ETV Bharat / state

ಸಾರ್ವಜನಿಕರಿಂದ ಹಣ ವಸೂಲಿ ಮಾಡಿದರೆ ಕಾನೂನು ಕ್ರಮ: ಗಸ್ತು ಸಿಬ್ಬಂದಿಗೆ ಹಿರಿಯ ಅಧಿಕಾರಿಗಳ ಖಡಕ್ ಸೂಚನೆ

author img

By

Published : Dec 15, 2022, 5:02 PM IST

ರಾತ್ರಿ ವೇಳೆ ಹೊಯ್ಸಳ ಹಾಗೂ ಚೀತಾ ವಾಹನದಲ್ಲಿ ಗಸ್ತು ನಡೆಸುವ ಪೊಲೀಸ್​ ಸಿಬ್ಬಂದಿ, ಪುಟ್​ಬಾತ್​ ವ್ಯಾಪಾರಿಗಳ ಬಳಿ ಹಣ ಪಡೆಯಬಾರದು. ಜೊತೆಗೆ ಸುಖಾಸುಮ್ಮನೆ ವಾಹನ ಸವಾರರನ್ನು ಅಡ್ಡಗಟ್ಟಿ ಅನುಚಿತವಾಗಿ ವರ್ತಿಸಿ ಅವರಿಂದ ಹಣ ಪಡೆಯಬಾರದು. ಸಾರ್ವಜನಿಕರ ಜೊತೆ ಸೌಹಾರ್ದತೆಯಿಂದ ವರ್ತಿಸಿ, ಮಹಿಳೆಯರು ಮಕ್ಕಳು ಓಡಾಡುವ ವಾಹನಗಳನ್ನ ಸುಖಾಸುಮ್ಮನೆ ತಡೆಯದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಸುತ್ತೋಲೆ ಹೊರಡಿಸಿದ್ದಾರೆ.

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ

ಬೆಂಗಳೂರು: ಸಂಪಿಗೆಹಳ್ಳಿ ಠಾಣೆಯ ಹೊಯ್ಸಳ ಪೊಲೀಸರ ದಂಪತಿಯಿಂದ ಹಣ ವಸೂಲಿ ಮಾಡಿದ ಪ್ರಕರಣ ಇಡೀ ಪೊಲೀಸ್ ಇಲಾಖೆ ತಲೆತಗ್ಗಿಸುವಂತೆ ಮಾಡಿತ್ತು. ತಪ್ಪಿಗೆ ಪ್ರಾಯಶ್ಚಿತ್ತ ಎನ್ನುವಂತೆ ಇಬ್ಬರು ಸಿಬ್ಬಂದಿಯನ್ನ ಅಮಾನತು ಕೂಡ ಮಾಡಲಾಗಿತ್ತು. ಇನ್ನು ಸಾಮಾಜಿಕ ಜಾಲತಾಣ ಮತ್ತು ಮಾಧ್ಯಮದಲ್ಲಿ ಈ ಕುರಿತು ಸುದ್ದಿ ಪ್ರಸಾರವಾದ ಮೇಲೆ ಹಿರಿಯ ಪೊಲೀಸ್ ಅಧಿಕಾರಿಗಳು ಸುತ್ತೋಲೆ ಹೊರಡಿಸಿದ್ದಾರೆ.

ರಾತ್ರಿ ವೇಳೆ, ಹೊಯ್ಸಳ ಹಾಗೂ ಚೀತಾ ವಾಹನದಲ್ಲಿ ಗಸ್ತು ನಡೆಸುವ ಪೊಲೀಸ್ ಮತ್ತು ಸಿಬ್ಬಂದಿ ಪುಟ್​ಪಾತ್​​​ ವ್ಯಾಪಾರಿಗಳ ಬಳಿ ಹಣ ಪಡೆಯಬಾರದು. ಜೊತೆಗೆ ಸುಖಾಸುಮ್ಮನೆ ವಾಹನ ಸವಾರರನ್ನು ಅಡ್ಡಗಟ್ಟಿ ಅನುಚಿತವಾಗಿ ವರ್ತಿಸಿ ಅವರಿಂದ ಹಣ ವಸೂಲಿ ಮಾಡಬಾರದು. ಸಾರ್ವಜನಿಕರ ಜೊತೆ ಸೌಹಾರ್ದತೆಯಿಂದ ವರ್ತಿಸಿ, ಮಹಿಳೆಯರು ಮಕ್ಕಳು ಓಡಾಡುವ ವಾಹನಗಳನ್ನ ಸುಖಾಸುಮ್ಮನೆ ತಡೆಯದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

ಅಧಿಕಾರಿ ಸಿಬ್ಬಂದಿ ಈ ರೀತಿಯ ವರ್ತನೆಯಿಂದ ಇಲಾಖೆಗೆ ಕೆಟ್ಟ ಹೆಸರು ಬರಲಿದೆ. ಅಲ್ಲದೇ ಈ ನಿಯಮಗಳನ್ನ ಮೀರಿ ಯಾರಾದರೂ ಹಣ ವಸೂಲಿ ಮಾಡಿದರೆ ಅಂತಹವರ ವಿರುದ್ಧ ಶಿಸ್ತುಕ್ರಮ ಜರುಗಿಸುವ ಎಚ್ಚರಿಕೆಯನ್ನೂ ಹಿರಿಯ ಅಧಿಕಾರಿಗಳು ನೀಡಿದ್ದಾರೆ.

ಓದಿ: ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಹುಸಿ ಬಾಂಬ್ ಬೆದರಿಕೆ ಟ್ವೀಟ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.