ಬೆಂಗಳೂರು: ನಾಳೆ ನಾಡಿನೆಲ್ಲೆಡೆ ಮೊಹರಂ ದಿನ ಆಚರಣೆ ಹಿನ್ನೆಲೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಖಾಕಿ ಕಣ್ಗಾವಲು ಇರಿಸಲಾಗಿದೆ.
ರಾಜ್ಯಾದ್ಯಂತ ಮೊಹರಂ ಆಚರಣೆ ಹಿನ್ನೆಲೆ ಶಾಲಾ ಕಾಲೇಜುಗಳಿಗೆ, ಕಚೇರಿಗಳಿಗೆ ಮುಂತಾದ ಎಲ್ಲಾ ಸಾರ್ವಜನಿಕ ಸೇವೆಗೆ ರಜಾ ಕೂಡ ಘೋಷಣೆ ಮಾಡಲಾಗಿದೆ. ಸಿಲಿಕಾನ್ ಸಿಟಿಯಲ್ಲಿ ಕೂಡ ಮುಸ್ಲಿಂ ಭಾಂದವರು ಸಂಭ್ರಮದಿಂದ ಹಬ್ಬವನ್ನ ಆಚರಣೆ ಮಾಡ್ತಾರೆ. ಈ ವೇಳೆ ಯಾವುದೇ ಅಹಿತಕರ ಘಟನೆ ನಡೆಯದ ರೀತಿ ಮುಂಜಾಗೃತ ಕ್ರಮವಾಗಿ ನಗರ ಪೊಲಿಸ್ ಆಯುಕ್ತ ಭಾಸ್ಕರ್ ರಾವ್ ಎಚ್ಚರಿಕೆ ವಹಿಸಿದ್ದಾರೆ.
ಹೀಗಾಗಿ ಹೆಚ್ಚುವರಿ ಪೊಲೀಸ್ ಆಯುಕ್ತರು, ಟ್ರಾಫಿಕ್ ಆಯುಕ್ತರು, ಏಳು ವಿಭಾಗದ ಡಿಸಿಪಿಗಳು,ಇನ್ಸ್ಪೆಕ್ಟರ್ಗಳು, ಕಾನ್ಸ್ಟೇಬಲ್, ಕೆಎಸ್ಆರ್ಪಿ ತುಕಡಿ, ಹೊಯ್ಸಳ ಸಿಬ್ಬಂದಿ ಗಸ್ತು ತಿರುಗಲಿದ್ದಾರೆ. ಅದರಲ್ಲೂ ಶಿವಾಜಿನಗರ, ಕಮರ್ಷಿಯಲ್ ಸ್ಟ್ರೀಟ್, ಭಾರತಿನಗರ, ಮೆಜೆಸ್ಟಿಕ್ ಈ ವ್ಯಾಪ್ತಿಯಲ್ಲಿ ಹೆಚ್ಚಿನ ರೀತಿಯಲ್ಲಿ ಪೊಲೀಸರು ನಿಗಾ ವಹಿಸಲಿದ್ದಾರೆಂದು ನಗರ ಆಯುಕ್ತ ತಿಳಿಸಿದರು.