ETV Bharat / state

ಬಾಲ್ಯವಿವಾಹಕ್ಕೆ ಮುಕ್ತಿ... ಮದ್ಯ ವ್ಯಸನ ಅಂತ್ಯಕ್ಕೆ ಪೊಲೀಸ್​- ಆರೋಗ್ಯ ಇಲಾಖೆ ಸಂಕಲ್ಪ! - undefined

ಪೊಲೀಸ್ ಹಾಗೂ ಆರೋಗ್ಯ ಇಲಾಖೆ ವತಿಯಿಂದ ಬಾಲ್ಯ ವಿವಾಹ ತಡೆ ಹಾಗೂ ಮಾದಕ ವ್ಯಸನಿ ನಿಯಂತ್ರಣ ಅರಿವು ಕಾರ್ಯಕ್ರಮವನ್ನು ಬೆಂಗಳೂರಿನಲ್ಲಿ ಆಯೋಜಿಸಲಾಗಿತ್ತು.

ಅರಿವು ಕಾರ್ಯಕ್ರಮ
author img

By

Published : Jun 13, 2019, 9:44 AM IST

ಬೆಂಗಳೂರು : ಶತಮಾನಗಳಿಂದಲೂ ಸಾಮಾಜಿಕ ಪಿಡುಗಾಗಿರುವ ಮಾದಕ ವ್ಯಸನ ಹಾಗೂ ಬಾಲ್ಯ ವಿವಾಹ ಪದ್ದತಿ ನಿರ್ಮೂಲನೆಗಾಗಿ ಆರೋಗ್ಯ ಮತ್ತು ಪೊಲೀಸ್​ ಇಲಾಖೆ ಜಂಟಿಯಾಗಿ ಅರಿವು ಮೂಡಿಸುವ ಕೆಲಸ ಮಾಡುತ್ತಿವೆ. ಈ ಪಿಡುಗು ತಡೆಗಟ್ಟಲು ಬೆಂಗಳೂರಿನ ವೈಟ್ ಫೀಲ್ಡ್ ವಿಭಾಗದ ಪೊಲೀಸರು ಹಾಗೂ ಆರೋಗ್ಯ ಇಲಾಖೆ ಜಂಟಿಯಾಗಿ ಹೊಸ ಕಾರ್ಯಕ್ಕೆ ಮುಂದಾಗಿವೆ.

ಬಾಲ್ಯ ವಿವಾಹ ತಡೆ ಹಾಗೂ ಮಾದಕ ವ್ಯಸನಿ ನಿಯಂತ್ರಣ ಅರಿವು ಕಾರ್ಯಕ್ರಮ

ಬೆಂಗಳೂರಿನ ವೈಟ್ ಫೀಲ್ಡ್ ವಿಭಾಗದ ಪೊಲೀಸರು ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು, ಆಶಾ ಕಾರ್ಯಕರ್ತರೊಂದಿಗೆ ಸೇರಿ ಬಾಲ್ಯ ವಿವಾಹ ಹಾಗೂ ಮಾದಕ ವ್ಯಸನ ನಿಯಂತ್ರಣ ಬಗ್ಗೆ ಅರಿವು ಕಾರ್ಯಗಾರ ನಡೆಸಿದ್ದಾರೆ.

ವೈಟ್ ಫೀಲ್ಡ್ ವಿಭಾಗದ ಕಾಡುಗೋಡಿ ಹೋಟೆಲ್ ಒಂದರಲ್ಲಿ ಕಾರ್ಯಗಾರ ಆಯೋಜಿಸಿ ಮದ್ಯ ವ್ಯಸನ ಹಾಗೂ ಬಾಲ್ಯ ವಿವಾಹ ನಿರ್ಮೂಲನೆ ಬಗ್ಗೆ ಜಾಗೃತಿ ಮೂಡಿಸಲಾಯಿತು. ಈ ಕಾರ್ಯಾಗಾರದಲ್ಲಿ ಕಾಡುಗೋಡಿ, ವೈಟ್ ಫೀಲ್ಡ್, ಕೆ.ಆರ್.ಪುರ, ಮಹದೇವಪುರ, ವರ್ತೂರು ಪೋಲೀಸ್ ಠಾಣೆಗಳ ವ್ಯಾಪ್ತಿಯ ಆಶಾ ಕಾರ್ಯಕರ್ತರು ಭಾಗವಹಿಸಿದ್ದು ಬಾಲ್ಯವಿವಾಹದಿಂದ ಮಹಿಳೆ ಗರ್ಭವತಿಯಾದಾಗ ಹಾಗೂ ಮಾದಕ ವ್ಯಸನದಿಂದ ಆಕೆಗೆ ಹುಟ್ಟುವ ಮಗುವಿನ ಮೇಲೆ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ತಿಳಿಸಿ ಈ ಸಮಸ್ಯೆಯನ್ನು ನಿಯಂತ್ರಿಸುವ ಕೆಲಸಕ್ಕೆ ಪೊಲೀಸರು ಮುಂದಾಗಿದ್ದಾರೆ.

