ಬೆಂಗಳೂರು: ಬಟ್ಟೆ ಅಂಗಡಿಯಲ್ಲಿ ರೇಷ್ಮೆ ಸೀರೆ ಕಳ್ಳತನ ಮಾಡಿದ್ದ ಆರೋಪಿಯ ಬಂಧನ ಮಾಡುವಲ್ಲಿ ಉತ್ತರ ವಿಭಾಗದ ಪೊಲೀಸರು ಯಶಸ್ವಿಯಾಗಿದ್ದಾರೆ.
ರವಿಪ್ರಕಾಶ್ ಎಂಬಾತನೆ ಬಂಧಿತ ಆರೋಪಿ. ಯಶವಂತಪುರ ಪೊಲೀಸ್ ಠಾಣಾ ವ್ಯಾಪ್ತಿಯ ವಿನೂತನ ಸಿಲ್ಕ್ ಅಂಗಡಿಯನ್ನು ಮುಚ್ಚಿ ಮಾಲೀಕರು ತೆರಳಿದ್ದರು. ಹೊಂಚು ಹಾಕಿ ಕಾಯುತ್ತಿದ್ದ ಕಳ್ಳ ಕಿಟಕಿಯ ಸರಳನ್ನು ಕತ್ತರಿಸಿ ಅಂಗಡಿಯಲ್ಲಿದ್ದ ಸುಮಾರು 10 ಲಕ್ಷ ರೂ. ಬೆಲೆ ಬಾಳುವ ರೇಷ್ಮೆ ಸೀರೆ ಮತ್ತು ನಗದು ಕಳವು ಮಾಡಿದ್ದಾನೆ.
ಯಶವಂತಪುರ ಪೊಲೀಸರು ಕಾರ್ಯಚರಣೆ ಶುರು ಮಾಡಿ ಚಿಕ್ಕಬಾಣಾವಾರ ಬಳಿ ಇದ್ದ ಆರೋಪಿ ರವಿ ಪ್ರಕಾಶ್ ನನ್ನು ಬಂಧಿಸಿ 67 ರೇಷ್ಮೆ ಸೀರೆ ವಶಪಡಿಸಿಕೊಂಡಿದ್ದಾರೆ. ಆರೋಪಿಯನ್ನ ವಿಚಾರಣೆಗೆ ಒಳಪಡಿಸಿದಾಗ 30 ವರ್ಷಗಳ ಹಿಂದೆ ಗೋವಾ ರಾಜ್ಯಕ್ಕೆ ಕಾಫಿ ಎಸ್ಟೇಟ್ ನಲ್ಲಿ ಕೂಲಿ ಕೆಲಸಕ್ಕೆ ಹೋಗಿ ಅಲ್ಲಿ ಜೂಜಾಟ ಮತ್ತು ದುಶ್ಚಟ ವ್ಯಸನಿಯಾಗಿದ್ದ. ಕೆಲಸದಿಂದ ಬರುತ್ತಿದ ಹಣ ಸಾಕಾಗದೇ ಗೋವಾ ರಾಜ್ಯದ ಬೇರೆ ಬೇರೆ ಪ್ರದೇಶಗಳಲ್ಲಿ ರಾತ್ರಿ ವೇಳೆ ಬೀಗ ಹಾಕಿರುವ ಅಂಗಡಿ ಶೆಟರ್, ಕಿಟಕಿ ಮುರಿದು ಹಣ ಮತ್ತು ಇತರೆ ವಸ್ತು ಕಳವು ಮಾಡಿದ್ದು, ಸುಮಾರು 14 ಪ್ರಕರಣಗಳು ಈತನ ಮೇಲಿರುತ್ತದೆ.
1989-2010 ರವರೆಗೆ ಶಿಕ್ಷೆಯಾಗಿ ಗೋವಾ ಜೈಲಿನಲ್ಲಿ ಕಾರಾಗೃಹ ವಾಸ ಅನುಭವಿಸಿ 2010 ರಲ್ಲಿ ಬಿಡುಗಡೆಯಾಗಿ ಮತ್ತೆ ಬೆಂಗಳೂರು ಬಂದಿದ್ದನು. ಆಟೋ ಓಡಿಸಿಕೊಂಡು ಜೀವನ ಮಾಡ್ತ 2017 ರಲ್ಲಿ ಜಾಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಾತ್ರಿ ಕಳವು ಪ್ರಕರಣದಲ್ಲಿ ಭಾಗಿಯಾಗಿದ್ದ. ತದ ನಂತರ 10 ದಿನ ಜೈಲು ಅನುಭವಿಸಿ ಜಾಮೀನಿನ ಮೇಲೆ ಹೊರ ಬಂದು ಮತ್ತೆ ತನ್ನ ಕೈಚಳಕ ತೊರಿದ್ದು, ಸದ್ಯ ಆರೋಪಿಯನ್ನ ಪೊಲೀಸರು ಬಂಧಿಸಿದ್ದಾರೆ.