ಬೆಂಗಳೂರು: ಪೊಲೀಸರು ನನ್ನ ಬಂಧಿಸಲು ಆಗಲ್ಲ ಎಂದು ವಿಡಿಯೋ ಹರಿಬಿಟ್ಟಿದ್ದ ಕುಖ್ಯಾತ ರೌಡಿಶೀಟರ್ ಸ್ಟಾರ್ ರಾಹುಲ್ ಕಾಲಿಗೆ ಗುಂಡು ಹಾರಿಸಿ ಹನುಮಂತನಗರ ಪೊಲೀಸರು ಬಂಧಿಸಿದ್ದಾರೆ.
ಕುಖ್ಯಾತ ರೌಡಿಶೀಟರ್ ಕುಳ್ಳು ರಿಜ್ವಾನ್ ಸಹಚರನಾಗಿರುವ ಸ್ಟಾರ್ ರಾಹುಲ್ 19 ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ. ಇಂದು ಆರೋಪಿ ಕೋಣನಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯ ದೊಡ್ಡ ಕಲ್ಲಸಂದ್ರ ಬಳಿ ಇರುವ ಮಾಹಿತಿ ಹನುಮಂತನಗರ ಪೊಲೀಸರಿಗೆ ಸಿಕ್ಕಿತ್ತು. ಈ ಹಿನ್ನೆಲೆ ಹನುಮಂತನಗರ ಠಾಣೆ ಸಬ್ ಇನ್ಸ್ಪೆಕ್ಟರ್ ಬಸವರಾಜ್ ಪಾಟೀಲ್ ಹಾಗೂ ತಂಡ ಆರೋಪಿ ಬಂಧಿಸಲು ತೆರಳಿತ್ತು.
ಓದಿ: ವ್ಯಕ್ತಿಯ ಒಪ್ಪಿಗೆ ಪಡೆಯದೇ ಬಲವಂತದ ಲಸಿಕೆ ಹಾಕುವಂತಿಲ್ಲ: ಸುಪ್ರೀಂಗೆ ಅಫಿಡವಿಟ್ ಸಲ್ಲಿಸಿದ ಕೇಂದ್ರ
ಬಂಧನದ ವೇಳೆ ಆರೋಪಿ ಸ್ಟಾರ್ ರಾಹುಲ್, ಹೆಡ್ ಕಾನ್ ಸ್ಟೇಬಲ್ ನಿಂಗಪ್ಪ ಮೇಲೆ ಡ್ರಾಗರ್ ನಿಂದ ಹಲ್ಲೆ ಮಾಡಿದ್ದ, ಈ ವೇಳೆ ಆತ್ಮರಕ್ಷಣೆಗೆ ಪಿಎಸ್ಐ ಬಸವರಾಜ್ ಪಾಟೀಲ್ ಆರೋಪಿ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ.
ಕುಳ್ಳು ರಿಜ್ವಾನ್ ಅತ್ಯಾಪ್ತ ಸಹಚರರಲ್ಲಿ ಒಬ್ಬನಾಗಿದ್ದ ಸ್ಟಾರ್ ರಾಹುಲ್ ಮೇಲೆ ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ 19ಕ್ಕೂ ಹೆಚ್ಚು ಪ್ರಕರಣಗಳು ಇವೆ. ಇತ್ತೀಚಿಗೆ ಇನ್ ಸ್ಟ್ರಾಗ್ರಾಮ್ ವಿಡಿಯೋ ಮಾಡಿದ್ದ ಸ್ಟಾರ್ ರಾಹುಲ್ ಸಿಸಿಬಿ ಹಾಗೂ ಬೆಂಗಳೂರು ಸೌತ್ ಪೊಲೀಸರು ತೀವ್ರ ಶೋಧ ಕಾರ್ಯಾಚರಣೆ ಕೈಗೊಂಡಿದ್ದಾರೆ.
ಆದರೂ ನಾನು ಸಿಗಲ್ಲ. ರೌಡಿಶೀಟರ್ ಸೈಕಲ್ ರವಿ ಆಪ್ತ ಬೇಕರಿ ರಘು ಹತ್ಯೆಗೆ ಯತ್ನಿಸಿದ್ದೇನೆ ಎಂದು ಸ್ಟಾರ್ ರಾಹುಲ್ ವಿಡಿಯೋದಲ್ಲಿ ಹೇಳಿ ಪೊಲೀಸರನ್ನ ಅವ್ಯಾಚ್ಯ ಶಬ್ದಗಳಿಂದ ನಿಂದಿಸಿದ್ದ. ಈ ಹಿನ್ನೆಲೆ ಪೊಲೀಸರು ಆರೋಪಿಗಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದರು.