ETV Bharat / state

ಪಿಂಕ್ ಬೇಬಿ, ಮಹಾಲಕ್ಷ್ಮೀ ಯೋಜನೆ ಕೈಬಿಡಲು ಬಿಬಿಎಂಪಿ ಚಿಂತನೆ! - ಮಹಾಲಕ್ಷ್ಮಿ ಯೋಜನೆ ಬೇಡವೆಂದು ಬಿಬಿಎಂಪಿ ಚರ್ಚೆ

ಪಿಂಕ್ ಬೇಬಿ, ಮಹಾಲಕ್ಷ್ಮಿ ಯೋಜನೆಗಳನ್ನು ಕೈಬಿಟ್ಟು ಬೇರೆ ಸೌಲಭ್ಯ ನೀಡುವ ಬಗ್ಗೆ ಬಿಬಿಎಂಪಿ ಚಿಂತನೆ ನಡೆಸಿದೆ ಎಂದು ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಎಲ್ ಶ್ರೀನಿವಾಸ್ ತಿಳಿಸಿದ್ದಾರೆ.

banglore
ಬಿಬಿಎಂಪಿ
author img

By

Published : Feb 5, 2020, 9:40 AM IST

ಬೆಂಗಳೂರು: ಬಿಬಿಎಂಪಿಯ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಪಕ್ಷದ ಆಡಳಿತ ಆರಂಭಿಸಿದ್ದ ಪಿಂಕ್ ಬೇಬಿ ಯೋಜನೆ, ಮಹಾಲಕ್ಷ್ಮೀ ಯೋಜನೆಗಳನ್ನು ಈ ಬಾರಿ ಬಜೆಟ್​ನಲ್ಲಿ ಮುಂದುವರಿಸದಿರಲು ಪಾಲಿಕೆ ಚಿಂತನೆ ನಡೆಸಿದೆ ಎನ್ನಲಾಗಿದೆ.

ಹೊಸ ವರ್ಷದ ಮೊದಲ ದಿನ ಜನಿಸುವ ಹೆಣ್ಣು ಮಗುವಿನ ಹೆಸರಿನಲ್ಲಿ ಐದು ಲಕ್ಷ ಬಾಂಡ್ ಇಡುವ ಪಿಂಕ್ ಬೇಬಿ ಯೋಜನೆ ಜಾರಿಯಲ್ಲಿತ್ತು. ಬಳಿಕ ಇಡೀ ವರ್ಷದಲ್ಲಿ ಪಾಲಿಕೆ ಆಸ್ಪತ್ರೆಯಲ್ಲಿ ಜನಿಸುವ ಎಲ್ಲಾ ಹೆಣ್ಣು ಮಕ್ಕಳಿಗೆ ಒಂದು ಲಕ್ಷ ರೂ ಬಾಂಡ್ ವಿತರಿಸುವ ಮಹಾಲಕ್ಷ್ಮೀ ಯೋಜನೆಯನ್ನು 2019-20 ನೇ ಸಾಲಿನಲ್ಲಿ ಜಾರಿಗೆ ತರಲು 60 ಕೋಟಿ ರೂ ಮೀಸಲಿಡಲಾಗಿತ್ತು. ಆದರೆ ಇದೇ ಯೋಜನೆಯನ್ನು 2020-21 ನೇ ಸಾಲಿನಲ್ಲಿ ಮುಂದುವರಿಸಬೇಕೋ ಬೇಡವೋ ಎಂಬ ಬಗ್ಗೆ ಬಿಬಿಎಂಪಿಯಲ್ಲಿ ಚರ್ಚೆ ನಡೆದಿದೆ.

ಪಿಂಕ್ ಬೇಬಿ ಯೋಜನೆ, ಮಹಾಲಕ್ಷ್ಮಿ ಯೋಜನೆಗಳನ್ನು ಬಜೆಟ್​ನಲ್ಲಿ ಮುಂದುವರಿಸದಿರಲು ಚಿಂತನೆ ನಡೆಸಿದೆ.

ಸರ್ಕಾರದಲ್ಲೂ ಇದೇ ಮಾದರಿಯ ಭಾಗ್ಯಲಕ್ಷ್ಮೀ ಯೋಜನೆ ಜಾರಿಯಲ್ಲಿರುವುದರಿಂದ ಈ ಯೋಜನೆಯ ಬದಲು ಬೇರೆ ಸೌಲಭ್ಯ ನೀಡುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎಂದು ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಎಲ್ ಶ್ರೀನಿವಾಸ್ ಮಾಹಿತಿ ನೀಡಿದ್ದಾರೆ.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ವಿಪಕ್ಷ ನಾಯಕ ಅಬ್ದುಲ್ ವಾಜಿದ್, ಬಡವರ ಹೆಣ್ಣುಮಕ್ಕಳೇ ಹೆಚ್ಚಾಗಿ ಪಾಲಿಕೆಯ ಆಸ್ಪತ್ರೆಗೆ ಬರೋದು. ಅಂತಹ ಕುಟುಂಬದಲ್ಲಿ ಹುಟ್ಟುವ ಹೆಣ್ಣು ಮಗುವಿಗೆ ಮುಂದಿನ ಜೀವನದಲ್ಲಿ ಸಹಕಾರವಾಗಲಿ ಅಂತ ಈ ಯೋಜನೆ ಆರಂಭಿಸಿದ್ದೆವು. ಆದರೆ ಈ ಯೋಜನೆ ಕೈ ಬಿಡಲು ಬಿಜೆಪಿ ಯೋಚಿಸಿರುವುದು ತಪ್ಪು ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.