ETV Bharat / state

ಅಪ್ರಾಪ್ತ ಆರೋಪಿಗೆ ಥಳಿಸಿದ ಎಸ್​ಐ : Viral Video - ಕಳ್ಳತನ ಪ್ರಕರಣ

ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಠಾಣೆಗೆ ಕರೆತಂದಿದ್ದ ಅಪ್ರಾಪ್ತನಿಗೆ ಎಸ್ಐ ಒಬ್ಬರು ಮನಬಂದಂತೆ ಥಳಿಸಿರುವ ವಿಡಿಯೋ ವೈರಲ್​ ಆಗಿದೆ.

police-assault-on-boy-video-viral
ಅಪ್ರಾಪ್ತ ಆರೋಪಿಗೆ ಥಳಿಸಿದ ಎಸ್​ಐ
author img

By

Published : Sep 29, 2021, 1:31 PM IST

ಆನೇಕಲ್: ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಠಾಣೆಗೆ ಕರೆತಂದಿದ್ದ ಅಪ್ರಾಪ್ತನಿಗೆ ಎಸ್ಐ ಒಬ್ಬರು ಮನಬಂದಂತೆ ಥಳಿಸಿರುವ ವಿಡಿಯೋ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್​ ಆಗಿದೆ.

ಕಳ್ಳತನ ಪ್ರಕರಣವೊಂದರಲ್ಲಿ ವಿಚಾರಣೆಗೆಂದು ಕರೆ ತಂದಿದ್ದ ಹುಡುಗನಿಗೆ ಎಸ್ಐ ಲಾಠಿಯಿಂದ ಬಡಿದ ದೃಶ್ಯ ಇದಾಗಿದೆ. ಹೆಬ್ಬಗೋಡಿ ಠಾಣೆಯಲ್ಲಿ ವಿಚಾರಣೆ ಹೆಸರಲ್ಲಿ ಅಪ್ರಾಪ್ತನ ಮೇಲೆ ಹಲ್ಲೆ ನಡೆದಿದೆ ಎಂಬ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ವೈರಲ್ ವಿಡಿಯೋ

ಇತ್ತೀಚೆಗೆ ಎಎಸ್ಐ ವೆಂಕಟೇಶ್ ಜಿಗಣಿ ಠಾಣೆಯಿಂದ ಬಡ್ತಿ ಪಡೆದು ಇದೀಗ ಹೆಬ್ಬಗೋಡಿ ಠಾಣೆಯಲ್ಲಿ ಎಸ್ಐ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಈ ಬಗ್ಗೆ ಆನೇಕಲ್ ಉಪವಿಭಾಗದ ಪೊಲೀಸರು ಪ್ರಕರಣದ ಹಿನ್ನೆಲೆ ಬಗ್ಗೆ ಪ್ರಕಟಣೆ ಬಿಡುಗಡೆಗೊಳಿಸಿದ್ದು, ದರೋಡೆ ಪ್ರಕರಣದಲ್ಲಿ ಈ ಹುಡುಗ ಭಾಗಿಯಾಗಿದ್ದ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ರಾಯಚೂರು: ಕೌಟುಂಬಿಕ ಕಲಹ ಹಿನ್ನೆಲೆ ಒಂದೇ ಕುಟುಂಬದ ಮೂವರ ಕಗ್ಗೊಲೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.