ಬೆಂಗಳೂರು: ನಗರದ ಕಂಟೋನ್ಮೆಂಟ್ ರೈಲ್ವೆ ನಿಲ್ದಾಣಕ್ಕೆ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪ್ರಯಾಣಿಕರು ರೈಲಿನಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ತಿದ್ದಾರಾ...? ಸಿಬ್ಬಂದಿ ಯಾವ ರೀತಿ ವ್ಯವಸ್ಥೆ ಮಾಡಿಕೊಂಡಿದ್ದಾರೆ ? ಏನೆಲ್ಲಾ ಮುಂಜಾಗ್ರತ ಕ್ರಮ ಕೈಗೊಳ್ಳಲಾಗಿದೆ.? ಹಾಗೂ ರೈಲಿನಲ್ಲಿ ತೆರಳುವ ಪ್ರಯಾಣಿಕರ ಭದ್ರತೆ ಕುರಿತಂತೆ ಖುದ್ದು ಪೊಲೀಸ್ ಆಯುಕ್ತರೇ ನಿಲ್ದಾಣಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ದೇಶದ ವಿವಿಧ ರಾಜ್ಯಗಳಿಗೆ ತೆರಳಲು ಇದುವರೆಗೂ ಬೆಂಗಳೂರಿನಿಂದ 89 ರೈಲುಗಳ ವ್ಯವಸ್ಥೆ ಮಾಡಲಾಗಿದ್ದು, ಒಟ್ಟು ಈವರೆಗೂ ಬೆಂಗಳೂರಿನಿಂದ ರೈಲಿನ ಮೂಲಕ 1.25 ಲಕ್ಷ ಜನರು ಪ್ರಯಾಣ ಬೆಳೆಸಿದ್ದಾರೆ.
ಲಾಕ್‌ಡೌನ್ 4.0 ಹಿನ್ನೆಲೆಯಲ್ಲಿ ನಗರದಲ್ಲಿ ಲಾಕ್‌ಡೌನ್ ಬಸ್ ಸಂಚಾರ ಸೇರಿದಂತೆ ಹಲವು ವಿಭಾಗಗಳಿಗೆ ಅನುಮತಿ ಕುರಿತಂತೆ ಕಮಿಷನರ್ ಕಚೇರಿಯಲ್ಲಿ ಡಿಸಿಪಿಗಳೊಂದಿಗೆ ತುರ್ತು ಸಭೆ ಕರೆದಿದ್ದಾರೆ. ಲಾಕ್‌ಡೌನ್ 4.0 ರಲ್ಲಿ ಬೆಂಗಳೂರಿನಲ್ಲಿ ಪೊಲೀಸರ ಭದ್ರತಾ ಕ್ರಮಗಳು ಹೇಗಿರಲಿವೆ..? ಅನ್ನೋದರ ಕುರಿತು ಸಭೆಯಲ್ಲಿ ಆಯುಕ್ತರು ನಿರ್ಧಾರ ಕೈಗೊಳ್ಳಲಿದ್ದಾರೆ.