ETV Bharat / state

ಸೇನಾ ನೆಲೆಗಳ ಮಾಹಿತಿ ಸೋರಿಕೆ ಪ್ರಕರಣ : ನಕಲಿ ಆರ್ಮಿ ಆಫೀಸರ್‌ನ ಫೋನ್​​​​ನಲ್ಲಿ 50ಕ್ಕೂ ಹೆಚ್ಚು ಯುವತಿಯರು - ಜಿತೇಂದರ್ ಸಿಂಗ್

ಬಂಧಿತರ ಸಂಪರ್ಕದಲ್ಲಿ ಜಿತೇಂದರ್ ಸಿಂಗ್ ಇರೋದು ಖಚಿತವಾಗಿತ್ತು. ಅಲ್ಲದೇ ಸದ್ಯಕ್ಕೆ ಜಿತೇಂದರ್ ಸಿಂಗ್ ಬೆಂಗಳೂರಲ್ಲಿ ವಾಸವಾಗಿದ್ದಾನೆ ಎಂಬ ಮಾಹಿತಿ ಸಿಗುತ್ತಿದ್ದಂತೆ ಮಿಲಿಟರಿ ಆಫೀಸರ್‌ಗಳು ಬೆಂಗಳೂರು ಪೊಲೀಸರಿಗೆ ಮಾಹಿತಿ ವಿನಿಮಯ ಮಾಡಿದ್ದರು. ಕೂಡಲೇ ಅಲರ್ಟ್ ಆಗಿದ್ದ ಸಿಸಿಬಿಯ ಭಯೋತ್ಪಾದಕ ನಿಗ್ರಹ ದಳದ ಅಧಿಕಾರಿಗಳು, ಜಿತೇಂದರ್ ಸಿಂಗ್‌ನನ್ನ ಕಾಟನ್‌ಪೇಟೆಯ ಬಾಡಿಗೆ ಮನೆಯಲ್ಲೇ ಬಂಧಿಸಿದ್ದರು..

ಜಿತೇಂದರ್ ಸಿಂಗ್
ಜಿತೇಂದರ್ ಸಿಂಗ್
author img

By

Published : Nov 27, 2021, 6:46 PM IST

ಬೆಂಗಳೂರು : ಅದು ಬೆಂಗಳೂರು ಪೊಲೀಸರಿಗೆ ಚಾಲೆಂಜಿಂಗ್ ಆಗಿದ್ದ ಕೇಸ್​​. ಮಿಲಿಟರಿ ಆಫಿಸರ್ಸ್ ಕೊಟ್ಟಿದ್ದ ಟಾಸ್ಕನ್ನ ಸಿಸಿಬಿ ಅಧಿಕಾರಿಗಳು ಭೇದಿಸುವಲ್ಲಿ ಯಶಸ್ವಿಯಾಗಿದ್ದರು.

ದೇಶದ ಮಿಲಿಟರಿ ನೆಲೆಗಳ ಫೋಟೋಗಳ ಸೋರಿಕೆ ಮಾಡಿದ್ದ ಜಿತೇಂದ್ರ ಕೇವಲ ನಕಲಿ ಆರ್ಮಿ ಆಫೀಸರ್ ಮಾತ್ರವಲ್ಲ. ಅವನೊಬ್ಬ ಸ್ತ್ರಿಲೋಲ ಎಂಬುವುದು ಫೋನ್ ರಿಟ್ರಿವಲ್​​ನಲ್ಲಿ ರಿವೀಲ್​ ಆಗಿದೆ.

