ETV Bharat / state

ವಿದೇಶಿ ಮಾದಕ ದಂಧೆಕೋರರ ಆಸ್ತಿ ಮುಟ್ಟುಗೋಲು ಹಾಕಿಕೊಂಡ ಬೆಂಗಳೂರು ಪೊಲೀಸರು - ಆಸ್ತಿ ಮುಟ್ಟುಗೋಲು

ಬೆಂಗಳೂರು ಪೊಲೀಸರು ವಿದೇಶಿ ಮೂಲದ ಮಾದಕ ದಂಧೆಕೋರನಿಗೆ ಸಂಬಂಧಿಸಿದ ಹಣವನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ.

accused
ವಿದೇಶಿ ಆರೋಪಿ
author img

By ETV Bharat Karnataka Team

Published : Jan 12, 2024, 2:45 PM IST

ಬೆಂಗಳೂರು: ಮಾದಕ ವಸ್ತು ಸರಬರಾಜುದಾರರ ವಿರುದ್ಧ ಸದಾ ಕಾರ್ಯಾಚರಣೆಯಲ್ಲಿರುವ ಬೆಂಗಳೂರು ಪೊಲೀಸರು ರಾಷ್ಟ್ರದಲ್ಲೇ ಮೊದಲ ಬಾರಿಗೆ ವಿದೇಶಿ ಮೂಲದ ಮಾದಕ ದಂಧೆಕೋರನಿಗೆ ಸಂಬಂಧಿಸಿದ ಹಣವನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ. ನೈಜೀರಿಯಾ ಮೂಲದ ಪೀಟರ್ ಇಕೆಡಿ ಬೆಲನ್ವು (38) ಎಂಬ ಮಾದಕ ಸರಬರಾಜುದಾರನಿಗೆ ಸಂಬಂಧಿಸಿದ 12.60 ಲಕ್ಷ ರೂ. ನಗದನ್ನು ಸಿಸಿಬಿಯ ಮಾದಕ ದ್ರವ್ಯ ನಿಗ್ರಹ ದಳದ ಪೊಲೀಸರು ಮುಟ್ಟುಗೋಲು ಹಾಕಿಕೊಂಡಿದ್ದಾರೆ.

2023ನೇ ಸಾಲಿನ ನವೆಂಬರ್​ ತಿಂಗಳಲ್ಲಿ ವಿದ್ಯಾರಣ್ಯಪುರ ಠಾಣಾ ಪೊಲೀಸರು ಆರೋಪಿ ಪೀಟರ್ ಇಕೆಡಿ ಬೆಲನ್ವುನನ್ನು ಬಂಧಿಸಿದ್ದರು. ರೂಢಿಗತ ಡ್ರಗ್ ಪೆಡ್ಲರ್ ಆಗಿರುವ ಆರೋಪಿಯ ಬಳಿ ನಗದು ಹಣ ಮತ್ತು ವಿವಿಧ ಬ್ಯಾಂಕ್‌ಗಳ ಪಾಸ್‌ಬುಕ್, ಡೆಬಿಟ್ ಕಾರ್ಡ್‌ಗಳು ಪತ್ತೆಯಾಗಿದ್ದವು. ಈ ಕುರಿತು ಪ್ರಕರಣದ ತನಿಖೆಯನ್ನು ಮುಂದುವರಿಸಿದ ಸಿಸಿಬಿ ಪೊಲೀಸರು ತನಿಖಾಧಿಕಾರಿಗಳಿಗಿರುವ ಪ್ರದತ್ತ ಅಧಿಕಾರವನ್ನು ಬಳಸಿ ಆರೋಪಿಯ ಪತ್ನಿಯ ಎರಡು ಬ್ಯಾಂಕ್ ಖಾತೆಯಿಂದ 2.55 ಲಕ್ಷ ರೂ. ಇತರ ಹೆಸರಿನಲ್ಲಿದ್ದ 5 ಬ್ಯಾಂಕ್ ಖಾತೆಗಳಲ್ಲಿದ್ದ 4.90 ಲಕ್ಷ ಸೇರಿ 7 ಬ್ಯಾಂಕ್ ಖಾತೆಗಳಲ್ಲಿ ಒಟ್ಟು 12.60 ಲಕ್ಷ ರೂ. ಹಣವನ್ನ ಮುಟ್ಟುಗೋಲು ಹಾಕಿಕೊಂಡಿದ್ದಾರೆ. ನಂತರ ಈ ಆದೇಶವನ್ನು ಎನ್.ಡಿ.ಪಿಎಸ್ ಕಾಯ್ದೆ 5(ಎ), ಕಲಂ 68 (ಎಫ್) (2)ರಡಿ ಈ ಮುಟ್ಟುಗೋಲು ಆದೇಶ ಅನುಮೋದಿಸಲ್ಪಟ್ಟಿದೆ ಎಂದು ತಿಳಿದು ಬಂದಿದೆ.

ಆರೋಪಿಯು 2018 ರಲ್ಲಿ ವೈದ್ಯಕೀಯ ವೀಸಾದ ಆಧಾರದಲ್ಲಿ ಭಾರತಕ್ಕೆ ಬಂದಿದ್ದು, ನಂತರ 2022ರಲ್ಲಿ ಮಣಿಪುರ ಮೂಲದವಳನ್ನು ಮದುವೆಯಾಗಿದ್ದ. ಆಕೆಯ ಹೆಸರಿನಲ್ಲಿ ಬೆಂಗಳೂರು ನಗರದಲ್ಲಿ ಎರಡು ಬ್ಯಾಂಕ್ ಖಾತೆಗಳನ್ನು ಹಾಗೂ ನಕಲಿ ದಾಖಲಾತಿಗಳನ್ನು ನೀಡಿ ಇತರರ ಹೆಸರಿನಲ್ಲಿ ಐದು ಬ್ಯಾಂಕ್ ಖಾತೆಗಳು ಸೇರಿದಂತೆ ಒಟ್ಟು ಏಳು ಬ್ಯಾಂಕ್ ಖಾತೆಗಳನ್ನು ಹೊಂದಿದ್ದ. ಈ ಖಾತೆಗಳಿಂದ ಗೂಗಲ್ ಪೇ & ಪೋನ್ ಪೇ ಮೂಲಕ ಡ್ರಗ್ ಪೆಡ್ಲಿಂಗ್​ ಹಣದ ವಹಿವಾಟನ್ನು ನಿರ್ವಹಿಸುತ್ತಿದ್ದ ಎಂದು ಪೊಲೀಸರ ತನಿಖೆಯಿಂದ ತಿಳಿದು ಬಂದಿತ್ತು.

ಇದನ್ನೂ ಓದಿ: ಉದ್ಯಮಿ ಅಪಹರಿಸಿ ಸುಲಿಗೆ: ಯುಪಿಎಸ್​ಸಿ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದ ಯುವಕ ಸೆರೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.