ಬೆಂಗಳೂರು: ಕೋವಿಡ್ -19ರ ಸಂಕಷ್ಟ ಸಮಯದಲ್ಲಿ ಹೆಚ್ಚುವರಿ ಮಾನವ ಸಂಪನ್ಮೂಲ ಹೊಂದಾಣಿಕೆ ಕಷ್ಟ ಹಾಗೂ ಹೊಸ ಠಾಣೆಗಳು, ಮತ್ತು ಔಟ್ ಪೋಸ್ಟ್ಗಳಿಗೆ ಬೇಡಿಕೆ ಸಲ್ಲಿಸುವುದು ನಿರರ್ಥಕ ಎಂದು ಡಿಜಿ - ಐಜಿಪಿ ಪ್ರವೀಣ್ ಸೂದ್ ಕಚೇರಿ ನೋಟಿಸ್ ಮೂಲಕ ಸುತ್ತೋಲೆ ಹೊರಡಿಸಿದ್ದಾರೆ.
ಬೆಂಗಳೂರು ಠಾಣಾ ವ್ಯಾಪ್ತಿ ಮತ್ತು ಮಾನವ ಸಂಪನ್ಮೂಲದ ಮರು ಸಂಘಟನೆಗೆ ಒತ್ತು ನೀಡಲು ಪ್ರವೀಣ್ ಸೂದ್ ಸೂಚನೆ ನೀಡಿದ್ದಾರೆ. ಕಳೆದ ಕೆಲ ದಶಕಗಳಿಂದ ಖಾಲಿ ಸ್ಥಾನ ತುಂಬದ ಪೊಲೀಸ್ ಠಾಣೆಗಳು ಇವೆ. ಅಲ್ಲದೇ ಠಾಣಾ ವ್ಯಾಪ್ತಿ ಚಿಕ್ಕದಿದ್ರೂ ಆ ಠಾಣೆಯಲ್ಲಿ ಕೆಲಸ ಮಾಡುವ ಸಿಬ್ಬಂದಿ ಹೆಚ್ಚಿದ್ದಾರೆ. ಇಲ್ಲದಿದ್ದರೆ ಠಾಣಾ ವ್ಯಾಪ್ತಿ ದೊಡ್ಡದಿದ್ದು, ಸಿಬ್ಬಂದಿ ಕಡಿಮೆ ಇರೋ ಉದಾಹರಣೆಗಳು ಇವೆ. ಪ್ರಸ್ತುತ ವರ್ಷದಲ್ಲಿ ಮಾನವ ಸಂಪನ್ಮೂಲದ ಸಮಸ್ಯೆಗಳನ್ನು ಸರಿ ಮಾಡಬೇಕಿದೆ.
ಈಗಾಗಲೇ ಬೆಂಗಳೂರು ನಗರದಲ್ಲಿ ಈ ಚಟುವಟಿಕೆ ಶುರುವಾಗಿದ್ದು, ಇತರೆಡೆಯಲ್ಲೂ ಪ್ರಾರಂಭಿಸಬೇಕಿದೆ. ಈ ಮೂಲಕ ಕೆಲಸದಲ್ಲಿ ದಕ್ಷತೆ ತರುವಲ್ಲಿ ಅಧಿಕಾರಿಗಳು ಶ್ರಮಿಸಬೇಕಿದೆ ಎಂದು ಆಡಳಿತ ವಿಭಾಗದ ಅಧಿಕಾರಿಗಳಿಗೆ ಡಿಜಿಪಿ ಪ್ರವೀಣ್ ಸೂದ್ ಸೂಚನೆ ನೀಡಿದ್ದಾರೆ.