ETV Bharat / state

ಯುವಕನಿಗೆ ಕಿಡ್ನಿ ಹೋಗುವ ಹಾಗೆ ಥಳಿಸಿದ ಪೊಲೀಸರು: ಸಾರ್ವಜನಿಕರ ಆಕ್ರೋಶ - undefined

ಡಿಜೆ ಹಳ್ಳಿ ಪೊಲೀಸರು ಮೆಡಿಸಿನ್​ ತರಲು ಬಂದ ಯುವಕನಿಗೆ ಥಳಿಸಿದ ಪ್ರಕರಣಕ್ಕೆ ಸಂಬಂಧಿಸಿ ಸಾರ್ವಜನಿಕರ ಪ್ರತಿಭಟನೆ ತೀವ್ರತೆ ಪಡೆದುಕೊಂಡಿದ್ದು, ಠಾಣೆಯ ಎಲ್ಲ ಪೊಲೀಸರನ್ನು ಅಮಾನತು ಮಾಡುವಂತೆ ಆಗ್ರಹಿಸುತ್ತಿದ್ದಾರೆ.

ಮೊಹಮ್ಮದ್ ತನ್ವೀರ್
author img

By

Published : Apr 25, 2019, 7:52 PM IST

ಬೆಂಗಳೂರು: ಡಿಜೆ ಹಳ್ಳಿ ಪೊಲೀಸ್​ ಠಾಣೆ ಹಾಗೂ ಸಾರ್ವಜನಿಕರ ನಡುವೆ ಆಗಾಗ ಗಲಾಟೆ ನಡೆಯುವುದು ಸರ್ವೇ ಸಾಮಾನ್ಯವಾಗಿದೆ. ಹಾಗಾಗಿ ಸಾರ್ವಜನಿಕರು ಪೊಲೀಸರು ನಮ್ಮ ಮೇಲೆ ದಬ್ಬಾಳಿಕೆ ಮಾಡಿದ್ದಾರೆ. ಕೂಡಲೇ ಅವರ ವಿರುದ್ಧ ಶಿಸ್ತು ಕ್ರಮ ಜರುಗಿಸಿ ಎಂದು ಹಿರಿಯ ಪೊಲೀಸ್ ಅಧಿಕಾರಿಗಳ ಮೇಲೆ ಮುಗಿ ಬೀಳ್ತಾರೆ. ಅಲ್ಲದೆ ಅಲ್ಲಿನ ನಿವಾಸಿಗಳನ್ನ ಸಂಭಾಳಿಸೋದೆ ಪೊಲೀಸರಿಗೆ ಹರಸಾಹಸವಾಗಿ ಬಿಟ್ಟಿದೆ.

ಹೌದು, ಡಿಜೆ ಹಳ್ಳಿ ಅಂದ್ರೆ ದಿನಕ್ಕೆ ನೂರಾರು ಗಾಂಜಾ ಪ್ರಕರಣಗಳು ವರದಿಯಾಗ್ತಾಲೆ ಇರ್ತಾವೆ. ಈ ಹಿಂದೆ ಕೂಡ ಓರ್ವ ಯುವಕ ಗಾಂಜಾ ಕೇಸ್​​ನಲ್ಲಿ ಅಂದರ್ ಆಗಿ ಪೊಲೀಸರ ಬಳಿ ಹೊಡೆಸಿಕೊಂಡ ಪ್ರಕರಣವನ್ನ ಅಲ್ಲಿನ ನಿವಾಸಿಗಳು ದೊಡ್ಡ ಸುದ್ದಿ ಮಾಡಿ, ಅಲ್ಲಿನ ಇನ್​​ಸ್ಪೆಕ್ಟರ್ ವರ್ಗಾವಣೆ ಆಗುವವರೆಗೂ ಪ್ರತಿಭಟನೆ ನಡೆಸಿದ್ದರು.

