ETV Bharat / state

ಬೆಂಗಳೂರಲ್ಲಿ ಸ್ನೇಹಿತರ ನಡುವೆ ಗಲಾಟೆ.. ಚಾಕುವಿನಿಂದ ಇರಿದು, ಕಲ್ಲು ಎತ್ತಿ ಹಾಕಿ ಓರ್ವನ ಕೊಲೆ - ಬೆಂಗಳೂರು ವ್ಯಕ್ತಿ ಕೊಲೆ ಪ್ರಕರಣ

ಬೆಂಗಳೂರಿನ ಜೈನ್ ಆಸ್ಪತ್ರೆ ಹಿಂಭಾಗದ ಅವಲಹಳ್ಳಿ ಮುಖ್ಯ ರಸ್ತೆಯಲ್ಲಿ ವ್ಯಕ್ತಿಯೋರ್ವನಿಗೆ ಚಾಕುವಿನಿಂದ ಇರಿದು, ಕಲ್ಲು ಎತ್ತಿ ಹಾಕಿ ಕೊಲೆ ಮಾಡಲಾಗಿದೆ.

Person murdered by his friends in bengaluru
ಸ್ನೇಹಿತರ ನಡುವೆ ಗಲಾಟೆ... ಚಾಕುವಿನಿಂದ ಇರಿದು, ಕಲ್ಲು ಎತ್ತಿ ಹಾಕಿ ಓರ್ವನ ಕೊಲೆ
author img

By

Published : Oct 23, 2021, 8:38 AM IST

Updated : Oct 23, 2021, 4:17 PM IST

ಬೆಂಗಳೂರು: ಸ್ನೇಹಿತರ ನಡುವೆ ಗಲಾಟೆ ನಡೆದು ಓರ್ವನ ಕೊಲೆಯಲ್ಲಿ ಅಂತ್ಯವಾಗಿದೆ. ನಗರದ ಬ್ಯಾಟರಾಯನಪುರ ಪೊಲೀಸ್ ಠಾಣೆ ವ್ಯಾಪ್ತಿಯ ಜೈನ್ ಆಸ್ಪತ್ರೆ ಹಿಂಭಾಗದ ಅವಲಹಳ್ಳಿ ಮುಖ್ಯ ರಸ್ತೆಯಲ್ಲಿ ಶುಕ್ರವಾರ ರಾತ್ರಿ ಘಟನೆ ನಡೆದಿದೆ.

ಶಿವಮೊಗ್ಗ ಮೂಲದ ಚಂದ್ರಶೇಖರ್ (30) ಎಂಬಾತನೆ ಕೊಲೆಯಾದ ಯುವಕ ಎಂದು ಗುರುತಿಸಲಾಗಿದೆ. ಹಣಕಾಸಿನ ವಿಚಾರವಾಗಿ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದೆ.

ಬೆಂಗಳೂರಲ್ಲಿ ಸ್ನೇಹಿತರ ನಡುವೆ ಗಲಾಟೆ.. ಚಾಕುವಿನಿಂದ ಇರಿದು, ಕಲ್ಲು ಎತ್ತಿ ಹಾಕಿ ಓರ್ವನ ಕೊಲೆ

ಪ್ರಕರಣದ ಕುರಿತು ಮಾತನಾಡಿದ ಡಿಸಿಪಿ ಸಂಜೀವ್ ಪಾಟೀಲ್, ಆರ್.ಆರ್.ನಗರದಲ್ಲಿ ವಾಸವಿದ್ದ ಚಂದ್ರಶೇಖರ್, ಆಟೋ ರಿಕ್ಷಾ ಚಾಲನೆ ಮಾಡಿಕೊಂಡು ಹೂ ವ್ಯಾಪಾರ ಮಾಡುತ್ತಿದ್ದ. ಕಳೆದ ರಾತ್ರಿ 9.30ರ ಸುಮಾರಿಗೆ ಹಣಕಾಸಿನ ವಿಚಾರಕ್ಕೆ ಚಂದ್ರಶೇಖರ್ ಹಾಗೂ ಸ್ನೇಹಿತರ ನಡುವೆ ಗಲಾಟೆ ನಡೆದಿದೆ. ಈ ವೇಳೆ ಮಾತಿಗೆ ಮಾತು ಬೆಳೆದು ಚಾಕುವಿನಿಂದ ಇರಿದು, ಕಲ್ಲು ಎತ್ತಿ ಹಾಕಿ ಕೊಲೆ ಮಾಡಲಾಗಿದೆ. ಕಂಠಪೂರ್ತಿ ಕುಡಿದ ನಂತರ ಗಲಾಟೆಯಾಗಿ ಹತ್ಯೆ ನಡೆಸಿರುವ ಶಂಕೆ ಇದೆ ಎಂದು ತಿಳಿಸಿದ್ದಾರೆ.

ಘಟನೆ ನಡೆದ ಸ್ಥಳದಲ್ಲೇ ಆರೋಪಿಗಳು ಕಾರು ಬಿಟ್ಟು ಪರಾರಿಯಾಗಿದ್ದು, ಕಾರಿನಲ್ಲಿ ಮದ್ಯದ ಬಾಟಲ್​ಗಳು, ಸ್ನ್ಯಾಕ್ಸ್ ಪತ್ತೆಯಾಗಿವೆ. ಈ ಬಗ್ಗೆ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಹೊಸಪೇಟೆಯಲ್ಲಿ ವೃದ್ಧೆಯ ಬರ್ಬರ ಕೊಲೆ.. ಸೀರೆ ಖರೀದಿ ಸೋಗಿನಲ್ಲಿ ಬಂದ ಆಗಂತುಕರಿಂದ ದುಷ್ಕೃತ್ಯ

Last Updated : Oct 23, 2021, 4:17 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.