ETV Bharat / state

ಫ್ಯಾನ್ಸಿ ನಂಬರ್​ ನೀಡುವುದಾಗಿ ನಂಬಿಸಿ 65 ಸಾವಿರ ರೂ. ಪಡೆದು ಆರೋಪಿ ಎಸ್ಕೇಪ್ - Fancy number

ಸಿಲಿಕಾನ್ ಸಿಟಿಯಲ್ಲಿ ಸೈಬರ್ ಖದೀಮರ ಹಾವಳಿ ದಿನೇ ದಿನೆ ಹೆಚ್ಚುತ್ತಿವೆ. ಫ್ಯಾನ್ಸಿ ನಂಬರ್ ನೀಡುವುದಾಗಿ ಹೇಳಿ 65 ಸಾವಿರ ರೂಪಾಯಿ ಪಡೆದು ವಂಚಿಸಿರುವ ಘಟನೆ ಆಗ್ನೇಯ ಸೈಬರ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

fancy-number
ಫ್ಯಾನ್ಸಿ ನಂಬರ್
author img

By

Published : Oct 17, 2020, 4:49 PM IST

ಬೆಂಗಳೂರು: ಫ್ಯಾನ್ಸಿ ನಂಬರ್‌ ನೀಡುವುದಾಗಿ ಹೇಳಿ ಉದ್ಯಮಿಗೆ ಸೈಬರ್ ಖದೀಮರು ವಂಚಿಸಿರುವ ಘಟನೆ ಆಗ್ನೇಯ ಸೈಬರ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಕೆಲ ದಿನಗಳ ಹಿಂದೆ ವಿಮಲ್​ ಕುಮಾರ್​ ಎಂಬುವವರ ಮೊಬೈಲ್​​ಗೆ ಒಂದು ಮೆಸೇಜ್ ಬಂದಿತ್ತು. ಬಳಿಕ ಕರೆ ಮಾಡಿರುವ ಆದಿತ್ಯ ಜೈನ್ ಎಂಬಾತ 9000000000 ಈ ಫ್ಯಾನ್ಸಿ ನಂಬರ್​ಗೆ ಭಾರಿ ಬೇಡಿಕೆಯಿದೆ. ಈ ನಂಬರ್​ ಅನ್ನು ನೀವೇ ಪಡೆಯಿರಿ ಎಂದು ಮನವೊಲಿಸಿ ಹಂತ ಹಂತವಾಗಿ 65 ಸಾವಿರ ರೂಪಾಯಿ ನಗದನ್ನ ತನ್ನ ಖಾತೆಗೆ ಟ್ರಾನ್ಸ್​​ಫರ್ ಮಾಡಿಸಿಕೊಂಡಿದ್ದಾನೆ. ಹಣ ಜಮೆಯಾದ ಬಳಿಕ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಆರೋಪಿ ಎಸ್ಕೇಪ್ ಆಗಿದ್ದಾನೆ.

ಸಂಶಯಗೊಂಡ ವಿಮಲ್ ಸೈಬರ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.