ETV Bharat / state

ಬ್ಯಾಂಕ್ ಗ್ರಾಹಕರ ಗಮನ ಬೇರೆಡೆಗೆ ಸೆಳೆದು ಕಳ್ಳತನ : ಓಜಿ ಕುಪ್ಪಂ ಗ್ಯಾಂಗ್ ಸದಸ್ಯರ ಬಂಧನ - police arrested to OG Kuppam gang members

ಬ್ಯಾಂಕ್ ಬಳಿ ಹೊಂಚು ಹಾಕಿ, ಹಣ ಡ್ರಾ ಮಡಿಕೊಂಡು ಬರುವವರನ್ನು ಹಿಂಬಾಲಿಸಿ ಕ್ಷಣಾರ್ಧದಲ್ಲಿ ದರೋಡೆ ಮಾಡುತ್ತಿದ್ದ ಓಜಿಕುಪ್ಪಂ ಗ್ಯಾಂಗ್​ನ ಇಬ್ಬರು ಸದಸ್ಯರನ್ನ ಪೊಲೀಸರು ಬಂಧಿಸಿದ್ದಾರೆ..

ಓಜಿ ಕುಪ್ಪಂ ಗ್ಯಾಂಗ್ ಸದಸ್ಯರ ಬಂಧನ
ಓಜಿ ಕುಪ್ಪಂ ಗ್ಯಾಂಗ್ ಸದಸ್ಯರ ಬಂಧನ
author img

By

Published : Jan 23, 2022, 12:53 PM IST

ಬೆಂಗಳೂರು : ಬ್ಯಾಂಕ್ ಗ್ರಾಹಕರ ಗಮನ ಬೇರೆಡೆಗೆ ಸೆಳೆದು ಕಳ್ಳತನ ಮಾಡುತಿದ್ದ ಕುಖ್ಯಾತ ದರೋಡೆಕೋರರನ್ನು ಕೊತ್ತನೂರು ಪೊಲೀಸರು ಬಂಧಿಸಿದ್ದಾರೆ.

ಓಜಿ ಕುಪಂ ಗ್ಯಾಂಗ್​ನ ಸದಸ್ಯರಾದ ಗಿರಿಕುಮಾರ್, ಷಣ್ಮುಗಂ ಎಂಬುವರು ಬಂಧಿತರು. ಆರೋಪಿಗಳು ನಗರದ ಕೊತ್ತನೂರು, ಅಮೃತಹಳ್ಳಿ, ಯಲಹಂಕ, ಮಾರತ್ತಹಳ್ಳಿ ಸೇರಿದಂತೆ ಹಲವೆಡೆ ದರೋಡೆ ಮಾಡಿದ್ದರು.

ಇವರ ವಿರುದ್ಧ ಬೆಂಗಳೂರು, ಕೋಲಾರ ಜಿಲ್ಲೆಗಳ ವ್ಯಾಪ್ತಿಯಲ್ಲಿ ಒಟ್ಟು 7 ಪ್ರಕರಣ ದಾಖಲಾಗಿವೆ. ಮುಖ್ಯವಾಗಿ ಈ ಗ್ಯಾಂಗ್, ಬ್ಯಾಂಕ್ ಬಳಿ ಹೊಂಚು ಹಾಕಿ, ಹಣ ಡ್ರಾ ಮಡಿಕೊಂಡು ಬರುವವರನ್ನು ಹಿಂಬಾಲಿಸಿ ಕ್ಷಣಾರ್ಧದಲ್ಲಿ ದರೋಡೆ ಮಾಡುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಸಿಸಿಟಿವಿಯಲ್ಲಿ ಕಳ್ಳರ ಚಲನವಲನ ಸೆರೆ

ಮೂರು ಪ್ರಕರಣಗಳು ದಾಖಲು : ಇತ್ತೀಚೆಗೆ ಮನೆ ಕೆಲಸ ಮಾಡಿಸಲು ಬ್ಯಾಂಕ್​ನಿಂದ ನಾಲ್ಕು ಲಕ್ಷ ಡ್ರಾ ಮಾಡಿಕೊಂಡು ಬರುತ್ತಿದ್ದವನನ್ನು ಹಿಂಬಾಲಿಸಿ ದರೋಡೆ ಮಾಡಿದ್ದರು. ಆರೋಪಿಗಳ ವಿರುದ್ಧ ಕೊತ್ತನೂರು ಠಾಣೆ ವ್ಯಾಪ್ತಿಯಲ್ಲೇ ಒಂದರ ಹಿಂದೆ ಒಂದರಂತೆ ಮೂರು ಪ್ರಕರಣ ದಾಖಲಾಗಿತ್ತು.

ಪೊಲೀಸರಿಗೆ ಸಿಕ್ಕಿಬಿದ್ದ ಖದೀಮರು : ಹಲವು ತಂಡಗಳ ಮೂಲಕ ಆರೋಪಿಗಳ ಪತ್ತೆಗೆ ಬಲೆ ಬೀಸಿ ಕಾಯುತ್ತಿದ್ದ ಪೊಲೀಸರಿಗೆ ಕುಖ್ಯಾತ ಗ್ಯಾಂಗ್​ನ ಸದಸ್ಯರು ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾರೆ. ಇಂದಿರಾನಗರದಲ್ಲಿ ದರೋಡೆಗೆ ಹೊಂಚು ಹಾಕಿ ಬ್ಯಾಂಕ್ ‌ಮುಂದೆ ಕಾಯುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ. ಗ್ಯಾಂಗ್​ನಲ್ಲಿ ಇನ್ನೂ ಹಲವರಿರುವ ಶಂಕೆಯಿದ್ದು, ಹೆಚ್ಚಿನ ವಿಚಾರಣೆ ಮುಂದುವರೆಸಲಾಗಿದೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.