಅವಾಚ್ಯ ಪದಗಳಿಂದ ನಿಂದಿಸುತ್ತಿದ್ದಾರೆ. ಠಾಣೆಗೆ ಬರುವ ದೂರುದಾರರಿಗೂ ಭೀತಿ ಹುಟ್ಟಿಸಿ, ಹಣಕ್ಕೆ ಬೇಡಿಕೆ ಇಡುತ್ತಿದ್ದಾರೆ. ಮುಖ್ಯಪೇದೆ ರಂಗದಾಮಯ್ಯ ಅವರು ಕುಮ್ಮಕ್ಕು ನಡೆಸುತ್ತ ಕಳೆದ ನಾಲ್ಕು ವರ್ಷಗಳಿಂದ ತನಿಖಾ ಬರಹಗಾರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಬೇರೆ ಸಿಬ್ಬಂದಿಗೆ ಅವಕಾಶ ನೀಡುತ್ತಿಲ್ಲ. ಇದೇ ಕಾರಣದಿಂದ ಕೊಡಿಗೇಹಳ್ಳಿ ಪೊಲೀಸ್ ಠಾಣೆ ಭ್ರಷ್ಟಚಾರದ ಕೂಪವಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಜಂಟಿ ಪೊಲೀಸ್​ ಆಯುಕ್ತರಿಗೆ ನೀಡಿರುವ ದೂರು ಪ್ರತಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.