ಬೆಂಗಳೂರು: ಕಾಶ್ಮೀರ ಮುಕ್ತಿ ಎಂದು ಟೌನ್ ಹಾಲ್ ಬಳಿ ಭಿತ್ತಿಪತ್ರ ಪ್ರದರ್ಶನ ಮಾಡಿದ ಆರ್ದ್ರಾ, ಸದ್ಯ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇರುವ ಕಾರಣ ಜಾಮೀನು ಕೋರಿ ಆರ್ದ್ರಾ ಪರ ವಕೀಲರು 6ನೇ ಎಸಿಎಂಎಂ ನ್ಯಾಯಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.
ಇಂದು ನ್ಯಾಯಾಲಯ ಅರ್ಜಿ ವಿಚಾರಣೆ ನಡೆಸಿದಾಗ ಪೊಲೀಸರ ಪರ ವಕೀಲರು ಆರ್ದ್ರಾಗೆ ಜಾಮೀನು ನೀಡಬಾರದು. ನಮಗೆ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ಬೇಕೆಂದು ಮನವಿ ಮಾಡಿದರು. ಹೀಗಾಗಿ ನ್ಯಾಯಾಲಯ ಸರ್ಕಾರಿ ವಕೀಲರಿಗೆ ಆಕ್ಷೇಪಣೆ ಸಲ್ಲಿಕೆ ಮಾಡಲು ಸಮಾಯವಾಕಾಶ ನೀಡಿ ಅರ್ಜಿ ವಿಚಾರಣೆ ಮುಂದೂಡಿಕೆ ಮಾಡಿದೆ.
ಪಾಕ್ ಪರ ಘೋಷಣೆ ಕೂಗಿದ ಅಮೂಲ್ಯ ವಿರುದ್ಧ ಹಿಂದು ಪರ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿದ್ದ ವೇಳೆ ಆರ್ದ್ರಾ Free Kashmir ಎಂದು ಟೌನ್ ಹಾಲ್ ಬಳಿ ಫಲಕ ತೋರಿಸಿದ್ದಳು.
ಹೀಗಾಗಿ ಆರ್ದ್ರಾ ವಿರುದ್ಧ ಎಸ್. ಜೆ. ಪಾರ್ಕ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲು ಮಾಡಲಾಗಿತ್ತು, ಸದ್ಯ ಆಕೆ ನ್ಯಾಯಾಂಗ ಬಂಧನದಲ್ಲಿದ್ದಾಳೆ. ಮತ್ತೊಂದೆಡೆ ಅಮೂಲ್ಯ ಹಾಗೂ ಆರ್ದ್ರಾ ಇಬ್ಬರು ಸ್ನೇಹಿತರು ಆಗಿದ್ದು, ಅಮೂಲ್ಯ ಅವರನ್ನ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಹಾಗೆ ಆರ್ದ್ರಾನನ್ನು ಕೂಡ ವಿಚಾರಣೆ ನಡೆಸುವ ಸಾಧ್ಯತೆ ಇದೆ.