ETV Bharat / state

ರಮೇಶ್ ಜಾರಕಿಹೊಳಿ ಸೇರಿ ಮೂವರಿಗೆ ನೋಟಿಸ್: ಸೋಮವಾರ ಪ್ರತ್ಯಕ್ಷವಾಗ್ತಾಳಾ ಸಿಡಿ ಲೇಡಿ? - cd case

ಕಬ್ಬನ್ ಪಾರ್ಕ್ ಪೊಲೀಸರು ರಮೇಶ್ ಜಾರಕಿಹೊಳಿ, ಶಂಕಿತ ಆರೋಪಿ ಶ್ರವಣ್ ಸಹೋದರ ಚೇತನ್ ಹಾಗೂ ನರೇಶ್ ಗೌಡ ಪತ್ನಿಗೆ ಸೋಮವಾರ ಬೆಳಗ್ಗೆ 10 ಗಂಟೆಗೆ ಆಡುಗೋಡಿಯ ಟೆಕ್ನಿಕಲ್ ಸೆಂಟರ್​ಗೆ ಆಗಮಿಸುವಂತೆ ನೋಟಿಸ್ ಜಾರಿ ಮಾಡಿದ್ದಾರೆ.

police notice to ramesh jarakihli
ರಮೇಶ್ ಜಾರಕಿಹೊಳಿ
author img

By

Published : Mar 28, 2021, 9:20 PM IST

Updated : Mar 28, 2021, 9:32 PM IST

ಬೆಂಗಳೂರು: ರಾಜ್ಯದಲ್ಲಿ ತೀವ್ರ ಸಂಚಲನ ಮೂಡಿಸಿರುವ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ವಿಚಾರಣೆಗೆ ಹಾಜರಾಗುವಂತೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸೇರಿ ಮೂವರಿಗೆ ನೋಟಿಸ್ ನೀಡಲಾಗಿದೆ.

ರಮೇಶ್ ಜಾರಕಿಹೊಳಿ, ಶಂಕಿತ ಆರೋಪಿ ಶ್ರವಣ್ ಸಹೋದರ ಚೇತನ್ ಹಾಗೂ ನರೇಶ್ ಗೌಡ ಪತ್ನಿಗೆ ಸೋಮವಾರ ಬೆಳಗ್ಗೆ 10 ಗಂಟೆಗೆ ಆಡುಗೋಡಿಯ ಟೆಕ್ನಿಕಲ್ ಸೆಂಟರ್​ಗೆ ಆಗಮಿಸುವಂತೆ ಕಬ್ಬನ್ ಪಾರ್ಕ್ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ.

ಓದಿ:ಡಿಕೆಶಿ ವಿರುದ್ಧ ದೂರು ಕೊಡುವ ಸಂಬಂಧ, ವಕೀಲರೊಂದಿಗೆ ಚರ್ಚೆ ನಡೆಸುತ್ತಿರುವ ರಮೇಶ್ ಜಾರಕಿಹೊಳಿ

ಕೆಲಸ ಕೊಡಿಸುವುದಾಗಿ ಆಮಿಷವೊಡ್ಡಿ ಲೈಂಗಿಕವಾಗಿ ಬಳಸಿಕೊಂಡಿದ್ದಾರೆ ಎಂದು ಆರೋಪಿ‌ಸಿ ಯುವತಿ ಪರ ವಕೀಲ ಜಗದೀಶ್ ದೂರು ನೀಡಿದ ಮೇರೆಗೆ ಕಬ್ಬನ್ ಪಾರ್ಕ್ ಪೊಲೀಸರು ರಮೇಶ್ ಜಾರಕಿಹೊಳಿ ವಿರುದ್ಧ ಆತ್ಯಾಚಾರ ಪ್ರಕರಣ ದಾಖಲಿಸಿಕೊಂಡಿದ್ದರು.‌ ಈ ಸಂಬಂಧ ನಾಳೆ ಬೆಳಗ್ಗೆ 10 ಗಂಟೆಗೆ ಹಾಜರಾಗುವಂತೆ ನೊಟೀಸ್ ನೀಡಲಾಗಿದೆ‌. ಮತ್ತೊಂದೆಡೆ ಶಂಕಿತ ಆರೋಪಿಗಳ ಕುಟುಂಬಸ್ಥರು ವಿಚಾರಣೆಗೆ ಬರುವಂತೆ ತಾಕೀತು ಮಾಡಲಾಗಿದೆ.

ಸೋಮವಾರ ಪ್ರತ್ಯಕ್ಷವಾಗ್ತಾಳಾ ಸಿಡಿ ಲೇಡಿ ?

ಸರಣಿ ವಿಡಿಯೋ ಹಾಗೂ‌ ಆಡಿಯೋ ಹರಿಬಿಟ್ಟು ತನ್ನ ತಪ್ಪಿಲ್ಲ ಎಂದು ಸರ್ಮಥಿಸಿಕೊಳ್ಳುತ್ತಿರುವ ಸಿಡಿ ಯುವತಿ ಸೋಮವಾರ ಪ್ರತ್ಯಕ್ಷವಾಗುವ ಸಾಧ್ಯತೆಯಿದೆ. ಇದಕ್ಕೆ ಪೂರಕವೆಂಬಂತೆ ಯುವತಿ ಪರ ವಕೀಲರು ಮ್ಯಾಜಿಸ್ಟ್ರೇಟ್ ನ್ಯಾಯಾಧೀಶರ ಮುಂದೆ ಹಾಜರಾಗುತ್ತಾಳೆ ಎಂದು ತಿಳಿಸಿದ್ದಾರೆ. ಆದರೆ ನಾಳೆ ಸರ್ಕಾರಿ ರಜೆ ಇರುವುದರಿಂದ ಕೋರ್ಟ್ ಮುಂದೆ ಹಾಜರಾಗುವ ಸಾಧ್ಯತೆ ವಿರಳ. ಹೀಗಾಗಿ ಜಡ್ಜ್ ಮನೆ ಮುಂದೆ ಯುವತಿ ಹಾಜರಾಗಿ ಹೇಳಿಕೆ ನೀಡುವ ಸಾಧ್ಯತೆಯಿದೆ‌.

Last Updated : Mar 28, 2021, 9:32 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.