ETV Bharat / state

ಬೆಂಗಳೂರಿನ 2 ವಾರ್ಡ್​ಗಳಲ್ಲಿ ಮಾತ್ರ ಸೀಲ್‌ಡೌನ್: ಪೊಲೀಸ್ ಕಮೀಷನರ್ ಭಾಸ್ಕರ್ ರಾವ್ ಸ್ಪಷ್ಟನೆ - Bhaskar Rao press meet about seal down

ಸೀಲ್ ಡೌನ್ ಬಗ್ಗೆ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಸುದ್ದಿಗೋಷ್ಟಿ ನಡೆಸಿ ಸ್ಪಷ್ಟನೆ ನೀಡಿದರು.

Bhaskar Rao
ಭಾಸ್ಕರ್ ರಾವ್
author img

By

Published : Apr 10, 2020, 5:16 PM IST

ಬೆಂಗಳೂರು: ಪಾದರಾಯನಪುರ ಹಾಗೂ ಬಾಪೂಜಿ ನಗರ ವಾರ್ಡ್‌ಗಳನ್ನು ಹೊರತುಪಡಿಸಿ ನಗರದಲ್ಲಿ ಯಾವುದೇ ಭಾಗವನ್ನು ಸೀಲ್​ ಡೌನ್ ಮಾಡುವ ನಿರ್ಧಾರವನ್ನು ರಾಜ್ಯ ಸರ್ಕಾರ ಕೈಗೊಂಡಿಲ್ಲ. ಹೀಗಾಗಿ ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ತಿಳಿಸಿದ್ದಾರೆ.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಪೊಲೀಸ್ ಕಮೀಷನರ್ ಭಾಸ್ಕರ್ ರಾವ್

ಪಾದರಾಯನಪುರ ಹಾಗೂ ಬಾಪೂಜಿ ನಗರ ವಾರ್ಡ್‌ಗಳ ಅಕ್ಕಪಕ್ಕದ ಮನೆಗಳಲ್ಲಿ ಇಬ್ಬರಿಗೆ ಕೊರೊನಾ ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ ವೈರಾಣು ಹರಡುವಿಕೆ ತಡೆಗಟ್ಟುವಿಕೆಗಾಗಿ ಸೀಲ್‌ಡೌನ್ ನಿರ್ಧಾರ ಕೈಗೊಳ್ಳಲಾಗಿದೆ‌. ಎರಡು ವಾರ್ಡ್‌ಗಳಲ್ಲಿ ಸುಮಾರು 40 ಸಾವಿರ ಜನರು ವಾಸವಿದ್ದು ಅಗತ್ಯ ಸೇವೆಗಳನ್ನು ಪೂರೈಸಲು ಬಿಬಿಎಂಪಿ ಸೂಕ್ತ ಕ್ರಮ ಕೈಗೊಂಡಿದೆ. ಮನೆ ಬಾಗಿಲಿಗೆ ದಿನಸಿ ಪದಾರ್ಥಗಳು ಬರಲಿದ್ದು ಯಾರೂ ಕೂಡಾ ಆತಂಕ ಪಡುವ ಅಗತ್ಯವಿಲ್ಲ ಎಂದಿದ್ದಾರೆ.

ಇನ್ನು, ನಗರದಲ್ಲಿ ಲಾಕ್‌ಡೌನ್ ಆದೇಶ ಉಲ್ಲಂಘಿಸಿದ 21,700 ವಾಹನಗಳನ್ನು ಜಪ್ತಿ ಮಾಡಲಾಗಿದೆ. ಈಗಾಗಲೇ 1.50 ಲಕ್ಷ ಪಾಸ್ ವಿತರಿಸಲಾಗಿದೆ. ಸಾವು ಸಂದರ್ಭ ಹೊರತುಪಡಿಸಿದರೆ ಬೇರೆ ಯಾವ ಕಾರಣಕ್ಕಾಗಿಯೂ ಪಾಸ್ ವಿತರಿಸಿಲ್ಲ. ಹಿರಿಯ ನಾಗರಿಕರಿಗೆ ಆರೋಗ್ಯದಲ್ಲಿ ಸಮಸ್ಯೆ‌ ಕಂಡುಬಂದರೆ ಹೊಯ್ಸಳ ಸೇವೆ ಪಡೆದುಕೊಳ್ಳಿ. ಪಾಸ್​ಗಳ ದುರ್ಬಳಕೆ ಕಂಡುಬಂದರೆ ಅಂತಹವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭಾಸ್ಕರ್‌ರಾವ್ ಎಚ್ಚರಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.