ಸಾರ್ವಜನಿಕರಿಂದ ಪ್ರತಿಭಟನೆ

ಸದ್ಯ ಇದೇ ರೀತಿಯ ಪ್ರಕರಣಕ್ಕೆ ಡಿಜೆ ಹಳ್ಳಿ ಪೊಲೀಸ್ ಠಾಣೆ ಮೊನ್ನೆ ಸುದ್ದಿಯಾಗಿದೆ. ಮೊಹಮ್ಮದ್ ತನ್ವೀರ್ ಅನ್ನೋ ಯುವಕ ಮೆಡಿಸಿನ್ ತರಲು ತನ್ನ ಸ್ನೇಹಿತನೊಂದಿಗೆ ತೆರಳಿದಾಗ, ಇದನ್ನ ಗಮನಸಿದ ಪೊಲೀಸರು ಫೋನ್​​​ನಲ್ಲಿ ಮಾತನಾಡುತ್ತಿದ್ದ ಅಂತ ಹಲ್ಲೆ ಮಾಡಿದ್ದಾರೆ. ಅಲ್ಲದೆ ಕಿಡ್ನಿ ಹೋಗುವ ಮಟ್ಟಿಗೆ ಹಲ್ಲೆ ಮಾಡಿದ್ದಾರೆ. ನಂತರ ಡಿಜೆ ಹಳ್ಳಿ ಪೊಲೀಸ್ ಠಾಣೆ ಮುಂಭಾಗ ಪ್ರತಿಭಟನೆ ನಡೆಸಿ ಅಲ್ಲಿನ ಪಿಎಸ್​​​ಐ ಸಂತೋಷ್ ಹಾಗೂ ಪೇದೆ ಅಯ್ಯಪ್ಪನನ್ನ ಸಸ್ಪೆಂಡ್ ಮಾಡಿ ಇಲ್ಲ ವರ್ಗಾಯಿಸಿ ಅಂತ ಪಟ್ಟು ಹಿಡಿದಿದ್ರು.

ಈ ಹಿನ್ನೆಲೆ ಪ್ರಕರಣದ ಗಂಭೀರತೆ ಅರಿತ ಪೊಲೀಸ್ ಆಯುಕ್ತರು, ಕೂಡಲೇ ಇಬ್ಬರನ್ನ ಅಮಾನತು ಮಾಡಿ ಆದೇಶ ಹೊರಡಿಸಿದ್ದರು. ಆದ್ರೆ ಇಲ್ಲಿಗೆ ನಿಲ್ಲದ ಪ್ರತಿಭಟನೆ, ಮತ್ತಷ್ಟು ತೀವ್ರತೆ ಪಡೆದುಕೊಂಡು ಇದೀಗ ಠಾಣೆಯ ಅಷ್ಟೂ ಜನ ಸಿಬ್ಬಂದಿಯನ್ನ ಅಮಾನತು ಮಾಡಬೇಕೆಂಬ ಒಕ್ಕೊರಲ ಕೂಗು ಇಡೀ ಡಿಜೆ ಹಳ್ಳಿ ನಿವಾಸಿಗಳದ್ದಾಗಿದೆ. ಇಷ್ಟಕ್ಕೇ ನಿಲ್ಲದೆ ಫೇಸ್ಬುಕ್​​ನಲ್ಲಿ ಬೆಂಗಳುರು ಸಿಟಿ ಪೊಲೀಸ್ ಪೇಜ್​​ಗೆ ಟ್ಯಾಗ್ ಮಾಡೋ ಮೂಲಕ ಈ ಪ್ರತಿಭಟನೆ ಮತ್ತಷ್ಟು ತೀವ್ರತೆ ಪಡೆದದುಕೊಂಡಿದೆ.

Intro:file name:- dj halli vs public

ಭವ್ಯ

ಡಿಜೆ ಹಳ್ಳಿ ಪೊಲೀಸ್ ಠಾಣೆ ಹಾಗೂ ಪಬ್ಲಿಕ್ ನಡುವೆ ಬಿಗ್ ಫೈಟ್

ಪೊಲೀಸರು ಹಾಗೂ ಪಬ್ಲಿಕ್ ನಡುವೆ ಗಲಾಟೆ ಇಂದು ನಿನ್ನೆಯೆದಲ್ಲ ನಮಗೆ ಸುಮ್ ಸುಮ್ನೆ ಹೊಡೆದ್ರು.. ನಮ್ಮ ಮೇಲೆ ಇಲ್ಲ ಸಲ್ಲದ ದಬ್ಬಾಳಿಕೆ ಮಾಡಿದ್ರು.. ಹೀಗಂತ ಪೊಲೀಸರ ಮೇಲೆ ಸಾಲು ಸಾಲು ದೂರುಗಳ ಸುರಿಮಳೆಯೆ ಹರಿದುಬರ್ತಿರುತ್ತೆ..