ಇನ್ನು ಪೊಲೀಸರ ಮಾಹಿತಿ ಪ್ರಕಾರ ಇಂದಿನ ಆಧುನಿಕ ಯುಗದಲ್ಲೂ ಕೆಲವೊಂದು ಸಮುದಾಯದವರು 18 ವರ್ಷಕ್ಕಿಂತ ಮುಂಚಿತವಾಗಿಯೇ ಹೆಣ್ಣುಮಕ್ಕಳಿಗೆ ವಿವಾಹ ಮಾಡುತ್ತಿದ್ದಾರೆ. ಅಂತಹ ಪೋಷಕರು, ಪುರೋಹಿತರ ಜೊತೆಗೆ ಮದುವೆಗೆ ಬರುವ ಸಾರ್ವಜನಿಕರ ಮೇಲೂ ಪೋಕ್ಸೋ ಕಾಯ್ದೆ ದಾಖಲಿಸುವಂತೆ ಹೊಸ ಕಾಯ್ದೆ ಜಾರಿಗೊಳಿಸಿದ್ದು, ಇದು ಎಲ್ಲರಿಗೂ ತಿಳಿಸಬೇಕಾಗಿದೆ. ಈ ಉದ್ದೇಶದಿಂದಲೇ ಆರೋಗ್ಯ ಇಲಾಖೆ ಆಶಾ ಕಾರ್ಯಕರ್ತರನ್ನು ಒಗ್ಗೂಡಿಸಿ ಜನರಿಗೆ ಅರಿವು ಮೂಡಿಸುವ ಕಾರ್ಯಕ್ಕೆ ಮುಂದಾಗಿದ್ದೇವೆ ಎಂದು ಎರಡೂ ಇಲಾಖೆ ಅಧಿಕಾರಿಗಳು ಕಾರ್ಯಗಾರದ ಉದ್ದೇಶವನ್ನ ಸ್ಪಷ್ಟ ಪಡಿಸಿದರು.

Intro:ಪೊಲೀಸ್ ಹಾಗೂ ಆರೋಗ್ಯ ಇಲಾಖೆ ವತಿಯಿಂದ ಬಾಲ್ಯವಿವಾಹ ಹಾಗೂ ಮಾದಕ ವ್ಯಸನಿ ತಡೆ ಕಾರ್ಯಗಾರ

ಶತಶತಮಾನಗಳಿಂದಲು ಸಾಮಾಜಿಕ ಪಿಡುಗಾಗಿರುವ ಮಾದಕ ವ್ಯಸನ ಹಾಗೂ ಬಾಲ್ಯ ವಿವಾಹ ಪದ್ದತಿ ಇಂದಿನ ಆದುಕ ಯುಗದಲ್ಲಿ ಯುವತಿಯರು ಹಾಗೂ ಮಹಿಳೆಯರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಿದ್ದು, ಇದನ್ನು ತಡೆಗಟ್ಟಲು ಬೆಂಗಳೂರಿನ ವೈಟ್ ಪೀಲ್ಡ್ ವಿಭಾಗದ ಪೊಲೀಸರು ಹಾಗೂ ಆರೋಗ್ಯ ಇಲಾಖೆ ಜಂಟಿಯಾಗಿ ಹೊಸ ಕಾರ್ಯಕ್ಕೆ ಮುಂದಾಗಿದ್ದಾರೆ. ಅದು ಹೇಗೆ, ಎಲ್ಲಿ ಅಂತೀರ ಈ ಸ್ಟೋರಿ ನೋಡಿ.

