ETV Bharat / state

ಬೆಂಗಳೂರು: 2023ರಲ್ಲಿ 12,627 ಕೇಸ್; ಸೈಬರ್, ಕೊಲೆ, ರಾಬರಿ, ವಾಹನ ಕಳ್ಳತನ ಪ್ರಕರಣಗಳಲ್ಲಿ ಹೆಚ್ಚಳ - ಅಪರಾಧ ಕೃತ್ಯಗಳು

2023ರಲ್ಲಿ ಬೆಂಗಳೂರಿನಲ್ಲಿ ದಾಖಲಾಗಿದ್ದ 12,627 ಪ್ರಕರಣಗಳ ಪೈಕಿ 3,603 ಪ್ರಕರಣಗಳನ್ನು ಪೊಲೀಸರು ಭೇದಿಸಿದ್ದಾರೆ.

police-cracked-3603-cases-in-in-2023-in-bengaluru
ಬೆಂಗಳೂರು: 2023ರಲ್ಲಿ 3,603 ಪ್ರಕರಣ ಭೇದಿಸಿದ ಪೊಲೀಸರು, ಅಪರಾಧ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆ
author img

By ETV Bharat Karnataka Team

Published : Jan 3, 2024, 11:02 PM IST

Updated : Jan 4, 2024, 11:44 AM IST

ಬೆಂಗಳೂರು: ರಾಜಧಾನಿಯಲ್ಲಿ ವರ್ಷದಿಂದ ವರ್ಷಕ್ಕೆ ಅಪರಾಧ ಕೃತ್ಯಗಳು ಹೆಚ್ಚಾಗುತ್ತಿದೆ. 2023ರಲ್ಲಿ ದಾಖಲಾಗಿದ್ದ 12,627 ಪ್ರಕರಣಗಳ ಪೈಕಿ 3,603 ಪ್ರಕರಣಗಳನ್ನು ಪೊಲೀಸರು ಭೇದಿಸಿದ್ದಾರೆ. ಕೊಲೆ, ರಾಬರಿ, ಮನೆಗಳ್ಳತನ, ವಾಹನ ಕಳ್ಳತನ, ಅಪಹರಣ ಹಾಗೂ ಸೈಬರ್ ಅಪರಾಧ ಪ್ರಕರಣಗಳು ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿವೆ. ಸರಗಳ್ಳತನ, ಡ್ರಗ್ಸ್, ಜೂಜಾಟ ಪ್ರಕರಣಗಳಲ್ಲಿ ಕೊಂಚ ಮಟ್ಟದಲ್ಲಿ ಹೆಚ್ಚಳವಾಗಿದೆ.

2023ರಲ್ಲಿ 205 ಕೊಲೆ, 673 ರಾಬರಿ, 1692 ಮನೆಗಳ್ಳತನ ಹಾಗೂ 5909 ವಾಹನ ಕಳ್ಳತನ ಪ್ರಕರಣ ದಾಖಲಾಗಿವೆ. ಅದೇ ರೀತಿ 2022ರಲ್ಲಿ ಒಟ್ಟಾರೆ 9,254 ಪ್ರಕರಣ ದಾಖಲಾದರೆ ಕಳೆದ ವರ್ಷ 12,627 ಕೇಸ್​ಗಳು ದಾಖಲಾಗಿವೆ. 2022ರಲ್ಲಿ 173 ಕೊಲೆ ಪ್ರಕರಣ ದಾಖಲಾಗಿದ್ದರೆ, ಕಳೆದ ವರ್ಷ 207 ಕೊಲೆ ಪ್ರಕರಣಗಳು ದಾಖಲಾಗಿವೆ. 2022ಕ್ಕೆ ಹೋಲಿಸಿದರೆ 2023ರಲ್ಲಿ ಶೇ.31ರಷ್ಟು ಕೊಲೆ ಪ್ರಕರಣಗಳು ಹೆಚ್ಚಳವಾಗಿವೆ.

police-cracked-3603-cases-in-in-2023-in-bengaluru
ಪ್ರಕರಣಗಳ ಅಂಕಿ -ಅಂಶ

ಸ್ಥಳದಲ್ಲೇ ಪ್ರಚೋದನೆಗೆ ಒಳಗಾಗಿ ಹತ್ಯೆ, ಅನೈತಿಕ ಸಂಬಂಧ ಹಾಗೂ ಕೌಟುಂಬಿಕ ಕಲಹಗಳಿಂದ ಹತ್ಯೆ ನಡೆದಿವೆ. ಇನ್ನೂ ಕಳೆದ ವರ್ಷ 673 ರಾಬರಿ ಪ್ರಕರಣ ದಾಖಲಾಗಿದ್ದು, ಶೇ.41 ರಷ್ಟು ಹೆಚ್ಚಳವಾಗಿದೆ. ಒಟ್ಟು ರಾಬರಿ ಪ್ರಕರಣಗಳ ಪೈಕಿ 385 ಪ್ರಕರಣಗಳು ಮೊಬೈಲ್ ದೋಚಿದ ಪ್ರಕರಣಗಳೇ ಆಗಿವೆ. ಇನ್ನೂ ಕಳೆದ ವರ್ಷ 1,189 ಅಪಹರಣ ಪ್ರಕರಣ ದಾಖಲಾಗಿದ್ದು, 981 ಕೇಸ್​ಗಳನ್ನ ಭೇದಿಸಲಾಗಿದೆ. 2022ರಲ್ಲಿ 931 ಪ್ರಕರಣವಷ್ಟೇ ದಾಖಲಾಗಿತ್ತು. ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯ ಅಧಿಕವಾಗಿದ್ದು, 2022 ಹಾಗೂ 2023ರಲ್ಲಿ ಅನುಕ್ರಮವಾಗಿ 2630 ಹಾಗೂ 3260 ಪ್ರಕರಣ ದಾಖಲಾಗಿವೆ.

