ETV Bharat / state

ಏರೋ ಶೋ ಉದ್ಘಾಟಿಸಿದ ಪ್ರಧಾನಿ ಮೋದಿ: ಬಾನಂಗಳದಲ್ಲಿ ಶಕ್ತಿ ಪ್ರದರ್ಶಿಸಿದ ಲೋಹದ ಹಕ್ಕಿಗಳು - ಏರೋಸ್ಪೇಸ್ ಮತ್ತು ರಕ್ಷಣಾ ಪ್ರದರ್ಶನ

ಇಂದಿನಿಂದ ಪ್ರಾರಂಭಗೊಂಡು ಐದು ದಿನಗಳ ಕಾಲ ಯಲಹಂಕ ವಾಯುನೆಲೆಯಲ್ಲಿ ವೈಮಾನಿಕ ಪ್ರದರ್ಶನ ನಡೆಯಿದ್ದು, ಇಂದಿನ ಶೋಗೆ ಜನಸಾಗರವೇ ಹರಿದು ಬಂದಿತ್ತು. ಮಾರ್ಗ ಬದಲಾವಣೆ ಕ್ರಮ ಕೈಗೊಂಡರೂ ಟ್ರಾಫಿಕ್​ ಜಾಂ ಸಮಸ್ಯೆಯನ್ನು ಜನರು ಎದುರಿಸುವಂತಾಗಿತ್ತು.

metal birds show their power in the sky
ಬಾನಂಗಳದಲ್ಲಿ ಶಕ್ತಿ ಪ್ರದರ್ಶಿಸಿದ ಲೋಹದ ಹಕ್ಕಿಗಳು
author img

By

Published : Feb 13, 2023, 1:53 PM IST

Updated : Feb 13, 2023, 3:27 PM IST

ಬಾನಂಗಳದಲ್ಲಿ ಶಕ್ತಿ ಪ್ರದರ್ಶಿಸಿದ ಲೋಹದ ಹಕ್ಕಿಗಳು

ಬೆಂಗಳೂರು: ನಗರದ ಯಲಹಂಕ ವಾಯುನೆಲೆಯಲ್ಲಿ ನಡೆಯುತ್ತಿರುವ 14ನೇ ಆವೃತ್ತಿಯ ಏರೋ ಇಂಡಿಯಾ 2023 ವೈಮಾನಿಕ ಪ್ರದರ್ಶನಕ್ಕೆ ಇಂದು ಬೆಳಗ್ಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆಯನ್ನು ನೀಡಿದ್ದು, ವೈಮಾನಿಕ ಪ್ರದರ್ಶನದಲ್ಲಿ ಲೋಹದ ಹಕ್ಕಿಗಳ ಕಲರವ ನಡೆಯಿತು. ಐದು ದಿನಗಳ ಕಾಲ ನಡೆಯಲಿರುವ ಏರೋ ಇಂಡಿಯಾ ವೈಮಾನಿಕ ಪ್ರದರ್ಶನದಲ್ಲಿ ನಿಗದಿಗೊಂಡ ಅವಧಿಯಲ್ಲಿ ವೈವಿಧ್ಯಮಯ ವೈಮಾನಿಕ ಪದರ್ಶನವಿರಲಿದೆ. ಇಂದಿನ ಏರೋ ಶೋ ಕಣ್ತುಂಬಿಕೊಳ್ಳಲು ಜನ ಸಾಗರವೇ ಹರಿದು ಬಂದಿತ್ತು.

ಈ ಬಾರಿಯ ಏರ್ ಶೋದಲ್ಲಿ ವಿದೇಶದಿಂದ 109 ಪ್ರದರ್ಶಕರು ಸೇರಿದಂತೆ ಒಟ್ಟು 807 ಪ್ರದರ್ಶಕರು ಭಾಗವಹಿಸಿದ್ದಾರೆ. ಉದ್ಘಾಟನೆ ಕಾರ್ಯಕ್ರಮದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಸಿಎಂ ಬೊಮ್ಮಾಯಿ ಸೇರಿ ಹಲವು ಗಣ್ಯರು ಹಾಜರಿದ್ದರು. ಏರೋಸ್ಪೇಸ್ ಮತ್ತು ರಕ್ಷಣಾ ಪ್ರದರ್ಶನದಲ್ಲಿ ಹಲವು ಯುದ್ಧ ವಿಮಾನಗಳು ಮತ್ತು ಹೆಲಿಕಾಪ್ಟರ್‌ಗಳು ಪ್ರದರ್ಶನ ನೀಡಿದವು.

