ETV Bharat / state

ಕೆಪಿಸಿಸಿ ಸೈಕಲ್ ಜಾಥಾಗೆ ಆರಂಭದಲ್ಲೇ ತಡೆ: ಬೆಂಗಳೂರಲ್ಲಿ ಕಾಂಗ್ರೆಸ್​ ಮುಖಂಡರ ಬಂಧನ

author img

By

Published : Jul 7, 2021, 12:45 PM IST

ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ನಾಯಕರು ಸಿಲಿಕಾನ್​ ಸಿಟಿಯ ವಿವಿಧ ಭಾಗಗಳಲ್ಲಿ ಇಂದು ಸೈಕಲ್ ಜಾಥಾ ಹಮ್ಮಿಕೊಂಡಿದದ್ದರು. ಆದರೆ ಕೋವಿಡ್​​ ನಿಯಮ ಜಾರಿ ಹಿನ್ನೆಲೆಯಲ್ಲಿ ಪೊಲೀಸರು ಕಾಂಗ್ರೆಸ್​ ನಾಯಕರನ್ನು ಬಂಧಿಸಿದ್ದಾರೆ.

Police arrested congress leaders in Bangalore
ಮುಖಂಡರನ್ನು ಬಂಧಿಸಿದ ಪೊಲೀಸರು

ಬೆಂಗಳೂರು: ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ನಾಯಕರು ಸಿಲಿಕಾನ್​ ಸಿಟಿಯ ವಿವಿಧ ಭಾಗಗಳಲ್ಲಿ ಇಂದು ಸೈಕಲ್ ಜಾಥ ಹಮ್ಮಿಕೊಂಡಿದ್ದರು. ಅದರಂತೆ ಪ್ರದೇಶ ಕಾಂಗ್ರೆಸ್ ಸಮಿತಿ ಕಚೇರಿ ಮುಂಭಾಗದಿಂದ ಪ್ರತಿಭಟನಾ ಮೆರವಣಿಗೆ ಆರಂಭಿಸಿದ ನಾಯಕರನ್ನು ಅನತಿ ದೂರದಲ್ಲಿ ಪೊಲೀಸರು ತಡೆದು ಬಂಧಿಸಿದ ಘಟನೆ ನಡೆದಿದೆ.

ಕೆಪಿಸಿಸಿ ಸೈಕಲ್ ಜಾಥಾಗೆ ತಡೆಯೊಡ್ಡಿದ ಪೊಲೀಸರು

ರಾಜ್ಯದ ವಿವಿಧ ಭಾಗಗಳಲ್ಲಿ ಏಕಕಾಲಕ್ಕೆ ಕಾಂಗ್ರೆಸ್​​ ಸೈಕಲ್ ಜಾಥಾ ಆಯೋಜನೆ ಮಾಡಲಾಗಿದ್ದು, ಪ್ರದೇಶ ಕಾಂಗ್ರೆಸ್ ಸಮಿತಿ ಕೇಂದ್ರ ಕಚೇರಿ ಮುಂಭಾಗ ಕಾರ್ಯಾಧ್ಯಕ್ಷರಾದ ರಾಮಲಿಂಗಾರೆಡ್ಡಿ ಹಾಗೂ ಸಲೀಂ ಅಹ್ಮದ್ ನೇತೃತ್ವದಲ್ಲಿ ನೂರಕ್ಕೂ ಹೆಚ್ಚು ಕಾರ್ಯಕರ್ತರು ಸೈಕಲ್ ಜಾಥಾಗೆ ಚಾಲನೆ ನೀಡಿದರು.

ಕೋವಿಡ್ ನಿಯಮಾವಳಿ ಹಿನ್ನೆಲೆಯಲ್ಲಿ ಮೆರವಣಿಗೆ, ಸೈಕಲ್ ಜಾಥಾಗಳನ್ನು ನಡೆಸಲು ಸರ್ಕಾರದ ಒಪ್ಪಿಗೆ ಇಲ್ಲ. ಅಲ್ಲದೆ ಮುಂಚಿತವಾಗಿ ಪರವಾನಗಿ ಪಡೆಯದ ಹಿನ್ನೆಲೆಯಲ್ಲಿ ಜಾಥಾವನ್ನು ತಡೆದು ಪೊಲೀಸರು ಬಂಧಿಸಿದರು. ರಾಜ್ಯದ ಹಾಗೂ ನಗರದ ವಿವಿಧೆಡೆ ಇಂದು ಇದೇ ರೀತಿ ಸೈಕಲ್ ಜಾಥಾ ನಡೆಸಲು ಮುಂದಾದ ಕಾರ್ಯಕರ್ತರನ್ನು ತಡೆಯಲಾಗಿದೆ.

ಕೆಲವೆಡೆ ಪೊಲೀಸರು ಬಿಗಿ ಬಂದೋಬಸ್ತ್ ನಲ್ಲಿ ಅರ್ಧ ಕಿ.ಮೀನಷ್ಟು ಮೆರವಣಿಗೆ ನಡೆಸಲು ಅವಕಾಶ ನೀಡಿದ್ದಾರೆ. ಆದರೆ ಕ್ವೀನ್ಸ್ ರಸ್ತೆಯ ಸಂಚಾರ ದಟ್ಟಣೆ ವಿಪರೀತವಾಗಿದ್ದು, ಈ ಸಂದರ್ಭದಲ್ಲಿ ಜಾಥಾ ನಡೆಸಿದರು. ಸಂಚಾರದಟ್ಟಣೆ ಜೊತೆ ಕೋವಿಡ್ ನಿಯಮದ ಉಲ್ಲಂಘನೆ ಆಗಲಿದೆ. ಈ ಕಾರಣಕ್ಕಾಗಿ ಪೊಲೀಸರು ಜಾಥಾ ನಡೆಸಲು ಅವಕಾಶ ನೀಡಲಿಲ್ಲ. ಕೆಪಿಸಿಸಿ ಕಾರ್ಯಾಧ್ಯಕ್ಷರಾದ ರಾಮಲಿಂಗಾರೆಡ್ಡಿ, ಸಲೀಂ ಅಹ್ಮದ್, ಶಾಸಕ ರಿಜ್ವಾನ್ ಅರ್ಷದ್ ಸೇರಿದಂತೆ ಹಲವು ನಾಯಕರನ್ನು ಬಂಧಿಸಿ ಕರೆದೊಯ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.