ETV Bharat / state

ರೌಡಿಶೀಟರ್​ಗೆ ಮಾರಕಾಸ್ತ್ರಗಳಿಂದ ಹಲ್ಲೆ: ಇಬ್ಬರು ಆರೋಪಿಗಳ ಬಂಧನ - ಬೆಂಗಳೂರಿನಲ್ಲಿ ರೌಡಿ ಶೀಟರ್​ಗೆ ಲಾಂಗ್ ನಿಂದ ಹಲ್ಲೆ

ಬೆಂಗಳೂರಿನಲ್ಲಿ ಹಾಡಹಗಲೇ ಮಾರಕಾಸ್ತ್ರದಿಂದ ರೌಡಿಶೀಟರ್ ಮೇಲೆ ಹಲ್ಲೆ ನಡೆಸಿದ ಇಬ್ಬರು ಆರೋಪಿಗಳನ್ನು ಕೊತ್ತನೂರು ಠಾಣಾ ಪೊಲೀಸರು ಬಂಧಿಸಿದ್ದಾರೆ. ಹಲ್ಲೆಯ ವಿಡಿಯೋ ಹತ್ತಿರದ ಸಿಸಿಟಿವಿಯಲ್ಲಿ ಸೆರೆಯಾಗಿದೆ.

police-arrested-two-in-banglore-rowdy-sheeter-attack
ರೌಡಿ ಶೀಟರ್​ಗೆ ಮಾರಕಾಸ್ತ್ರಗಳಿಂದ ಹಲ್ಲೆ:ಇಬ್ಬರು ಆರೋಪಿಗಳು ಅಂದರ್
author img

By

Published : Jun 20, 2022, 9:55 PM IST

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಹಾಡಹಾಗಲೇ ಲಾಂಗ್‌ನಿಂದ ರೌಡಿಶೀಟರ್ ಮೇಲೆ‌ ಮಾರಣಾಂತಿಕವಾಗಿ ಹಲ್ಲೆ‌ ನಡೆಸಿದ ಇಬ್ಬರು ಆರೋಪಿಗಳನ್ನು ಕೊತ್ತನೂರು ಠಾಣಾ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಕುಮಾರ್ ಹಾಗೂ ಮೋಹನ್ ಎಂದು ಗುರುತಿಸಲಾಗಿದೆ. ಹಲ್ಲೆಗೊಳಗಾದ ರೌಡಿಶೀಟರ್ ಜಲಕ್ ದೂರಿನ ಮೇರೆಗೆ ಪೊಲೀಸರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಬೆಂಗಳೂರಿನಲ್ಲಿ ರೌಡಿ ಶೀಟರ್​ಗೆ ಮಾರಕಾಸ್ತ್ರಗಳಿಂದ ಹಲ್ಲೆ, ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಹಲ್ಲೆಗೊಳಗಾದ ಜಲಕ್ ರೌಡಿಶೀಟರ್ ಆಗಿದ್ದು, ದುಡಿಮೆಗಾಗಿ ಗೋಬಿ ಮಂಚೂರಿ ಅಂಗಡಿ ನಡೆಸುತ್ತಿದ್ದ. ಅಪರಾಧ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದ ಜಲಕ್ ಈ ಹಿಂದೆ ಕುಮಾರ್ ಮೇಲೆ‌ ಹಲ್ಲೆ‌ ನಡೆಸಿದ್ದ ಎಂದು ಹೇಳಲಾಗಿದೆ. ಇದರಂತೆ ರೌಡಿಶೀಟರ್ ಚಲನವಲನದ ಬಗ್ಗೆ ನಿಗಾ ವಹಿಸಿದ್ದ ಆರೋಪಿಗಳು ಜೂನ್ 11 ರಂದು ಹೆಗಡೆ ನಗರ ಬಳಿ ಬೈಕ್‌ನಲ್ಲಿ ಒಬ್ಬಂಟಿಯಾಗಿ ಬರುತ್ತಿದ್ದ ಆತನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ. ದಾಳಿಯಲ್ಲಿ ರೌಡಿಶೀಟರ್ ಕೈಗೆ ಬಲವಾದ ಗಾಯವಾಗಿದ್ದು, ಅಲ್ಲಿಂದ ತಪ್ಪಿಸಿಕೊಂಡು ಓಡಿ ಜೀವ ಉಳಿಸಿಕೊಂಡಿದ್ದಾನೆ.

police-arrested-two-in-banglore-rowdy-sheeter-attack
ಬಂಧಿತರಾದ ಆರೋಪಿಗಳು

ಇದನ್ನೂ ಓದಿ: ಕಲಬುರಗಿ: ಪಿಎಸ್​ಐ ನೇಮಕಾತಿ ಅಕ್ರಮ, ಮಾಜಿ ಸೈನಿಕ ಅರೆಸ್ಟ್

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.