ಸದ್ಯ ಜಿತೇಂದರ್ ಸಿಂಗ್ ಮೊಬೈಲ್ ರಿಟ್ರಿವ್ ಮಾಡಿದ್ದು, ಯುವತಿಯರ ಹುಚ್ಚಿಗೆ ಫೋಟೋ ವಿಡಿಯೋ ಶೇರ್ ಮಾಡಿರುವ ವಿಚಾರ ಗೊತ್ತಾಗಿದೆ. ಆರೋಪಿ ಮೊಬೈಲ್ ರಿಟ್ರಿವಲ್ ವೇಳೆ 50ಕ್ಕೂ ಹೆಚ್ಚು ಯುವತಿಯರ ಫೋಟೋ ಪತ್ತೆಯಾಗಿವೆ. ಇನ್‌ಸ್ಟಾಗ್ರಾಮ್ ಹಾಗೂ ಫೇಸ್​ಬುಕ್‌ನಲ್ಲಿ ಪರಿಚಿತರಾದ ಯುವತಿಯರ ಜೊತೆಗಿನ ಹಲವು ಕಲರ್ ಪುಲ್ ಫೋಟೋಗಳು ಪತ್ತೆಯಾಗಿವೆ.

ಜಿತೇಂದರ್ ಸಿಂಗ್ ಬ್ಯಾಂಕ್ ಅಕೌಂಟಿಗೆ ಬಂದಿರುವ ಹಣದ ಮೂಲವನ್ನ ಹುಡುಕಿ ಪೊಲೀಸರು ರಾಜಸ್ತಾನಕ್ಕೆ ಹೋಗಿ ವಿಚಾರಣೆ ನಡೆಸಿ ಬಂದಿದ್ದಾರೆ. ಸದ್ಯ ನ್ಯಾಯಾಂಗ ಬಂಧನದಲ್ಲಿರುವ ಆರೋಪಿಯನ್ನ ಅಫಿಷಿಯಲ್ ಸೀಕ್ರೆಟ್ ಆ್ಯಕ್ಟ್‌ಅಡಿಯಲ್ಲಿ ಕೇಸ್ ದಾಖಲಿಸಿರೋ ರಾಜ್ಯ ಭಯೋತ್ಪಾದಕ ನಿಗ್ರಹ ದಳದ ಅಧಿಕಾರಿಗಳು, ಮತ್ತೆ ಬಾಡಿ ವಾರೆಂಟ್ ಮೇಲೆ ಪಡೆದು ವಿಚಾರಣೆ ನಡೆಸುವ ಸಾಧ್ಯತೆಗಳಿವೆ.

ನಕಲಿ ಆರ್ಮಿ ಅಧಿಕಾರಿ ಸೋಗಿನಲ್ಲಿ ಮಿಲಿಟರಿ ಫೋಟೋಗಳ ಸೋರಿಕೆ ಮಾಡಿದ್ದ ಆರೋಪಿ ಜಿತೇಂದರ್ ಸಿಂಗ್‌ನನ್ನ ಕಳೆದ ಸೆಪ್ಟೆಂಬರ್‌ನಲ್ಲಿ ಸಿಸಿಬಿ ಪೊಲೀಸರು ಬಂಧಿಸಿದ್ದರು. ರಾಜಸ್ತಾನ ಮೂಲದ ಆರೋಪಿ ಜಿತೇಂದರ್ ಸಿಂಗ್ ಆರ್ಮಿ ಆಫೀಸರ್‌ನಂತೆ ಡ್ರೆಸ್ ಮಾಡಿಕೊಂಡು ಫೇಸ್‌ ಬುಕ್ ಇನ್‌ಸ್ಟಗ್ರಾಂನಲ್ಲಿ ಪೋಸ್ಟ್ ಮಾಡುತ್ತಿದ್ದ. ಜಿತೇಂದರ್ ಸಿಂಗ್ ನಿಜವಾಗಿಯೂ ಆರ್ಮಿ ಆಫೀಸರ್ ಅಂದುಕೊಂಡಿದ್ದ ಪಾಕ್ ಮೂಲದ ಐಸಿಸ್ ಸಂಘಟನೆ ನೇಹಾ ಪೂಜಾಜಿ ಹೆಸರಲ್ಲಿ ಆತನನ್ನ ಟ್ರಾಫ್ ಮಾಡಿತ್ತು.