ಆತ್ಮನಿರ್ಭರ ಭಾರತ ಪರಿಕಲ್ಪನೆಯ ವೈಮಾನಿಕ ಪ್ರದರ್ಶನ ಇಂದು ಬೆಳಗ್ಗೆ 9 ರಿಂದ ಆರಂಭವಾಗಿ 11.55 ರವರೆಗೆ ಯಲಹಂಕದ ವಾಯುನೆಲೆಯಲ್ಲಿ ನಡೆದಿದ್ದು, ಬೆಳಗ್ಗೆಯಿಂದಲೇ ಬಿಸಿಲ ಝಳದಲ್ಲೇ ಆಗಮಿಸಿದ್ದ ಗಣ್ಯರು ವೈಮಾನಿಕ ಪ್ರದರ್ಶನವನ್ನು ವೀಕ್ಷಿಸಿದರು. ಸೂರ್ಯ ಕಿರಣ್ ವಿಮಾನಗಳು, ತೇಜಸ್ ಯುದ್ಧ ವಿಮಾನಗಳು ಆಕಾಶದಲ್ಲಿ ಮೇಲ್ಮುಖ, ಕೆಳಮುಖವಾಗಿ ವೇಗವಾಗಿ ಸಾಗುತ್ತಿದ್ದರೆ, ಪ್ರದರ್ಶನ ನೋಡಲು ವಾಯುನೆಲೆಗೆ ಬಂದವರು ಮೂಕವಿಸ್ಮಿತರಾದರು.

ಸುಧಾರಿತ ಯುದ್ಧ ವಿಮಾನಕ್ಕೆ ಸಮರ್ಥ ಪೈಲೆಟ್​ಗಳನ್ನು ತಯಾರು ಮಾಡಲು ತರಬೇತಿ ನೀಡುವ ರಫೆಲ್ ಯುದ್ಧ ವಿಮಾನಗಳು ಪ್ರದರ್ಶನದ ಆರಂಭದಲ್ಲಿ ಹಾಗೂ ಕೊನೆಯಲ್ಲಿ ಹಾರಿ ತನ್ನ ಚಮತ್ಕಾರವನ್ನು ತೋರಿದ್ದು ವಿಶೇಷವಾಗಿತ್ತು. ಪ್ರದರ್ಶನದಲ್ಲಿ ಸಾರಂಗ್ ಹೆಲಿಕಾಪ್ಟರಗಳು, ಹೆಚ್.ಎ.ಎಲ್ ನಿರ್ಮಿತ 15 ಹೆಲಿಕಾಪ್ಟರ್ ಯಲಹಂಕ ವಾಯುನೆಲೆಯಲ್ಲಿ ನಡೆಸಿದ ಹಾರಾಟ ನೋಡುಗರನ್ನು ಕಣ್ಮನ ಸೆಳೆಯಿತು.

ಸೂರ್ಯ ಕಿರಣ್ ವಿಮಾನಗಳು ಕೆಲವೊಮ್ಮೆ ಭೂಮಿಯ ಸನಿಹಕ್ಕೆ, ಮತ್ತೊಮ್ಮೆ ಏಕಾಏಕಿ ಆಕಾಶದೆತ್ತರಕ್ಕೆ ಅತ್ಯಧಿಕ ವೇಗದಲ್ಲಿ ಹಾರಿ ಮತ್ತೆ ವಿರುದ್ಧ ದಿಕ್ಕಿನಲ್ಲಿ ಸಾಗುತ್ತಿದ್ದರೆ ವಾಯುನೆಲೆಯಿದ್ದ ವೀಕ್ಷಕರು ಚಪ್ಪಾಳೆ ತಟ್ಟಿ ಸಂಭ್ರಮಿಸಿದರು. 6 ಸುಧಾರಿತ ಹಗುರ ಹೆಲಿಕಾಪ್ಟರ್, ಹಗುರ ಉಪಯೋಗಿ ಹೆಲಿಕಾಪ್ಟರ್ ಹಾಗೂ ಮೂರು ಹಗುರ ಯುದ್ಧ ಹೆಲಿಕಾಪ್ಟರ್ ಬಾನಲ್ಲಿ ತಮ್ಮ ವೈಮಾನಿಕ ಕಸರತ್ತು ಪ್ರದರ್ಶಿಸಿದವು. ಅಮೆರಿಕ ನಿರ್ಮಿತ ಗ್ಲೋಬ್ ಮಾರ್ಸ್ಟ್ ದೇಶೀಯ ರಕ್ಷಣಾ ಪಡೆಗೆ ಸೇರ್ಪಡೆಯಾಗಿದ್ದು, ಸೂರ್ಯ ಕಿರಣ್ ವಿಮಾನದ ಜೊತೆ ಹಾರಾಟ ನಡೆಸಿದವು.

