ಬೆಂಗಳೂರು: ಒಂದೆಡೆ ಸ್ಯಾಂಡಲ್ವುಡ್ ಡ್ರಗ್ಸ್ ದಂಧೆ ಪ್ರಕರಣದ ತನಿಖೆಯನ್ನು ಸಿಸಿಬಿ ನಡೆಸುತ್ತಿದ್ದರೆ, ಇನ್ನೊಂದೆಡೆ ಅನುಮತಿಯಿಲ್ಲದೆ ಪಾರ್ಟಿ ನಡೆಸುತ್ತಿದ್ದ ಆಫ್ರಿಕನ್ ಪ್ರಜೆಗಳ ಮೇಲೆ ಹೆಣ್ಣೂರು ಪೊಲೀಸರು ದಾಳಿ ನಡೆಸಿದ್ದಾರೆ.
ನಿನ್ನೆ ರಾತ್ರಿ ಹೊರಮಾವು ಬಳಿಯ ಆಫ್ರಿಕನ್ ಕಿಚನ್ನಲ್ಲಿ ನೂರಾರು ಆಫ್ರಿಕನ್ ಪ್ರಜೆಗಳು ಪಾರ್ಟಿ ಮಾಡುತ್ತಿದ್ದರು. ಕೊರೊನಾ ಸಂದಿಗ್ಧ ಪರಿಸ್ಥಿತಿಯಲ್ಲಿಯೂ ಪೊಲೀಸ್ ಅನುಮತಿ ಪಡೆಯದೆ ಪಾರ್ಟಿ ಮಾಡುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಪ್ರಮುಖ ಆರೋಪಿ ಜಾನ್ಸನ್ ಎಂಬಾತನನ್ನು ಬಂಧಿಸಿದ್ದಾರೆ.
ಹೊರಮಾವು ಬಳಿ ಆಫ್ರಿಕನ್ ಪ್ರಜೆಗಳು ನಡೆಸುತ್ತಿದ್ದ ಪಾರ್ಟಿ ಮೇಲೆ ದಾಳಿ ನಡೆಸುತ್ತಿದ್ದಂತೆ, ಬಂಧನ ಭೀತಿಯಿಂದ ಎಲ್ಲರೂ ಚೆಲ್ಲಾಪಿಲ್ಲಿಯಾಗಿ ಓಡಿ ಹೋಗಿದ್ದಾರೆ. ಹೆಣ್ಣೂರು ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.