ETV Bharat / state

ವೈಯಕ್ತಿಕ ವಿಚಾರ, ಜಾತಿ ಬಗ್ಗೆ ಮಾತನಾಡುವುದು ರಾಜಕೀಯದಲ್ಲಿ ಅಪ್ರಸ್ತುತ: ಸಿಎಂ ಬೊಮ್ಮಾಯಿ

ನಮ್ಮ ಪಕ್ಷದ ಬಗ್ಗೆ ಚಿಂತೆ ಮಾಡುವ ಅವಶ್ಯಕತೆ ಇಲ್ಲ- ರಾಜಕೀಯದಲ್ಲಿ ಜಾತಿ ವಿಚಾರ ಅಪ್ರಸ್ತುತ - ಹೆಚ್​ಡಿಕೆಗೆ ಸಿಎಂ ಬಸವರಾಜ ಟಾಂಗ್​

author img

By

Published : Feb 5, 2023, 10:14 PM IST

ಸಿಎಂ ಬಸವರಾಜ ಬೊಮ್ಮಾಯಿ
ಸಿಎಂ ಬಸವರಾಜ ಬೊಮ್ಮಾಯಿ
ಸಿಎಂ ಬಸವರಾಜ ಬೊಮ್ಮಾಯಿ

ನವದೆಹಲಿ/ಬೆಂಗಳೂರು: ವೈಯಕ್ತಿಕ ವಿಚಾರಗಳು ವೈಯಕ್ತಿಕ ಜಾತಿ ಬಗ್ಗೆ ರಾಜಕಾರಣದಲ್ಲಿ ಮಾತನಾಡುವುದು ಅಪ್ರಸ್ತುತವಾಗಿದ್ದು, ನಮ್ಮ ಪಕ್ಷಗಳು, ನಮ್ಮ ಕಾರ್ಯಕ್ರಮಗಳು ಏನೆಲ್ಲ ಮಾಡಲು ಸಾಧ್ಯವೋ ಇವುಗಳ ಬಗ್ಗೆ ಮಾತನಾಡಿದರೆ ಜನ ಬಹಳಷ್ಟು ಚಿಂತನೆ ಮಾಡುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಟಾಂಗ್ ನೀಡಿದ್ದಾರೆ.

ಅವರು ಅವರ ಪಕ್ಷವನ್ನು ಸರಿಪಡಿಸಿಕೊಳ್ಳಲಿ: ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಪಕ್ಷದ ಬಗ್ಗೆ ಚಿಂತೆ ಮಾಡುವ ಅವಶ್ಯಕತೆ ಇಲ್ಲ. ಮೊದಲು ಅವರ ಪಕ್ಷವನ್ನು ಅವರು ಸರಿ ಮಾಡಿಕೊಳ್ಳಲಿ. ಅವರು ಬಹಳ ಕಷ್ಟಪಟ್ಟು ಓಡಾಡುತ್ತಾರೆ. ಅವರು ಅವರ ಪಕ್ಷವನ್ನು ಸರಿಪಡಿಸಿಕೊಳ್ಳಲಿ. ಯಾವ ಬ್ರಾಹ್ಮಣರು, ಇನ್ನಿತರ ಸಮುದಾಯದವರು ಇದೆಲ್ಲದರ ಬಗ್ಗೆ ಜನ ನೋಡುವುದಿಲ್ಲ. ಇವೆಲ್ಲ ಮಾತುಗಳು ರಾಜಕಾರಣಗಳಿಗೆ ಅಪ್ರಸ್ತುತ ಎಂದರು.

ನಮ್ಮ ಪಕ್ಷಗಳು, ನಮ್ಮ ಕಾರ್ಯಕ್ರಮಗಳು ಏನೆಲ್ಲ ಮಾಡಲು ಸಾಧ್ಯ?. ಅವುಗಳನ್ನು ಮಾತನಾಡಿದರೆ ಜನ ಬಹಳಷ್ಟು ಚಿಂತನೆ ಮಾಡುತ್ತಾರೆ. ವೈಯಕ್ತಿಕ ವಿಚಾರಗಳು, ಜಾತಿ ಬಗ್ಗೆ ರಾಜಕಾರಣದಲ್ಲಿ ಮಾತನಾಡುವುದು ಸೂಕ್ತವಲ್ಲ ಎಂದು ಸಿಎಂ ಬೊಮ್ಮಾಯಿ ಅವರು ಕುಮಾರಸ್ವಾಮಿಗೆ ಸಲಹೆ ನೀಡಿದರು.

