ಬೆಂಗಳೂರು: ಚುನಾವಣಾ ಪೂರ್ವ ಮುನ್ನೆಚ್ಚರಿಕೆ ಕ್ರಮವಾಗಿ ನಗರದ ರೌಡಿ ಶೀಟರ್ಸ್ ಮನೆಗಳಲ್ಲಿ ಪೊಲೀಸರ ಪರಿಶೀಲನೆ ಮುಂದುವರೆದಿದೆ. ಡಿ ಜೆ ಹಳ್ಳಿ ಠಾಣಾ ವ್ಯಾಪ್ತಿಯ ವಿವಿಧ ಕಡೆಗಳಲ್ಲಿ ಸುಮಾರು ನೂರಕ್ಕೂ ಅಧಿಕ ರೌಡಿಗಳ ಮನೆಗಳ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಕೆ ಜಿ ಹಳ್ಳಿ ಉಪವಿಭಾಗದ ಎಸಿಪಿ ನೇತೃತ್ವದಲ್ಲಿ ಇಂದು ಬೆಳಗ್ಗೆ 5 ಗಂಟೆಗೆ ದಾಳಿ ನಡೆಸಲಾಗಿದ್ದು, ಮಾರಕಾಸ್ತ್ರಗಳು, ಮಾದಕ ವಸ್ತುಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
ಪ್ರಮುಖ ರೌಡಿಗಳಾದ ಜೊಲ್ಲು ಇಮ್ರಾನ್, ಅನೀಸ್, ಜಹೀರ್ ಅಬ್ಬಾಸ್, ಹುಸೇನ್ ಷರೀಫ್, ಗ್ರಾನೈಟ್ ಸಾಧಿಕ್, ಸಕೀರ್, ಭಿಂಡಿ ಇರ್ಫಾನ್, ಯೂಸುಫ್, ತೌಫಿಕ್, ನೆಲ್ಸನ್, ಆಸಿಫ್ ಮತ್ತಿತರ ರೌಡಿ ಆಸಾಮಿಗಳ ಮನೆಗಳ ಮೇಲೆ ದಾಳಿ ನಡೆಸಲಾಗಿದೆ. ರೌಡಿಶೀಟರ್ ಆಸಿಫ್ ಮನೆಯಲ್ಲಿ 105 ಕೆ.ಜಿ ಗಾಂಜಾ, 8 ಗ್ರಾಂ ಎಂಡಿಎಂಎ, ಒಂದು ಡ್ರಾಗರ್, ಒಂದು ತೂಕದ ಯಂತ್ರವನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಕೆ.ಜೆ ಹಳ್ಳಿ ಡಿ.ಜೆ ಹಳ್ಳಿ ಗಲಭೆ: ಆರೋಪಿಗಳ ವಿರುದ್ಧದ ಆದೇಶ ರದ್ದತಿಗೆ ಹೈಕೋರ್ಟ್ ನಿರಾಕರಣೆ