ದೇವರ ಜೀವನಹಳ್ಳಿ ಪೊಲೀಸ್ ಠಾಣೆ ಬೆಂಗಳೂರಿನ ಪೂರ್ವ ವಲಯಕ್ಕೆ ಬರುವ ಪೊಲೀಸ್ ಠಾಣೆ.. ಆ ಠಾಣಾ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಜನರು ಸ್ಲಂ ನಿವಾಸಿಗಳೆ ಆದ್ರಿಂದ ಅಲ್ಲಿ ಪೊಲೀಸ್ ಹಾಗೂ ಪಬ್ಲಿಕ್ ನಡುವೆ ಮಾರಾಮಾರಿ ನಡಿತಲೇ ಇರುತ್ತೆ.. ಪೊಲೀಸರು ನಮ್ಮ ಮೇಲೆ ದಬ್ಬಾಳಿಕೆ ಮಾಡಿದ್ದಾರೆ ಕೂಡಲೇ ಅವರ ವಿರುದ್ಧ ಶಿಸ್ತು ಕ್ರಮ ಜರುಗಿಸಿ ಅಂತ ಆಗಿದ್ದಾಂಗೆ ಹಿರಿಯ ಪೊಲೀಸ್ ಅಧಿಕಾರಿಗಳ ಮೇಲೆ ಮುಗಿ ಬೀಳ್ತಾರೆ ಅಲ್ಲಿನ ಜನ..

ಇದು ಇಂದು ನಿನ್ನೆಯದಲ್ಲ, ಈ ಹಿಂದೆ ಸಾಕಷ್ಟು ಕೇಸ್ ಗಳ ಮೇಲೆ ಆಠಾಣೆಯಲ್ಲಿನ ಇನ್ಸ್ ಪೆಕ್ಟರ್ ಗಳು ವರ್ಗಾವಣೆಯಾಗ್ತಾಲೇ ಇರ್ತಾರೆ.. ಅಲ್ಲದೆ ಅಲ್ಲಿನ ನಿವಾಸಿಗಳನ್ನ ಸಂಭಾಳಿಸೋದೆ ಪೊಲೀಸರಿಗೆ ಹರಸಾಹಸವಾಗಿಬಿಟ್ಟಿದೆ.ಡಿಜೆ ಹಳ್ಳಿ ಅಂದ್ರೆ ಸಾಕು ಅದೊಂದು ರೀತಿ ಸ್ಲಂ ಇದ್ದ ಹಾಗೆ ದಿನಕ್ಕೆ ನೂರಾರು ಗಾಂಜಾ ಪ್ರಕರಣಗಳು ವರದಿಯಾಗ್ತಾಲೆ ಇರ್ತಾವೆ ಠಾಣೆಯಲ್ಲಿ ಕೇಸ್ ರಿಜೆಸ್ಟರ್ ಆಗ್ತಾನೆ ಇರುತ್ವೆ ಈ ಹಿನ್ನೆಲೆ ಅಲ್ಲಿನ ಠಾಣೆಯಲ್ಲಿ ಈ ಹಿಂದೆ ಓರ್ವ ಯುವಕ ಗಾಂಜಾ ಕೇಸ್ ನಲ್ಲಿ ಅಂದರ್ ಆಗಿ ಪೊಲೀಸರ ಬಳಿ ಹೊಡೆಸಿಕೊಂಡ ಪ್ರಕರಣವನ್ನ ಅಲ್ಲಿನ ನಿವಾಸಿಗಳು ದೊಡ್ಡ ಸುದ್ದಿ ಮಾಡಿ ಅಲ್ಲಿನ ಇನ್ಸ್ ಪೆಕ್ಟರ್ ವರ್ಗಾವಣೆ ಆಗುವವರೆಗೂ ಪ್ರತಿಭಟನೆ ನಡೆಸಿದ್ದರು..

