ಬೆಂಗಳೂರು: ಸ್ಯಾಂಡಲ್ವುಡ್ನ ಪವರ್‌ಸ್ಟಾರ್ ಪುನೀತ್ ರಾಜ್ಕುಮಾರ್ ಅಕಾಲಿಕ ನಿಧನದ ದುಃಖದಿಂದ ಇಡೀ ಕರ್ನಾಟಕ ಇನ್ನೂ ಆಚೆ ಬಂದಿಲ್ಲ. ಈ ಮಧ್ಯೆ ನಟ ಪುನೀತ್ ಸಾವಿನಲ್ಲಿ ಚಿಕಿತ್ಸಾ ಲೋಪ ಆರೋಪ ಕೇಳಿ ಬಂದಿದ್ದು, ಕೆಲ ಅಭಿಮಾನಿಗಳು ಪೊಲೀಸ್ ಠಾಣೆ ಮೆಟ್ಟಿಲು ಸಹ ಹತ್ತಿದ್ದಾರೆ.
ಇನ್ನೂ ಮುಂದುವರೆದು, ಸಾಮಾಜಿಕ ಜಾಲತಾಣಗಳಲ್ಲಿ ವೈದ್ಯರ ನಿರ್ಲಕ್ಷ್ಯ ಎಂದು ಅಭಿಮಾನಿಗಳು ತೀರ್ಪು ನೀಡಿ, ಅಭಿಪ್ರಾಯ ಹೊರ ಹಾಕುತ್ತಿದ್ದಾರೆ. ಈ ರೀತಿ ಅಭಿಪ್ರಾಯವು ವೈದ್ಯ ವೃತ್ತಿಯ ಬಗ್ಗೆ ಆತಂಕ ಹಿನ್ನೆಲೆಯಲ್ಲಿ ಸಿಎಂಗೆ ಫನಾ ಅಧ್ಯಕ್ಷ ಡಾ.ಪ್ರಸನ್ನ ಪತ್ರ ಬರೆದಿದ್ದಾರೆ.
ಅಭಿಮಾನಿಗಳು ಮತ್ತು ಹಿತೈಷಿಗಳಿಂದ ನಟ ಪುನೀತ್ ಸಾವಿನ ಬಗ್ಗೆ ನಡೆದಿರುವ ಚರ್ಚೆ ವೈದ್ಯಕೀಯ ಗೌಪ್ಯತೆಯ ಉಲ್ಲಂಘನೆ ಆಗುತ್ತದೆ. FIR ಅಥವಾ PCR ದಾಖಲಿಸಿಕೊಳ್ಳುವ ಮುನ್ನ ಸುಪ್ರೀಂಕೋರ್ಟ್ ಗೈಡ್ಲೈನ್ಸ್ ಗಮನದಲ್ಲಿರಬೇಕು. ವೈದ್ಯರಿಗೆ ಅವರದ್ದೇ ಆದ ಇತಿ-ಮಿತಿಗಳಿದ್ದು, ಜೀವ ಉಳಿಸುವುದು ಎಲ್ಲ ಸಂದರ್ಭದಲ್ಲಿ ಸಾಧ್ಯವಾಗುವುದಿಲ್ಲ. ನಟ ಪುನೀತ್ ರಾಜ್ಕುಮಾರ್ ಚಿಕಿತ್ಸೆಯಲ್ಲಿ ಭಾಗಿಯಾದ ವೈದ್ಯಕೀಯ ಸಿಬ್ಬಂದಿಗೆ ಸೂಕ್ತ ಪೊಲೀಸ್ ಭದ್ರತೆ ಒದಗಿಸುವಂತೆ ಮನವಿ ಮಾಡಿದ್ದಾರೆ. ಡಾ.ರಮಣರಾವ್‌ಗೆ ಸೂಕ್ತ ರಕ್ಷಣೆ ನೀಡುವಂತೆ ಸಿಎಂಗೆ ಪತ್ರ ಬರೆದಿದ್ದಾರೆ.
ಫನಾ ಸದಸ್ಯರು ಹೇಳೋದು ಏನು?
ಮೆಡಿಕಲ್ ಟ್ರೀಟ್ಮೆಂಟ್ ಮತ್ತು ಮೆಡಿಕಲ್ ಪ್ರೊಫೆಷನ್ ಬಗ್ಗೆ ಪಬ್ಲಿಕ್‌ನಲ್ಲಿ ಡಿಬೆಟ್ ಮಾಡಬಾರದು ಅಂತಾ ಸುಪ್ರೀಂಕೋರ್ಟ್ ನಿಯಮ ಇದೆ. ಆದರೆ ಮಾಧ್ಯಮಗಳಲ್ಲಿ ಮೆಡಿಕಲ್ ಟ್ರೀಟ್ಮೆಂಟ್ ಬಗ್ಗೆ ಸಾರ್ವಜನಿಕ ಆಗಿ ಡಿಬೆಟ್ ಮಾಡ್ತಾ ಇರೋದು ತಪ್ಪು. ಈ ಬಗ್ಗೆ ಸೂಕ್ತ ಕ್ರಮ ಅಥವಾ ಸೂಚನೆ ನೀಡುವುದರ ಬಗ್ಗೆ ಖಾಸಗಿ ಆಸ್ಪತ್ರೆಗಳ ಒಕ್ಕೂಟದಿಂದ (ಫನಾ )ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ.