ಬೆಂಗಳೂರು: ಲಾಕ್ಡೌನ್ ವೇಳೆಯಲ್ಲಿ ಜನರಿಗೆ ಹಾಗೂ ಅಗತ್ಯ ಸೇವೆ ಪೂರೈಕೆ ಮಾಡುವವರಿಗೆ ಡಿಸಿಪಿ ಕಚೇರಿಗಳಲ್ಲಿ ನೀಡಲಾಗುತಿದ್ದ ಸಾಮಾನ್ಯ ಪಾಸ್ಗಳು ಸದ್ಯ ದುರ್ಬಳಕೆಯಾಗ್ತಿದೆ ಎಂದು ನಗರ ಆಯುಕ್ತ ಭಾಸ್ಕರ್ ರಾವ್ ಬೇಸರ ಹೊರಹಾಕಿದ್ದಾರೆ.
ಅಗತ್ಯ ಅನಿವಾರ್ಯ ಕಾರಣಕ್ಕೆ ಓಡಾಡುವುದಕ್ಕೆ ಪಾಸ್ಗಳನ್ನ ನೀಡಲಾಗಿತ್ತು. ಆದರೆ, ಮಾಧ್ಯಮದವರ ಹೆಸರನ್ನ ಹೇಳಿಕೊಂಡು ಕೆಲವರು ವಿನಾಃಕಾರಣ ಓಡಾಟ ಮಾಡ್ತಿದ್ದಾರೆ. ನಾವು ಮಾಧ್ಯಮದವರಿಗೆ ಐಡಿ ಕಾರ್ಡ್ ಸಾಕು ಎಂದಿದ್ದೇವೆ. ಆದ್ರೆ, ಅದನ್ನ ಮಿಸ್ ಯೂಸ್ ಮಾಡ್ಕೊತಿದ್ದಾರೆ ನಾವು ಲಾಠಿನೂ ಕೂಡ ಉಪಯೋಗಿಸ್ತಿಲ್ಲ, ತುಂಬಾ ತಾಳ್ಮೆಯಿಂದ ಕೆಲಸ ಮಾಡ್ತಿದ್ದೇವೆ . ಹೀಗಾಗಿ ನಮ್ಮ ತಾಳ್ಮೆಗೂ ಒಂದು ಮಿತಿ ಇದೆ ಎಂದರು.
ಅನವಶ್ಯಕವಾಗಿ ತೆರಳುತ್ತಿರುವವರ ವಾಹನಗಳನ್ನ ವಶಕ್ಕೆ ಪಡೆಯಲು ನಿರ್ಧಾರ ಮಾಡಿದ್ದು, ಸದ್ಯ 5,371 ವಾಹನಗಳನ್ನ ವಶಕ್ಕೆ ಪಡೆದಿದ್ದೇವೆ. ಈಗಾಗಲೆ ಏಳು ದಿನ ಲಾಕ್ಡೌನ್ ಆಗಿದೆ. ಲಾಠಿ ಬಿಟ್ಟು ಕೆಲಸ ಮಾಡುತ್ತಿದ್ದೇವೆ. ನಮ್ಮ ಸಿಚುವೇಷನ್ ಅರ್ಥ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.
ದೆಹಲಿಯ ಜಮಾತ್ಗೆ ಹೋಗಿ ಬಂದವರ ಕುರಿತು ಮಾತನಾಡಿ, ಈಗಾಗಲೇ ಸಿಲಿಕಾನ್ ಸಿಟಿಯಲ್ಲಿರುವವರ ಬಗ್ಗೆ ಲಿಸ್ಟ್ ಮಾಡಿ ಆಯಾ ವಿಭಾಗ ಪೊಲಿಸರು ಅವರ ಬಳಿ ಹೋಗಿ ಹೋಂ ಕ್ವಾರಂಟೈನ್ ಅಥವಾ ಸರ್ಕಾರಿ ಕ್ವಾರಂಟೈನ್ನಲ್ಲಿ ಇರಲು ಹೇಳಿದ್ದಾರೆ. ಜಮಾತ್ಗೆ ಹೋದವರನ್ನ ಯಾರನ್ನೂ ಬಂಧಿಸಲ್ಲ. ನಾವೇನು ಮನೆಗೆ ಹೆದರಿಸೋಕೆ ಹೋಗ್ತಿಲ್ಲ, ಕೇಸು ಹಾಕೋದಿಲ್ಲ ಎಂದರು.