ಹೀಗೆ ಬೆಂಗಳೂರಿನ ವೈಟ್ ಪೀಲ್ಡ್ ವಿಭಾಗದ ಪೊಲೀಸರು, ಆರೋಗ್ಯ ಇಲಾಖೆ ಅಧಿಕಾರಿಗಳು ಆಶಾ ಕಾರ್ಯಕರ್ತರೊಂದಿಗೆ ಸೇರಿ ಬಾಲ್ಯ ವಿವಾಹ ಹಾಗೂ ಮಾದಕ ವ್ಯಸನ ನಿಯಂತ್ರಣ ಬಗ್ಗೆ ಕಾರ್ಯಗಾರ ನಡೆಸಿದ್ದಾರೆ. ವೈಟ್ ಪೀಲ್ಡ್ ವಿಭಾಗ ಕಾಡುಗೋಡಿ ಹೋಟೆಲ್ ಒಂದರಲ್ಲಿ ಆಯೋಜಿಸಿದ್ದ ಈ ಕಾರ್ಯಗಾರದಲ್ಲಿ ಕಾಡುಗೋಡಿ, ವೈಟ್ ಪೀಲ್ಡ್, ಕೆ.ಆರ್.ಪುರ, ಮಹದೇವಪುರ, ವರ್ತೂರು ಪೋಲೀಸ್ ಠಾಣ ವ್ಯಾಪ್ತಿಯ ಆಶಾ ಕಾರ್ಯಕರ್ತರು ಭಾಗವಹಿಸಿದ್ದು ಬಾಲ್ಯವಿವಾಹದಿಂದ ಆಕೆ ಗರ್ಭವತಿಯಾದಾಗ ಹಾಗು ಮಾದಕ ವ್ಯಸನದಿಂದ ಆಕೆಗೆ ಹುಟ್ಟುವ ಮಗುವಿನ ಮೇಲೆ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಪ್ರತಿಯೊಂದು ಮನೆ ಮನೆಗೆ ತಿಳಿಸಿ ಈ ಸಮಸ್ಯೆಯನ್ನು ನಿಯಂತ್ರಿಸುವ ಕೆಲಸಕ್ಕೆ ಪೊಲೀಸರು ಮುಂದಾಗಿದ್ದಾರೆ.

Body:ಇನ್ನು ಪೊಲೀಸ್ ಮಾಹಿತಿ ಪ್ರಕಾರ ಇಂದಿನ ಆಧುನಿಕ ಯುಗದಲ್ಲು ಕೆಲವೊಂದು ಸಮುದಾಯದವರು 18 ವರ್ಷಕ್ಕಿಂತ ಮುಂಚಿತವಾಗಿಯೇ ಹೆಣ್ಣುಮಕ್ಕಳಿಗೆ ವಿವಾಹ ಮಾಡುತ್ತಿದ್ದು, ಅಂತಹ ಪೋಷಕರು, ಪುರೋಹಿತರ ಜೊತೆಗೆ ಮದುವೆಗೆ ಬರುವ ಸಾರ್ವಜನಿಕರ ಮೇಲು ಪೋಕ್ಸೋ ಕಾಯ್ದೆ ದಾಖಲಿಸುವಂತೆ ಹೊಸ ಕಾಯ್ದೆ ಜಾರಿಗೊಳಿಸಿದ್ದು ಇದು ಎಲ್ಲರಿಗು ತಿಳಿಯಪಡಿಸುವ ಉದ್ದೇಶದಿಂದ ಆಯೋಗ್ಯ ಇಲಾಖೆಯ ಆಶಾ ಕಾರ್ಯಕರ್ತರನ್ನು ಒಗ್ಗೂಡಿಸಿಕೊಂಡು ಜನರಿಗೆ ಅರಿವು ಮೂಡಿಸುವ ಕಾರ್ಯಕ್ಕೆ ಪೊಲೀಸ್ ಹಾಗೂ ಆರೋಗ್ಯ ಇಲಾಖೆ ಮುಂದಾಗಿದೆ.

Conclusion:ಒಟ್ಟಾರೆ ಸಾಮಾಜಿಕ ಪಿಡುಗಾಗಿರುವ ಮಾದಕ ವ್ಯಸನ ಹಾಗೂ ಬಾಲ್ಯವಿವಾಹ ತಡೆಗೆ ಅದೆಷ್ಟು ಕಾನೂನುಗಳನ್ನು ರೂಪಿಸಿ, ಪಠ್ಯಪುಸ್ತಕ, ಜಾಹಿರಾತು ಮೂಲಕ ಸಾರ್ವಜನಿಕರಿಗೆ ಅರಿವು ಮೂಡಿಸಿದರು ಏಚ್ಚೇತ್ತುಕೊಳ್ಳದ ಜನ ಇನ್ನಾದರು ಅರಿತುಕೊಂಡ ಇದಕ್ಕೆ ಮುಕ್ತಿ ಕಲ್ಪಿಸುತ್ತಾರ ಎಂಬುದನ್ನು ಕಾದು ನೋಡಬೇಕಿದೆ.
ಧರ್ಮರಾಜು ಎಂ ಕೆಆರ್ ಪುರ.

೧) ಬೈಟ್: ಅಬ್ದುಲ್ ಅಹದ್, ಡಿಸಿಪಿ ವೈಟ್ ಪೀಲ್ಡ್ ವಿಭಾಗ

೨) ಬೈಟ್: ನದೀಮ್ ಅಹ್ಮದ್, ಆರೋಗ್ಯ ಅಧಿಕಾರಿ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.