ETV Bharat / state

ಕೊರೊನಾ ಸಮಯದಲ್ಲೂ ಪಿಇಎಸ್ ಕಾಲೇಜ್‌ ವಿದ್ಯಾರ್ಥಿ 1.5 ಕೋಟಿ ರೂ. ಪ್ಯಾಕೇಜ್ ಉದ್ಯೋಗಕ್ಕೆ ಆಯ್ಕೆ

ಮತ್ತೊಬ್ಬ ವಿದ್ಯಾರ್ಥಿನಿ ಜೀವನ ಹೆಗಡೆಗೆ ಗೂಗಲ್​​ನಲ್ಲಿ ಪೂರ್ಣ ಕಾಲಿಕ ಉದ್ಯೋಗ ದೊರೆತಿದ್ದು, ಈ ಹಿಂದೆ ಗೂಗಲ್ ಸಂಸ್ಥೆ ಆಯೋಜಿಸಿದ್ದ ಜಾಗತಿಕ ಮಟ್ಟದ ಕಾರ್ಯಕ್ರಮ ಒಂದರಲ್ಲಿ ಭಾಗವಹಿಸಿದ್ದರು. ಇದೀಗ ಗೂಗಲ್​​ನಲ್ಲಿ ನೇಮಕಗೊಂಡಿದ್ದು, ಪ್ಯಾಕೇಜ್ ಮಾಹಿತಿಯನ್ನು ಬಹಿರಂಗ ಪಡಿಸಿಲ್ಲ..

author img

By

Published : Jul 10, 2021, 10:52 PM IST

ಪಿಇಎಸ್ ವಿದ್ಯಾರ್ಥಿ
PES Student gets 1.5 crore salary jobs in corona time

ಬೆಂಗಳೂರು : ಕೊರೊನಾ ಕಾಲದಲ್ಲೂ ದುಬಾರಿ ಪ್ಯಾಕೇಜ್ ಪಡೆಯುವ ಮೂಲಕ ಪಿಇಎಸ್ ವಿದ್ಯಾರ್ಥಿಗಳು ಎಲ್ಲರ ಗಮನ ಸೆಳೆದಿದ್ದಾರೆ.‌ ಪಿಇಎಸ್ ಪ್ಲೇಸ್ಮೆಂಟ್​​​ನಲ್ಲಿ ಇದೇ ಮೊದಲ ಬಾರಿಗೆ ಭಾರಿ ಮೊತ್ತದ ಪ್ಯಾಕೇಜ್ ಪಡೆದಿದ್ದು, ಆಡಳಿತ ಮಂಡಳಿ ಸಂತಸ ವ್ಯಕ್ತಪಡಿಸಿದೆ.

ಈ ಹಿಂದೆ ಪಿಇಎಸ್ ವಿದ್ಯಾರ್ಥಿಯೊಬ್ಬರು ವಾರ್ಷಿಕ ಪ್ಯಾಕೇಜ್ 50 ಲಕ್ಷ ರೂ. ಪಡೆದಿದ್ದರು. ಇದೀಗ ಸಾರಂಗ್ ರವೀಂದ್ರ ಎಂಬ ವಿದ್ಯಾರ್ಥಿ ಲಂಡನ್ ಮೂಲದ ಕನ್‌ಲೈಕ್ಸ್ ಕಚೇರಿಗೆ ಆಯ್ಕೆಯಾಗಿದ್ದರು. ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಓದುತ್ತಿದ್ದ ಸಾರಂಗ್, ಈ ಹಿಂದೆ ಕನ್‌ಲೈಕ್ಸ್ ಕಂಪನಿಯಲ್ಲೇ ಇಂಟರ್ನ್​ಶಿಪ್​​ ಮಾಡಿದ್ದರು. ಆ ನಂತರ ಅವರಿಗೆ ಕಂಪನಿಯು 1.5 ಕೋಟಿ ಪ್ಯಾಕೇಜ್ ನೀಡಿ ಆಯ್ಕೆ ಮಾಡಿಕೊಂಡಿದೆ.

ಮತ್ತೊಬ್ಬ ವಿದ್ಯಾರ್ಥಿನಿ ಜೀವನ ಹೆಗಡೆಗೆ ಗೂಗಲ್​​ನಲ್ಲಿ ಪೂರ್ಣ ಕಾಲಿಕ ಉದ್ಯೋಗ ದೊರೆತಿದ್ದು, ಈ ಹಿಂದೆ ಗೂಗಲ್ ಸಂಸ್ಥೆ ಆಯೋಜಿಸಿದ್ದ ಜಾಗತಿಕ ಮಟ್ಟದ ಕಾರ್ಯಕ್ರಮ ಒಂದರಲ್ಲಿ ಭಾಗವಹಿಸಿದ್ದರು. ಇದೀಗ ಗೂಗಲ್​​ನಲ್ಲಿ ನೇಮಕಗೊಂಡಿದ್ದು, ಪ್ಯಾಕೇಜ್ ಮಾಹಿತಿಯನ್ನು ಬಹಿರಂಗ ಪಡಿಸಿಲ್ಲ.

ಓದಿ: ಕಾಂಟ್ರೋವರ್ಸಿ ಇಷ್ಟವಿಲ್ಲ, ವಿವಾದಕ್ಕೆ ಅವರೇ ಅಂತ್ಯವಾಡಿದ್ರೆ ನಂಗೆ ಸಂತೋಷ : ಸಂಸದೆ ಸುಮಲತಾ ಅಂಬಿ

ಈಕುರಿತು ಪಿಇಎಸ್ ವಿಶ್ವವಿದ್ಯಾಲಯದ ಕುಲಾಧಿಪತಿ ಎಂ.ಆರ್.ದೊರೆಸ್ವಾಮಿ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದ್ದು, ವಿದ್ಯಾರ್ಥಿಗಳು ಕೊರೊನಾದ ಸಾಂಕ್ರಾಮಿಕ ಪ್ರಸರಣದಲ್ಲೂ ಈ ಭಾರಿ ಪ್ರಮಾಣದ ಪ್ಯಾಕೇಜ್ ಪಡೆಯುವ ಮೂಲಕ ಸಂಸ್ಥೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ.

ಲಾಕ್​​ಡೌನ್ ಕೊರೊನಾ ಕಾರಣಕ್ಕೆ ವರ್ಚುವಲ್ ಮೂಲಕವೇ ಇಂಟರ್ಶಿಪ್ ಮಾಡಿದ್ದು, 40ಕ್ಕೂ ಅಧಿಕ ಪ್ರತಿಷ್ಠಿತ ಕಂಪನಿಗಳು ಕ್ಯಾಂಪಸ್ ಇಂಟರ್​ ವ್ಯೂ ಮಾಡಿರುವ ಕುರಿತು ತಿಳಿಸಿದ್ದಾರೆ. ಸುಮಾರು 1,283 ವಿದ್ಯಾರ್ಥಿಗಳಿಗೆ 87,000 ರೂ. ತನಕ ಪ್ಯಾಕೇಜ್ ಆಫರ್ ಬಂದಿರುವುದಾಗಿ ಮಾಹಿತಿ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.