ಬೆಂಗಳೂರು: ಇನ್ಫೋಸಿಸ್ ಫೌಂಡೇಶನ್ ಮುಖ್ಯಸ್ಥೆ ಹಾಗೂ ಲೇಖಕಿ ಸುಧಾ ಮೂರ್ತಿ ವಿರಚಿತ 'ದ ಗೋಪಿ ಡೈರೀಸ್ ಗ್ರೋಯಿಂಗ್ ಅಪ್' ಪುಸ್ತಕ ಇತ್ತೀಚೆಗೆ ಕೋರಮಂಗಲದ ಸಪ್ನ ಬುಕ್ ಹೌಸ್ನಲ್ಲಿ ಲೋಕಾರ್ಪಣೆಯಾಯಿತು. ಸುಧಾ ಮೂರ್ತಿ ಅವರ ಪ್ರೀತಿಯ ಸಾಕು ನಾಯಿ ಗೋಪಿ ಸೇರಿದಂತೆ ಹಲವು ಸಾಕು ನಾಯಿಗಳ ಸಮ್ಮುಖದಲ್ಲಿ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು.
ಬಳಿಕ ಸುಧಾಮೂರ್ತಿಯವರು ಮಕ್ಕಳ ಜೊತೆ ಸಂವಾದ ನಡೆಸಿದರು. ಸಾಕು ಪ್ರಾಣಿಗಳ ನಿಸ್ವಾರ್ಥ ಪ್ರೀತಿ ಮಾತ್ರ, ಯಂತ್ರಮಯವಾದ ಬದುಕಿನಲ್ಲಿ ನೆಮ್ಮದಿ ತರುತ್ತದೆ. ಮಹಾನಗರದಲ್ಲಿ ಜೀವಿಸುವವರು ಒತ್ತಡದಲ್ಲಿರುತ್ತಾರೆ. ಸಾಕುಪ್ರಾಣಿಗಳು ನಮ್ಮೊಟ್ಟಿಗಿದ್ದರೆ ಒತ್ತಡ ನಿವಾರಣೆಯಾಗುತ್ತದೆ ಎಂದು ಹೇಳಿದರು.
ಗೋಪಿಯನ್ನು ನಮ್ಮ ಮನೆಯವರು ಯಾರು ನಾಯಿ ಎಂದು ಭಾವಿಸಿಲ್ಲ. ಅವನು ನಮ್ಮಲೊಬ್ಬ ಎಂದುಕೊಂಡಿದ್ದೇವೆ. ಮೂರು ವರ್ಷದ ಹಿಂದೆ 'ಗೋಪಿ' ಬಗ್ಗೆ ಪುಸ್ತಕ ಬರೆಯಬೇಕೆಂಬ ಆಲೋಚನೆ ಹೊಳೆಯಿತು ಎಂದು ತಿಳಿಸಿದ ಸುಧಾಮೂರ್ತಿ ಅವರು, ಗೋಪಿಯ ವಿಶೇಷ ವರ್ತನೆಗಳ ಕುತೂಹಲಕಾರಿ ವಿಷಯಗಳನ್ನು ಹಂಚಿಕೊಂಡರು. ಈ ಸಂದರ್ಭದಲ್ಲಿ ಸುಧಾಮೂರ್ತಿಯವರ ಆತ್ಮೀಯರಾದ ನಿರ್ಮಾಪಕ ಎಂ ರಮೇಶ್ ರೆಡ್ಡಿ ಕೂಡ ಉಪಸ್ಥಿತರಿದ್ದರು.
ಇದನ್ನೂ ಓದಿ: 'ನಾನು ಹಿಂದೂ ರಾಮಯ್ಯ' ಪುಸ್ತಕ ಬಿಡುಗಡೆ ಮಾಡಿದ ಸಿಎಂ ಬೊಮ್ಮಾಯಿ