ಸದ್ಯ ಇದೇ ರೀತಿಯ ಪ್ರಕರಣಕ್ಕೆ ಡಿಜೆ ಹಳ್ಳಿ ಪೊಲೀಸ್ ಠಾಣೆ ಮೊನ್ನೆ ಸುದ್ದಿಯಾಗಿದೆ..ಮೊಹಮ್ಮದ್ ತನ್ವೀರ್ ಅನ್ನೋ ಯುವಕ ಮೆಡಿಸನ್ ತರಲು ತನ್ನ ಸ್ನೇಹಿತನೊಂದಿಗೆ ತೆರಳಿದಾಗ ಇದನ್ನ ಗಮನಸಿದ ಪೊಲೀಸರು ಫೊನ್ ನಲ್ಲಿ ಮಾತನಾಡುತ್ತಿದ್ಯ ಅಂತ ಹಲ್ಲೆ ಮಾಡಿದ್ದಾರೆ ಅಂತ ಅಲ್ಲದೆ ಕಿಡ್ನಿ ಹೋಗುವ ಮಟ್ಟಿಗೆ ಹಲ್ಲೆ ಮಾಡಿದ್ರು. ಇದೇ ಡಿಜೆ ಹಳ್ಳಿ ಪೊಲೀಸ್ ಠಾಣೆ ಮುಂಭಾಗ ಪ್ರತಿಭಟನೆ ನಡೆಸಿ ಅಲ್ಲಿನ ಪಿಎಸ್ ಐ ಸಂತೋಷ್ ಹಾಗೂ ಪೇದೆ ಅಯ್ಯಪ್ಪ ನನ್ನ ಸಸ್ಪೆಂಡ್ ಮಾಡಿ ಇಲ್ಲ ವರ್ಗಾಯಿಸಿ ಅಂತ ಪಟ್ಟು ಹಿಡಿದ್ರು. ಈ ಹಿನ್ನಲೆ ಪ್ರಕರದ ಗಂಭೀರತೆ ಅರಿಯ ಪೊಲೀಸ್ ಆಯುಕ್ತರು ಕೂಡಲೇ ಇಬ್ಬರನ್ನ ಅಮಾನತು ಮಾಡಿ ಆದೇಶ ಹೊರಡಿಸಿದ್ದರು..

ಆದ್ರೆ ಇಲ್ಲಿಗೆ ನಿಲ್ಲದ ಪ್ರತಿಭಟನೆ, ಮತ್ತಷ್ಟು ತೀವ್ರತೆ ಪಡೆದುಕೊಂಡು ಇದೀಗ ಠಾಣೆಯ ಅಷ್ಟೂ ಜನ ಸಿಬ್ಬಂದಿಗಳನ್ನ ಅಮಾನತು ಮಾಡಬೇಕೆಂಬ ಒಕ್ಕೊರಲ ಕೂಗು ಇಡೀ ಡಿಜೆ ಹಳ್ಳಿ ನಿವಾಸಿಗಳದ್ದು ಇಷ್ಟಕ್ಕೇ ನಿಲ್ಲದೆ ಫೇಸ್ಬುಕ್ ನಲ್ಲಿ ಬೆಂಗಳುರು ಸಿಟಿ ಪೊಲೀಸ್ ಪೇಜ್ ಗೆ ಟ್ಯಾಗ್ ಮಾಡೋ ಮೂಲಕ ಈ ತೀವ್ರತೆ ಮತ್ತಷ್ಟು ಕಾವು ಪಡೆದದುಕೊಳ್ತಿದೆ..

ಭವ್ಯ ಶಿಬರೂರು ಈ ಟಿವಿ ಭಾರತ್
Body:KN_BNG_0625419_DJHALLI_7204498-BHAVYAConclusion:KN_BNG_0625419_DJHALLI_7204498-BHAVYA

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.