1135 ಲೈಂಗಿಕ ದೌರ್ಜನ್ಯ ಪ್ರಕರಣಗಳ ಪೈಕಿ ಪತಿ ಅಥವಾ ಸಂಬಂಧಿಕರಿಂದ 696 ದೌರ್ಜನ್ಯ ಪ್ರಕರಣಗಳು ವರದಿಯಾಗಿವೆ. ಕಳೆದ ವರ್ಷ ಮಕ್ಕಳ ಮೇಲೆ ದೌರ್ಜನ್ಯ ಪ್ರಕರಣ 631 ರಷ್ಟಾಗಿದೆ. ಇನ್ನು ಸೈಬರ್ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿದ್ದು, 2022ರಲ್ಲಿ 9,940 ಸೈಬರ್ ಕೇಸ್ ದಾಖಲಾಗಿದ್ದರೆ 2023ರಲ್ಲಿ 17,623 ಪ್ರಕರಣಗಳು ದಾಖಲಾಗಿವೆ. ಆರ್ಥಿಕ ಅಪರಾಧ ಪ್ರಕರಣಗಳ ಸಂಖ್ಯೆ ಅಧಿಕಗೊಂಡಂತೆ ಅವುಗಳನ್ನು ಭೇದಿಸುವ ಪ್ರಮಾಣ ಕ್ರಮೇಣ ಕಡಿಮೆಯಾಗುತ್ತಿದೆ. 17,623 ಪ್ರಕರಣಗಳ ಪೈಕಿ 1,271 ಪ್ರಕರಣಗಳನ್ನ ಮಾತ್ರ ಬೇಧಿಸಲಾಗಿದೆ.

ಸೈಬರ್ ಅಪರಾಧ ಬಗ್ಗೆ ಜನರಲ್ಲಿ ಹೆಚ್ಚಿನ ಜಾಗೃತಿ ಮೂಡಿಸಿದ ಪರಿಣಾಮ ಎನ್​ಸಿಆರ್​ಪಿ ಪೋರ್ಟಲ್, 112 ಮುಖಾಂತರ ದೂರುಗಳನ್ನ ಎಫ್ಐಆರ್ ಆಗಿ ಪರಿವರ್ತನೆ ಹಾಗೂ ಸೆನ್ ಪೊಲೀಸ್ ಠಾಣೆ ಹೊರತುಪಡಿಸಿ ನಗರದ ಎಲ್ಲಾ ಕಾನೂನು ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದ್ದರಿಂದ ಪ್ರಕರಣಗಳ ಸಂಖ್ಯೆ ಅಧಿಕಗೊಳ್ಳಲು ಕಾರಣವಾಗಿದೆ ಎಂದು ಪೊಲೀಸ್ ಅಂಕಿ-ಅಂಶಗಳೇ ಸ್ಪಷ್ಟಪಡಿಸಿವೆ.

2023ರಲ್ಲಿ 639 ಜೂಜಾಟ ಪ್ರಕರಣ ದಾಖಲಾಗಿವೆ. ಕಳೆದ ವರ್ಷ 6,006 ಮಂದಿ ನಾಪತ್ತೆಯಾಗಿದ್ದು, 5026 ಕಾಣೆಯಾದವರನ್ನ ಪತ್ತೆಹಚ್ಚಲಾಗಿದೆ. 2023ರಲ್ಲಿ 2,358 ಮಂದಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಪೈಕಿ 1,700 ಪುರುಷರೇ ಆಗಿದ್ದಾರೆ. ರೌಡಿ ಚಟುವಟಿಕೆ ಭಾಗಿ ಆರೋಪದಡಿ 324 ಮಂದಿ ರೌಡಿಗಳನ್ನ ಬಂಧಿಸಲಾಗಿದೆ. 2023ರಲ್ಲಿ 3,443 ಡ್ರಗ್ಸ್ ಪ್ರಕರಣಗಳಲ್ಲಿ 103.22 ಕೋಟಿ ಮೌಲ್ಯದ 5,387 ಕೆಜಿ ತರಹೇವಾರಿ ಮಾದಕ ವಸ್ತುಗಳನ್ನ ಜಪ್ತಿ ಮಾಡಿ 4,399 ಮಂದಿಯನ್ನು ಬಂಧಿಸಲಾಗಿದೆ.

ಇದನ್ನೂ ಓದಿ: ಬೆಂಗಳೂರು: ರಾತ್ರಿ ಹೊತ್ತು ಆಟೋ ರಿಕ್ಷಾಗಳ ಕಳ್ಳತನ ಮಾಡುತ್ತಿದ್ದ ಇಬ್ಬರ ಬಂಧನ

Last Updated : Jan 4, 2024, 11:44 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.