ಬೆಂಗಳೂರು : ಲಾಕ್‌ಡೌನ್ ವೇಳೆ ಜಪ್ತಿಯಾದ ವಾಹನಗಳನ್ನ ಹಿಂಪಡೆಯಲು ಅವಕಾಶ ನೀಡಿದ ಹಿನ್ನೆಲೆ ಇಂದು ವಾಹನಗಳನ್ನ ಇಟ್ಟಿರುವ ಜಾಗಗಳಿಗೆ ಆಯಾ ವಿಭಾಗದ ಡಿಸಿಪಿಗಳು ತೆರಳಿ ಪರಿಶೀಲನೆ ನಡೆಸಿದ್ದಾರೆ.
ಸದ್ಯ ವಾಹನ ಹಿಂತಿರುಗಿಸುವ ಜವಾಬ್ದಾರಿಯನ್ನ ಆಯಾ ಠಾಣಾ ವ್ಯಾಪ್ತಿಯ ಸಬ್ ಇನ್ಸ್ಪೆಕ್ಟರ್ಗಳು ತೆಗೆದುಕೊಂಡಿದ್ದಾರೆ. ಪ್ರತಿ ವಾಹನಗಳ ದಾಖಲೆಗಳನ್ನು ಪರಿಶೀಲನೆ ನಡೆಸಿ ಮಾಲೀಕರಿಗೆ ವಾಹನ ನೀಡುತ್ತಿದ್ದಾರೆ.
ವಾಹನದ ಮಾಲೀಕರಿಗೆ ಪೊಲೀಸರು ವಾಹನ ನೀಡುವಾಗ ಕೆಲ ನಿಯಮಗಳನ್ನು ಅನುಸರಿಸಬೇಕಾಗಿದೆ. ದಂಡ ಪಾವತಿಸಿದ ಮಾಲೀಕರಿಗೆ ರಶೀದಿ ನೀಡಬೇಕಾಗಿದೆ. ಅಲ್ಲದೇ ದಂಡ ಪಾವತಿ ಮಾಡಲು ಇಚ್ಚಿಸದ ಮಾಲೀಕರಿಗೆ ವಾಹನ ಹಸ್ತಾಂತರಿಸುವಂತಿಲ್ಲ ಎಂಬ ನಿಯಮಗಳನ್ನೂ ಮಾಡಲಾಗಿದೆ. ಹಾಗೆ ಸಂಬಂಧಪಟ್ಟ ವಾಹನ ಮಾಲೀಕರ ದಾಖಲೆಗಳ ಪರಿಶೀಲನೆ ಕಡ್ಡಾಯವಾಗಿದೆ. ವಾಹನಗಳನ್ನ ವಾಪಸ್ ನೀಡುವ ಪ್ರಕ್ರಿಯೆಗಳನ್ನು ಠಾಣಾ ಹೊರಗಿನ ವಿಶಾಲವಾದ ಜಾಗದಲ್ಲಿ ನಡೆಸಬೇಕಾಗಿದೆ.
ವಾಹನ ಹಸ್ತಾಂತರಿಸುವಾಗ ಹ್ಯಾಂಡ್ ಗ್ಲೌಸ್ ಬಳಕೆ ಮಾಡುವುದು ಅನಿವಾರ್ಯ. ಸದ್ಯ ಮುಂಜಾನೆ 8 ರಿಂದ ಸಂಜೆ 8ರವರೆಗೆ ಈ ಪ್ರಕ್ರಿಯೆಗಳನ್ನು ಮುಗಿಸಿ ಠಾಣಾ ವ್ಯಾಪ್ತಿಯಲ್ಲಿ ಹಸ್ತಾಂತರ ಮಾಡಿದ ವಾಹನಗಳ ಮಾಹಿತಿಯನ್ನ ಕಂಟ್ರೋಲ್ ರೂಂಗೆ ನೀಡಬೇಕಾಗಿದೆ.