ಯುವತಿ ತನ್ನನ್ನ ಮಿಲಿಟರಿ ಆಫೀಸರ್ ಅಂದುಕೊಂಡು ಇಷ್ಟಪಡುತ್ತಿದ್ದಾಳೆ ಎಂದು ಬಲೆಗೆ ಬಿದ್ದ ಜಿತೇಂದರ್ ಸಿಂಗ್, ದೇಶದ ಪ್ರಮುಖ ಆರು ಮಿಲಿಟರಿ ಪ್ರದೇಶಗಳ ಫೋಟೋ, ವಿಡಿಯೋ ಕ್ಲಿಕ್ಕಿಸಿ ಯುವತಿಗೆ ಶೇರ್ ಮಾಡಿದ್ದ. 2016ರಿಂದ ISIS ಯುವತಿ ಜೊತೆ ನೇರ ಸಂಪರ್ಕದಲ್ಲಿದ್ದ ಜಿತೇಂದರ್ ಸಿಂಗ್ ಫೋಟೋ, ವಿಡಿಯೋ ಕಳಿಸಿ ನಂತರ ಡಿಲೀಟ್ ಮಾಡುತ್ತಿದ್ದ. ಮಿಲಿಟರಿ ಸಂಬಂಧಿತ ಫೋಟೋ, ವಿಡಿಯೋ ಕಳಿಸುತ್ತಿದ್ದ ಜಿತೇಂದರ್ ಸಿಂಗ್​​ಗೆ ಫೋನ್ ಪೇ, ಗೂಗಲ್ ಪೇ ಮೂಲಕ ಹಣ ಸಂದಾಯವಾಗುತ್ತಿತ್ತು.

2018ರಲ್ಲಿ ಬೆಂಗಳೂರಿಗೆ ಬಂದಿದ್ದ ಆರೋಪಿ ಕಾಟನ್‌ಪೇಟೆಯಲ್ಲಿ ಬಾಡಿಗೆ ಮನೆ ಮಾಡ್ಕೊಂಡು ವಾಸವಾಗಿದ್ದ. ಬೀದಿ ಬದಿ ಬಟ್ಟೆ ವ್ಯಾಪಾರ ಮಾಡೋರಿಗೆ ಬಟ್ಟೆಗಳನ್ನ ಸಪ್ಲೈ ಮಾಡುವ ಕೆಲಸ ಮಾಡುತ್ತಿದ್ದ. ಕಳೆದ ಆಗಸ್ಟ್‌ನಲ್ಲಿ ISIS ಜೊತೆ ನಂಟು ಹೊಂದಿದ್ದ ವ್ಯಕ್ತಿಯೋರ್ವನನ್ನ ದೆಹಲಿಯಲ್ಲಿ ಬಂಧಿಸಲಾಗಿತ್ತು.

ಬಂಧಿತರ ಸಂಪರ್ಕದಲ್ಲಿ ಜಿತೇಂದರ್ ಸಿಂಗ್ ಇರೋದು ಖಚಿತವಾಗಿತ್ತು. ಅಲ್ಲದೇ ಸದ್ಯಕ್ಕೆ ಜಿತೇಂದರ್ ಸಿಂಗ್ ಬೆಂಗಳೂರಲ್ಲಿ ವಾಸವಾಗಿದ್ದಾನೆ ಎಂಬ ಮಾಹಿತಿ ಸಿಗುತ್ತಿದ್ದಂತೆ ಮಿಲಿಟರಿ ಆಫೀಸರ್‌ಗಳು ಬೆಂಗಳೂರು ಪೊಲೀಸರಿಗೆ ಮಾಹಿತಿ ವಿನಿಮಯ ಮಾಡಿದ್ದರು. ಕೂಡಲೇ ಅಲರ್ಟ್ ಆಗಿದ್ದ ಸಿಸಿಬಿಯ ಭಯೋತ್ಪಾದಕ ನಿಗ್ರಹ ದಳದ ಅಧಿಕಾರಿಗಳು, ಜಿತೇಂದರ್ ಸಿಂಗ್‌ನನ್ನ ಕಾಟನ್‌ಪೇಟೆಯ ಬಾಡಿಗೆ ಮನೆಯಲ್ಲೇ ಬಂಧಿಸಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.