ETV Bharat / state

ಇಂದಿನಿಂದ ಫೆ.22ರವರೆಗೆ ಶಾಲಾ-ಕಾಲೇಜುಗಳ ಮುಂದೆ 144 ಸೆಕ್ಷನ್ ಜಾರಿ: ಕಮಿಷನರ್ ಪಂತ್​ - ಬೆಂಗಳೂರಲ್ಲಿ 144 ಸೆಕ್ಷನ್

ರಾಜ್ಯದ ಕೆಲ ಭಾಗಗಳಲ್ಲಿ ಹಿಜಾಬ್ - ಕೇಸರಿ ವಿವಾದ ಭುಗಿಲೆದ್ದಿದೆ. ಈ ಹಿನ್ನೆಲೆಯಲ್ಲಿ ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಗೆ ಬರುವ ಶಾಲಾ-ಕಾಲೇಜುಗಳ ಸುತ್ತಲೂ 200 ಮೀಟರ್​​​​ವರೆಗೆ ಜನರು ಗುಂಪುಗೂಡದಂತೆ ಇಂದಿನಿಂದ ಫೆಬ್ರುವರಿ.22ರವರೆಗೆ 144 ಸೆಕ್ಷನ್ ಜಾರಿ ಮಾಡಿ ನಗರ ಪೊಲೀಸ್ ಆಯುಕ್ತ ಕಮಲ್‌ ಪಂತ್ ಆದೇಶಿಸಿದ್ದಾರೆ.

Police Commissioner Kamal Pant reaction about Hijab- Saffron controversy
ಕರ್ನಾಟಕ ಹಿಜಾಬ್-ಕೇಸರಿ ವಿವಾದದ ಕುರಿತು ಕಮಿಷನರ್ ಕಮಲ್ ಪಂತ್ ಪ್ರತಿಕ್ರಿಯೆ
author img

By

Published : Feb 9, 2022, 3:31 PM IST

Updated : Feb 9, 2022, 3:56 PM IST

ಬೆಂಗಳೂರು: ಹಿಜಾಬ್ ವಿವಾದ ಹಿನ್ನೆಲೆಯಲ್ಲಿ ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಗೆ ಬರುವ ಶಾಲಾ-ಕಾಲೇಜುಗಳ ಸುತ್ತಲೂ 200 ಮೀಟರ್​​​​ವರೆಗೆ ಜನರು ಗುಂಪುಗೂಡದಂತೆ ಇಂದಿನಿಂದ ಫೆಬ್ರುವರಿ.22ರವರೆಗೆ 144 ಸೆಕ್ಷನ್ ಜಾರಿ ಮಾಡಿ ನಗರ ಪೊಲೀಸ್ ಆಯುಕ್ತ ಕಮಲ್‌ ಪಂತ್ ಆದೇಶಿಸಿದ್ದಾರೆ.

order copy
ಆದೇಶದ ಪ್ರತಿ

ಕಳೆದೆರಡು ದಿನಗಳಿಂದ‌ ಶಿವಮೊಗ್ಗ, ಉಡುಪಿ ಸೇರಿದಂತೆ ಕೆಲ‌ ಶಾಲಾ-ಕಾಲೇಜುಗಳ ಮುಂದೆ ಹಿಜಾಬ್-ಕೇಸರಿ ವಿಚಾರವಾಗಿ‌‌ ಸಂಘರ್ಷಕ್ಕೆ ಕಾರಣವಾಗಿತ್ತು. ಕಾನೂನು‌ ಸುವ್ಯವಸ್ಥೆಗೆ ಧಕ್ಕೆ ಹಿನ್ನೆಲೆಯಲ್ಲಿ ಸರ್ಕಾರ ಮೂರು ದಿನಗಳ ಕಾಲ ಸರ್ಕಾರ ರಜೆ ಘೋಷಿಸಿದೆ. ಇದರ ಬೆನ್ನೆಲ್ಲೆ ಪೊಲೀಸ್​ ಆಯುಕ್ತರು 144 ಸೆಕ್ಷನ್ ಜಾರಿ ಮಾಡಿದ್ದಾರೆ.

ನಗರದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳಿಗೆ ನಡೆಯದಂತೆ‌ ಮುಂಜಾಗ್ರತ ಕ್ರಮವಾಗಿ ನಗರದಲ್ಲಿರುವ ಶಾಲಾ-ಕಾಲೇಜು ಹಾಗೂ ಇನ್ನಿತರ ಶೈಕ್ಷಣಿಕ ಸಂಸ್ಥೆಗಳ‌ ಮುಂದೆ ನಾಲ್ಕು ಜನರಿಗಿಂತ ಹೆಚ್ಚು ಜನರು ಸೇರುವಂತಿಲ್ಲ. ಒಂದು ವೇಳೆ ಕಾನೂನು ಉಲ್ಲಂಘನೆ‌ ಕಂಡುಬಂದರೆ‌ ಕ್ರಮ‌ ಕೈಗೊಳ್ಳಲಾಗುವುದು ಎಂದು ಆಯುಕ್ತರು ಆದೇಶದಲ್ಲಿ ತಿಳಿಸಿದ್ದಾರೆ.

ಶಾಲಾ-ಕಾಲೇಜುಗಳ‌ ಮುಂದೆ ಕಟ್ಟೆಚ್ಚರ:

ಕರ್ನಾಟಕ ಹಿಜಾಬ್-ಕೇಸರಿ ವಿವಾದದ ಕುರಿತು ಕಮಿಷನರ್ ಕಮಲ್ ಪಂತ್ ಪ್ರತಿಕ್ರಿಯೆ

ಹಿಜಾಬ್ - ಕೇಸರಿ ಸಂಘರ್ಷಕ್ಕೆ ಸಂಬಂಧಿಸಿಂತೆ ಬೆಂಗಳೂರು ನಗರದಲ್ಲಿ ಅಹಿತಕರ ಘಟನೆಯಾಗದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಶಾಲಾ - ಕಾಲೇಜು ಬಳಿ ಸೂಕ್ತ ಭದ್ರತೆ ತೆಗೆದುಕೊಳ್ಳಲಾಗಿದೆ. ಪೊಲೀಸರು‌ ಶಾಲಾ-ಕಾಲೇಜು ಬಳಿ ಗಸ್ತು ತಿರುಗುತ್ತಿದ್ದಾರೆ. ಎಲ್ಲಾ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ನಗರದಲ್ಲಿ ಯಾರೂ ಕೂಡ ಗುಂಪು ಸೇರುವಂತಿಲ್ಲ. ಯಾರಾದರೂ ‌ಗಲಾಟೆ ಮಾಡಿದರೆ ಅವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳುತ್ತೇವೆ. ಶಾಲಾ - ಕಾಲೇಜುಗಳ ಆಡಳಿತ ಜೊತೆ ಸ್ಥಳೀಯ ಪೊಲೀಸರು ಸಂಪರ್ಕದಲ್ಲಿರಲು ಸೂಚಿಸಲಾಗಿದೆ ಎಂದು ಆಯುಕ್ತರು ತಿಳಿಸಿದರು.

ಇದನ್ನೂ ಓದಿ: ಶಿವಮೊಗ್ಗ: ಸರ್ಕಾರಿ ಕಾಲೇಜಿನಲ್ಲಿ ರಾಷ್ಟ್ರಧ್ವಜ ಹಾರಿಸಿದ ಪ್ರಕರಣ.. ದೂರು ದಾಖಲು

Last Updated : Feb 9, 2022, 3:56 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.