ಈ ಬಾರಿಯ ಏರ್ ಶೋನಲ್ಲಿ 35,000 ಚದರ ಅಡಿಗಳಲ್ಲಿ ಎಕ್ಸಿಬಿಷನ್ ಆಯೋಜನೆ ಮಾಡಲಾಗಿದೆ. ಸಾರ್ವಜನಿಕರಿಗೆ ಜಿಕೆವಿಕೆ ಹಾಗೂ ಜಕ್ಕೂರಿನಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಇಂಡಿಯಾ ಪೆವಿಲಿಯನ್​ನಲ್ಲಿ 115 ಕಂಪನಿಗಳು ಭಾಗಿಯಾಗಿದ್ದು, 227 ಉತ್ಪನ್ನಗಳ ಪ್ರದರ್ಶನ ನಡೆಯುತ್ತಿದೆ. ಈ ವೇಳೆ ವಿವಿಧ 251 ಒಪ್ಪಂದಗಳು ನಡೆಯಲಿವೆ. ಏರೋ ಇಂಡಿಯಾ 2023 ವೈಮಾನಿಕ ಪ್ರದರ್ಶನದಲ್ಲಿ ಅಮೆರಿಕದ ಸೇನಾ ಪಡೆಗಳ ವಿವಿಧ ವಿಭಾಗಗಳ ಸಿಬ್ಬಂದಿ ಹಾಗೂ ಅತ್ಯಾಧುನಿಕ ವಿಮಾನಗಳು ಭಾಗವಹಿಸಲಿವೆ. ಜತೆಗೆ ದೊಡ್ಡ ವಾಣಿಜ್ಯ ನಿಯೋಗವೂ ಸಹ ಭಾಗಿಯಾಗಲಿವೆ. ಕೊನೆಯ ಎರಡು ದಿನ 16 ಮತ್ತು 17 ರಂದು ಸಾರ್ವಜನಿಕರ ವೀಕ್ಷಣೆಗೆ ಅನುಕೂಲವಾಗುವಂತೆ ಬೆಂಗಳೂರಿನ ವಿವಿಧ ಬಡಾವಣೆಗಳಿಂದ ಬಿಎಂಟಿಸಿ ಬಸ್ ವ್ಯವಸ್ಥೆ ಮಾಡಲಾಗಿದೆ.

ಏರೋ ಇಂಡಿಯಾ 2023 ರ ಹಿನ್ನೆಲೆ ಬಾಗಲೂರು ಕ್ರಾಸ್ ಜಂಕ್ಷನ್ ಬಳಿ ಫುಲ್ ಟ್ರಾಫಿಕ್ ಜಾಮ್: ಯಲಹಂಕ ವಾಯುನೆಲೆಯತ್ತ ಸಾವಿರಾರು ವಾಹನಗಳು ಒಮ್ಮೆಲೆ ಬಂದ ಪರಿಣಾಮ ವಾಯುನೆಲೆ ಸಮೀಪದ ಬಾಗಲೂರು ಕ್ರಾಸ್ ಬಳಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ವಿಮಾನ ನಿಲ್ದಾಣದತ್ತ ಸಾಗುವ, ಏರೋ ಶೋ ನತ್ತ ತೆರಳುವ ವಾಹನಗಳ ಚೆಕಿಂಗ್ ಮತ್ತು ಪಾಸಿಂಗ್ ವೇಳೆಯ ಕೆಲವು ನಿಮಿಷಗಳ ವಿಳಂಬದಿಂದ ಸುಮಾರು 3 ಕಿಮೀವರೆಗೂ ಟ್ರಾಫಿಕ್ ಜಾಮ್ ಉಂಟಾಗಿತ್ತು.

ಜೊತೆಗೆ ಸಿಎಂ ಆಗಮನ, ಗಣ್ಯರ ಆಗಮನ, ಏರೋ ಶೋಗೆ ತೆರಳುವ ಜನರಿಂದ ಟ್ರಾಫಿಕ್ ಜಾಮ್ ಆಗಿತ್ತು. ಇನ್ನು ದೇವನಹಳ್ಳಿ, ಏರ್ಪೋರ್ಟ್ ಕಡೆಯಿಂದ ಬೆಂಗಳೂರಿನತ್ತ ಬರುವ ವಾಹನ ಸವಾರರಿಂದಲೂ ಪ್ರಮುಖವಾಗಿ ಬಾಗಲೂರು ಕ್ರಾಸ್ ಬಳಿ ಕಿಮೀ ಗಟ್ಟಲೆ ಟ್ರಾಫಿಕ್ ಜಾಮ್ ಆಗಿ ವಾಹನ ಸವಾರರು ತೀವ್ರವಾಗಿ ಪರದಾಡುವಂತಾಗಿತ್ತು. ಏರೋ ಶೋ ನಡೆಯುವ 5 ದಿನಗಳು ಇದೇ ಪರಿಸ್ಥಿತಿ ಇರಲಿದೆ. ಬೆಂಗಳೂರು ಸಂಚಾರಿ ಪೊಲೀಸರು ಟ್ರಾಫಿಕ್ ಸಮಸ್ಯೆ ನಿವಾರಿಸಲು ಮಾರ್ಗ ಬದಲಾವಣೆ ಮಾಡಿದ್ದರೂ, ಏರೋ ಶೋ ಎಫೆಕ್ಟ್ ವಾಹನ ಸವಾರರ ಮೇಲೆ ಪರಿಣಾಮ ಬಿರಲಿದೆ.

ಇದನ್ನೂ ಓದಿ: ಏರೋ ಇಂಡಿಯಾ 2023.. ಪ್ರಧಾನಿ ಮೋದಿ ಚಾಲನೆ

Last Updated : Feb 13, 2023, 3:27 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.