ETV Bharat / state

ನೈಟ್ ಕರ್ಫ್ಯೂನಲ್ಲಿ ಸುಖಾಸುಮ್ಮನೆ‌‌ ಓಡಾಡಿದ್ರೆ ಪ್ರಕರಣ ದಾಖಲು : ಪೊಲೀಸ್ ಕಮಿಷನರ್​ ಎಚ್ಚರಿಕೆ - ನಾಳೆಯಿಂದ ರಾಜ್ಯಾದ್ಯಂತ ಕರ್ನಾಟಕದಲ್ಲಿ ನೈಟ್ ಕರ್ಫ್ಯೂ ಜಾರಿ

ನೈಟ್ ​​ಕರ್ಫ್ಯೂ ಸರ್ಕಾರದ ಆದೇಶದ ಪ್ರಕಾರ ಇರಲಿದೆ. ಈ ವೇಳೆ ಯಾರು ಹೊರಗಡೆ ಓಡಾಡುವುದಕ್ಕೆ ಬಿಡುವುದಿಲ್ಲ. ಎಂದಿನಂತೆ ಬಸ್‌ ಹಾಗೂ ಕ್ಯಾಬ್ ಇರಲಿವೆ.‌ ನಗರದ ಹಲವೆಡೆ ನಾಕಾಬಂದಿ ಮಾಡಿ ಎಲ್ಲಾ ಕಡೆ ಬಂದ್ ಮಾಡಿ‌ ಗಸ್ತು ಪೊಲೀಸರನ್ನು ನಿಯೋಜಿಸಲಾಗುವುದು. ಒಂದು ವೇಳೆ ಕಾನೂನು ಉಲ್ಲಂಘನೆ ಮಾಡಿದರೆ ಎನ್‌ಡಿಎಂಎ ಕೇಸ್​ ಹಾಕಲಾಗುತ್ತದೆ..

Police Commissioner Kamal Pant reaction about night curfew
ನೈಟ್ ಕರ್ಫ್ಯೂ ಬಗ್ಗೆ ಪೊಲೀಸ್​ ಆಯುಕ್ತ ಕಮಲ್​ ಪಂತ್​ ಪ್ರತಿಕ್ರಿಯೆ
author img

By

Published : Dec 27, 2021, 3:55 PM IST

ಬೆಂಗಳೂರು : ಒಮಿಕ್ರಾನ್ ಸೋಂಕು ಹರಡುವ ಭೀತಿಯಿಂದ ಹೊಸ ವರ್ಷಾಚರಣೆಗೆ ಸರ್ಕಾರ ಬ್ರೇಕ್ ಹಾಕಿದೆ. ರಾಜ್ಯಾದ್ಯಂತ ನಾಳೆಯಿಂದ ಜ.7ರವರೆಗೆ ನೈಟ್ ಕರ್ಫ್ಯೂ ವಿಧಿಸಿದೆ‌.

ನೈಟ್ ಕರ್ಫ್ಯೂ ಬಗ್ಗೆ ಪೊಲೀಸ್​ ಆಯುಕ್ತ ಕಮಲ್​ ಪಂತ್​ ಪ್ರತಿಕ್ರಿಯೆ ನೀಡಿರುವುದು..

ಈ ಕುರಿತಂತೆ ನಗರ ಪೊಲೀಸ್​ ಆಯುಕ್ತ ಕಮಲ್‌ ಪಂತ್ ಮಾಧ್ಯಮಗಳೊಂದಿಗೆ ಮಾತನಾಡಿದ್ದು, ನಾಳೆ ರಾತ್ರಿ 10 ಗಂಟೆಯಿಂದ ಬೆಳಗ್ಗೆ 5ರವರೆಗೆ ನೈಟ್​ ಕರ್ಫ್ಯೂ ಇರಲಿದೆ. ಈ ಸಮಯದಲ್ಲಿ ಪಬ್​​, ಕ್ಲಬ್​​ ಸೇರಿದಂತೆ ಯಾವುದೇ ರೀತಿಯ ವಾಣಿಜ್ಯ,ವಹಿವಾಟಿಗೆ ಅವಕಾಶವಿರುವುದಿಲ್ಲ.

