ETV Bharat / state

ಕಬ್ಬನ್ ಪಾರ್ಕ್‌ ನಲ್ಲಿ ಸಾಕು ನಾಯಿಗಳೊಂದಿಗೆ ವಾಯುವಿಹಾರಕ್ಕೆ ಜುಲೈ 1 ರಿಂದ ಬ್ರೇಕ್?

author img

By

Published : Jun 26, 2022, 6:23 PM IST

ಕಬ್ಬನ್ ಪಾರ್ಕ್‌ಗೆ ಸಾರ್ವಜನಿಕರು ನಾಯಿಗಳನ್ನು ವಾಯುವಿಹಾರಕ್ಕಾಗಿ ಕರೆದುಕೊಂಡು ಬರುವುದಕ್ಕೆ ರಾಜ್ಯ ಸರ್ಕಾರ ಜುಲೈ 1ರಿಂದ ಜಾರಿಗೆ ಬರುವಂತೆ ನಿಷೇಧ ಹೇರಲು ಮುಂದಾಗಿದೆ.

pets-are-restricted-at-cubbonpark-from-july-1
ಕಬ್ಬನ್ ಪಾರ್ಕ್‌ ನಲ್ಲಿ ಸಾಕು ನಾಯಿಗಳೊಂದಿಗೆ ವಾಯುವಿಹಾರಕ್ಕೆ ಜುಲೈ 1 ರಿಂದ ಬ್ರೇಕ್..?

ಬೆಂಗಳೂರು : ಕಬ್ಬನ್ ಪಾರ್ಕ್‌ಗೆ ಸಾರ್ವಜನಿಕರು ನಾಯಿಗಳನ್ನು ವಾಯುವಿಹಾರಕ್ಕಾಗಿ ಕರೆದುಕೊಂಡು ಬರುವುದಕ್ಕೆ ರಾಜ್ಯ ಸರ್ಕಾರ ಜುಲೈ 1ರಿಂದ ಜಾರಿಗೆ ಬರುವಂತೆ ನಿಷೇಧ ಹೇರಲು ಮುಂದಾಗಿದೆ. ಕಳೆದ 6 ತಿಂಗಳಿನಿಂದ ವಾಯುವಿಹಾರಿಗಳು ಮತ್ತು ಜಾಗಿಂಗ್ ಮಾಡುವವರಿಂದ ಪದೇ ಪದೇ ದೂರುಗಳು ಬಂದ ಹಿನ್ನೆಲೆಯಲ್ಲಿ ಕಬ್ಬನ್ ಪಾರ್ಕ್‌ನಲ್ಲಿ ಸಾಕು ನಾಯಿಗಳನ್ನು ನಿಷೇಧಿಸಲು ಮುಂದಾಗಿದ್ದೇವೆ ಎಂದು ಕಬ್ಬನ್ ಪಾರ್ಕ್ ಉಪನಿರ್ದೇಶಕರಾದ ಬಾಲಕೃಷ್ಣ ತಿಳಿಸಿದ್ದಾರೆ.

ಈ ನಿಟ್ಟಿನಲ್ಲಿ ಜುಲೈ 1 ರಿಂದ ಗೇಟ್‌ಗಳಲ್ಲಿ ಬ್ಯಾನರ್‌ಗಳನ್ನು ಅಳವಡಿಸಲಾಗುವುದು. ಉದ್ಯಾನವನಗಳಲ್ಲಿ ಸಾಕುಪ್ರಾಣಿಗಳಿಗೆ ಇರುವ ಮಾರ್ಗಸೂಚಿಗಳನ್ನು ಪದೇ ಪದೇ ಉಲ್ಲಂಘಿಸುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ. ಕಬ್ಬನ್ ಪಾರ್ಕ್ ಒಳಗೆ ಸಾಕು ನಾಯಿಗಳನ್ನು ನಿಷೇಧಿಸುವ ಬಗ್ಗೆ ಸರ್ಕಾರದ ಮುಂದೆ ಪ್ರಸ್ತಾಪಿಸಲಾಗಿದೆ. ಸಾಕುಪ್ರಾಣಿಗಳ ನಿಷೇಧದ ಬಗ್ಗೆ ಜನರಿಗೆ ತಿಳಿಸಲು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ನಿಷೇಧದ ವಿರುದ್ಧ ಅಭಿಯಾನ: ಈ ಹಿನ್ನೆಲೆಯಲ್ಲಿ ಸಾಕು ನಾಯಿಗಳ ಮಾಲೀಕರು ಕೆಲವು ಜನರು ಮಾಡುವ ತಪ್ಪಿಗೆ ಎಲ್ಲರಿಗೂ ಶಿಕ್ಷೆ ನೀಡದಂತೆ ತೋಟಗಾರಿಕೆ ಇಲಾಖೆಗೆ ಮನವಿ ಮಾಡುವ ಅಭಿಯಾನವನ್ನು ಪ್ರಾರಂಭಿಸಿದ್ದಾರೆ. ಈ ಬಗ್ಗೆ Change.org ನಲ್ಲಿ 'ನೋ ಪೆಟ್ ಬ್ಯಾನ್ ಇನ್ ಕಬ್ಬನ್ ಪಾರ್ಕ್ ಫಾರ್ ಡಾಗ್ಸ್ ಸೇಕ್' ಎಂಬ ಮನವಿಗೆ ಈಗಾಗಲೇ ಪ್ರಾಣಿಪ್ರಿಯರು ಬೆಂಬಲ ಸೂಚಿಸಿದ್ದಾರೆ.

ಓದಿ: ನಾಳೆಯಿಂದ ಜುಲೈ 4ರ ವರೆಗೆ SSLC ಪೂರಕ ಪರೀಕ್ಷೆ

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.