ಯಾವಾಗ ಏನು ಕನಸುಗಳು ಬರಲಿಯೋ ಗೊತ್ತಿಲ್ಲ: ಬ್ರಾಹ್ಮಣರನ್ನು ಮುಖ್ಯಮಂತ್ರಿ ಮಾಡಲಾಗುತ್ತದೆ ಎನ್ನುವ ಕುಮಾರಸ್ವಾಮಿ ಹೇಳಿಕೆಗೆ ಟಾಂಗ್ ನೀಡಿದ ಸಿಎಂ, ಯಾರಿಗೂ ಬರದೇ ಇರುವ ಸುದ್ದಿಗಳು ಅವರಿಗೆ ಬರಲಿವೆ. ಅವರಿಗೆ ಯಾವಾಗ ಏನು ಕನಸುಗಳು ಬರಲಿಯೋ ಗೊತ್ತಿಲ್ಲ ಎಂದು ವ್ಯಂಗ್ಯವಾಡಿದರು.

ಇದನ್ನೂ ಓದಿ: ಜನಪ್ರಿಯ ಬಜೆಟ್​​ಗಾಗಿ ಸಿಎಂ ಬೊಮ್ಮಾಯಿ ಸಿದ್ಧತೆ; ಹಣ ಹೊಂದಿಸಲು ರಾಜಸ್ವಗಳ ಮೇಲೆ ಕಣ್ಣು

ಬ್ರಾಹ್ಮಣರು ಎಂದೆಲ್ಲಾ ಜನ ನೋಡುವುದಿಲ್ಲ: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಿಎಂ, ನಮ್ಮ ಪಕ್ಷದ ಬಗ್ಗೆ ಅವರು ಚಿಂತಿಸಬೇಕಿಲ್ಲ. ಕಾಂಗ್ರೆಸ್ ಮೊದಲು ಅವರ ಪಕ್ಷವನ್ನು ಸರಿಮಾಡಿಕೊಳ್ಳಲಿ. ಬ್ರಾಹ್ಮಣರು ಎಂದೆಲ್ಲಾ ಜನ ನೋಡುವುದಿಲ್ಲ, ಅವರೂ ಕೂಡ ಮುಖ್ಯಮಂತ್ರಿ ಆಗಿದ್ದವರು, ಯೋಚಿಸಿ ಮಾತನಾಡಬೇಕು ಎಂದು ಹೇಳಿದರು.

ಮದುವೆಯೊಂದರಲ್ಲಿ ಪಾಲ್ಗೊಳ್ಳಲು ದೆಹಲಿಗೆ ಆಗಮಿಸಿದ್ದೇವೆ. ಈ ಭೇಟಿ ವೇಳೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಲ್ಲ. ಮದುವೆ ಕಾರ್ಯಕ್ರಮವಾದ ಕಾರಣ ಇತರ ರಾಜಕೀಯ ಕಾರಣಕ್ಕಾಗಿ ಕೇಂದ್ರ ಸಚಿವರ ಭೇಟಿಯನ್ನೂ ಸಹ ಮಾಡಲ್ಲ ಎಂದು ಸಿಎಂ ಸ್ಪಷ್ಟಪಡಿಸಿದರು.

ಇದನ್ನೂ ಓದಿ : 7ನೇ ರಾಜ್ಯ ವೇತನ ಆಯೋಗದಿಂದ ಪ್ರಶ್ನಾವಳಿ ಬಿಡುಗಡೆ: ಸಲಹೆ, ಅಭಿಪ್ರಾಯ ಆಹ್ವಾನ

ಕಾನೂನು ತನ್ನ ಕೆಲಸವನ್ನು ಮಾಡಲಿದೆ: ಶಾಸಕ ರಮೇಶ್ ಜಾರಳಿಹೊಳಿ ಸಿಡಿ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಸಿಎಂ, ಸಂಪೂರ್ಣವಾದ ವಿವರವನ್ನು ನನಗೆ ಕೊಟ್ಟರೆ ಅದರ ಬಗ್ಗೆ ತೀರ್ಮಾನ ಮಾಡಲಾಗುತ್ತದೆ. ಯಾವುದಾದರೂ ವಿವರಗಳಿದ್ದರೆ ಯಾವ ಪ್ರಕರಣ, ಏನು, ಎಲ್ಲ ವಿವರಗಳಿದ್ದರೆ ಕಾನೂನು ತನ್ನ ಕೆಲಸವನ್ನು ಮಾಡಲಿದೆ. ಅವರು ಅಮಿತ್ ಶಾ ಭೇಟಿ ಮಾಡಿರುವುದು, ಇಲ್ಲಿ ಮತ್ತೊಮ್ಮೆ ನನ್ನನ್ನು ಭೇಟಿ ಮಾಡಲು ಅವರು ಕಾಯುತ್ತಿರುವ ಮಾಹಿತಿ ಇಲ್ಲ ಎಂದು ಸಿಎಂ ತಿಳಿಸಿದರು.

ಇದನ್ನೂ ಓದಿ : 'ಬಿಜೆಪಿಯವರು ಯಡಿಯೂರಪ್ಪರನ್ನೇ ಪಂಕ್ಚರ್ ಮಾಡಿದ್ದಾರೆ'

ETV Bharat Logo

Copyright © 2024 Ushodaya Enterprises Pvt. Ltd., All Rights Reserved.