ಅನುಮತಿಯಿಲ್ಲದೆ ಸುಖಾಸುಮ್ಮನೆ ಓಡಾಡುವುದು ಕಂಡು ಬಂದರೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆಯಡಿ (ಎನ್​​ಡಿಎಂಎ) ಕಾನೂನು‌ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ನೈಟ್ ​​ಕರ್ಫ್ಯೂ ಸರ್ಕಾರದ ಆದೇಶದ ಪ್ರಕಾರ ಇರಲಿದೆ. ಈ ವೇಳೆ ಯಾರು ಹೊರಗಡೆ ಓಡಾಡುವುದಕ್ಕೆ ಬಿಡುವುದಿಲ್ಲ. ಎಂದಿನಂತೆ ಬಸ್‌ ಹಾಗೂ ಕ್ಯಾಬ್ ಇರಲಿವೆ.‌ ನಗರದ ಹಲವೆಡೆ ನಾಕಾಬಂದಿ ಮಾಡಿ ಎಲ್ಲಾ ಕಡೆ ಬಂದ್ ಮಾಡಿ‌ ಗಸ್ತು ಪೊಲೀಸರನ್ನು ನಿಯೋಜಿಸಲಾಗುವುದು. ಒಂದು ವೇಳೆ ಕಾನೂನು ಉಲ್ಲಂಘನೆ ಮಾಡಿದರೆ ಎನ್‌ಡಿಎಂಎ ಕೇಸ್​ ಹಾಕಲಾಗುತ್ತದೆ ಎಂದರು.

ಇಂದಿರಾನಗರ, ಕೋರಮಂಗಲ, ಎಂಜಿರಸ್ತೆ, ಬ್ರಿಗೇಡ್ ರಸ್ತೆಯಲ್ಲಿ ಯಾವುದೇ ವಾಹನ,ಜನರ ಸಂಚಾರ ಇರುವುದಿಲ್ಲ. ಹೊಸ ವರ್ಷಾಚರಣೆ ದಿನ ಇನ್ನೂ ಕಟ್ಟುನಿಟ್ಟಿನ ಕ್ರಮಕೈಗೊಳ್ಳುತ್ತೇವೆ. ಅಂದು ಪಬ್, ಬಾರ್ ಮತ್ತು ರೆಸ್ಟೋರೆಂಟ್ ಮಾಲೀಕರು 10 ಗಂಟೆಗೆ ಬಂದ್​​ ಮಾಡಬೇಕು.

ಎಲ್ಲಾ ಕಡೆ ಸಿಸಿಟಿವಿ ಕ್ಯಾಮೆರಾ ಹಾಕಿ ಪೊಲೀಸರನ್ನು ನಿಯೋಜನೆ ಮಾಡುತ್ತೇವೆ. ತುರ್ತು ಕೆಲಸ ಇರುವವರು ಬಿಟ್ಟರೆ ಬೇರೆ ಯಾರು ಹೊರ ಬರುವುದಕ್ಕೆ ಬಿಡುವುದಿಲ್ಲ. ಜನರು ನಿಯಮಗಳನ್ನು ಪಾಲಿಸಿ ಪೊಲೀಸರಿಗೆ ಸಹಕಾರ ನೀಡಬೇಕೆಂದು ಮನವಿ ಮಾಡಿದರು.

ಈ ಬಾರಿ ಯಾವುದೇ ಪಾಸ್​​ ಕೊಡಲ್ಲ. ಬಸ್​​, ರೈಲ್ವೆ ನಿಲ್ದಾಣಗಳಿಗೆ ತೆರಳುವವರು ಬುಕ್ಕಿಂಗ್​ ಮಾಡಿರುವ ಟಿಕೆಟ್​ ತೋರಿಸಬೇಕು. ಆಸ್ಪತ್ರೆಗೆ ಹೋಗುವವರು ವೈದ್ಯಕೀಯ ದಾಖಲೆ ಹಾಗೂ ಕಾರ್ಖಾನೆ, ಕಂಪನಿಗಳಲ್ಲಿ ರಾತ್ರಿ ಪಾಳಿ ಮಾಡುವವರು ತಮ್ಮ ತಮ್ಮ ಐಡಿ ಕಾರ್ಡ್​​​ಗಳನ್ನು ತೋರಿಸಿದರೆ ಅವಕಾಶ ಮಾಡಿ ಕೊಡುತ್ತೇವೆ ಎಂದರು.

ಇದನ್ನೂ ಓದಿ: 15-18 ವರ್ಷದ ಮಕ್ಕಳಿಗೆ ಕೋವಿಡ್ ಲಸಿಕೆ ; 2022ರ ಜ.1ರಿಂದ ನೋಂದಣಿ ಆರಂಭ

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.