ಬೆಂಗಳೂರು: ಎಟಿಎಂ ಮಷಿನ್ಗೆ ಸ್ಕಿಮರ್ ಅಳವಡಿಸಿ ಗ್ರಾಹಕರ ಡೇಟಾವನ್ನು ಕದ್ದು, ನಂತರ ನಕಲಿ ಎಟಿಎಂಗಳನ್ನು ತಯಾರಿ ಮಾಡಿ ಗ್ರಾಹಕರ ಹಣವನ್ನು ಎಗರಿಸುತ್ತಿದ್ದ ಆರೋಪಿಗಳನ್ನು ಉತ್ತರ ವಿಭಾಗದ ಪೊಲೀಸರು ಬಂಧಿಸಿದ್ದಾರೆ.
ಫಿಲಿಕ್ಸ್ ಕಿಸಿಬೊ, ಕಹಿರೊನೊ ಅಬ್ದುಲ್ಲಾ ಬಂಧಿತರು. ಈ ಆರೋಪಿಗಳು ಗಂಗಾನಗರ ಬಳಿ ಇರುವ ಯೂನಿಯನ್ ಬ್ಯಾಂಕ್ನ ಎಟಿಎಂನಲ್ಲಿ ಕಾರ್ಡ್‌ಗಳನ್ನ ಹಿಡಿದು ಹಣ ಡ್ರಾ ಮಾಡಿದ್ದರು.
ಎಟಿಎಂನ ಉಸ್ತುವಾರಿ ಉಮಾ ಮಹೇಶ್ವರ್ ಅವರು ಎಟಿಎಂ ಕಂಡಿಷನ್ ಹಾಗೂ ಸಿಸಿಟಿವಿ ಪರಿಶೀಲನೆ ಮಾಡಿದಾಗ ಆರೋಪಿಗಳು ಎಟಿಎಂನಲ್ಲಿ ತುಂಬಾ ಹೊತ್ತು ಇದ್ದು, ಸ್ಕಿಮರ್ ಮಷನ್ ಅಳವಡಿಸಿ ಬೇರೆ ಬೇರೆ ಕಾರ್ಡ್‌ಗಳನ್ನ ಹಿಡಿದುಕೊಂಡು ಹಣ ಡ್ರಾ ಮಾಡ್ತಿದ್ರು. ಹೀಗಾಗಿ ಅನುಮಾನ ಬಂದು ಆರ್.ಟಿನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಸದ್ಯ ಉತ್ತರ ವಿಭಾಗ ಡಿಸಿಪಿ ಶಶಿಕುಮಾರ್ ತಂಡ ಆರೋಪಿಗಳನ್ನು ಬಂಧಿಸಿ ಅವರಿಂದ 13 ವಿವಿಧ ಬ್ಯಾಂಕಿನ ಎಟಿಎಂ ಕಾರ್ಡ್, 3 ಮೊಬೈಲ್ ಫೋನ್, 1 ಲ್ಯಾಪ್ಟಾಪ್, ಸ್ಕಿಮರ್ ಮಷಿನ್, ಹಿಡನ್ ಕ್ಯಾಮರಾ ವಶಪಡಿಸಿಕೊಂಡಿದ್ದಾರೆ. ಹೆಚ್ಚಿನ ತನಿಖೆಯನ್ನು ಮುಂದುವರೆಸಿದ್ದಾರೆ.