ETV Bharat / state

ರಾಜ್ಯದಲ್ಲಿ ಪ್ರಾದೇಶಿಕ ಪಕ್ಷಗಳು ಸರ್ಕಾರ ನಡೆಸಿದ ಅವಧಿ ಮತ್ತು ಮುಖ್ಯಮಂತ್ರಿಗಳಾರು..?

author img

By

Published : Apr 3, 2023, 9:24 PM IST

ರಾಜ್ಯದಲ್ಲಿ ಅಧಿಕಾರ ಚುಕ್ಕಣಿ ಹಿಡಿಯಲು ಯಾವ ಯಾವ ಪ್ರಾದೇಶಿಕ ಪಕ್ಷಗಳು ಮುಂದಾಗಿದ್ದವು?

Vidhana Soudha
ವಿಧಾನಸೌಧ

ಬೆಂಗಳೂರು : ದೇಶದಲ್ಲಿ ಕಾಂಗ್ರೆಸ್ ಪಕ್ಷ ಏಕಚಕ್ರಾಧಿಪತ್ಯ ಆಡಳಿತ ಇರುವವರೆಗೂ ಪ್ರಾದೇಶಿಕ ಪಕ್ಷಗಳಿಗೆ ಅಷ್ಟಾಗಿ ಮಾನತ್ಯೆ ಇರಲಿಲ್ಲ. ವರ್ಷಗಳು ಕಳೆದಂತೆ ಪ್ರಾದೇಶಿಕ ಪಕ್ಷಗಳು ಗಟ್ಟಿಗೊಳ್ಳಲು ಆರಂಭಿಸಿದವು. ಪ್ರಾದೇಶಿಕ ಪಕ್ಷಗಳ ಬಗ್ಗೆ ಒಲವು ಏಕಾಏಕಿ ಬಂದಿದ್ದಲ್ಲ. ರಾಷ್ಟ್ರೀಯ ಪಕ್ಷಗಳ ನಾಯಕರ ಏಕಚಕ್ರಾಧಿಪತ್ಯ, ದಬ್ಬಾಳಿಕೆ, ಅಧಿಕಾರದ ದಾಹದಿಂದ ನಿಧಾನವಾಗಿ ಸೃಷ್ಟಿಯಾಯಿತು. 1967 ರಿಂದ ಈಚೆಗೆ ಕಾಂಗ್ರೆಸ್ ನಾಯಕರ ವರ್ತನೆ ಕಾರಣದಿಂದ ಬಹುತೇಕ ರಾಜ್ಯಗಳಲ್ಲಿ ಸಮ್ಮಿಶ್ರ ಸರ್ಕಾರಗಳ ಸಂಸ್ಕೃತಿ ಆರಂಭವಾಯಿತು.

ಇಂದಿರಾಗಾಂಧಿ ಅವರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಹಲವಾರು ಪ್ರಗತಿಪರ ಕಾರ್ಯಕ್ರಮಗಳನ್ನು ಜಾರಿಗೆ ತಂದರಾದರೂ ದೇಶದ ಎಲ್ಲ ರಾಜ್ಯ ಸರ್ಕಾರಗಳನ್ನು ಹಿಡಿತದಲ್ಲಿಟ್ಟುಕೊಳ್ಳಲು ಮುಂದಾದರು. ತಮಿಳುನಾಡು ಮುಖ್ಯಮಂತ್ರಿ ಕಾಮರಾಜ್, ಎಂ.ಜಿ.ರಾಮಚಂದ್ರನ್, ಇಂದಿರಾಗಾಂಧಿ ಅವರಿಗೆ ಸಮೀಪವರ್ತಿಯಾಗಿದ್ದರು. ಆದರೆ, ಯಾವಾಗ ಭಾಷೆ ಆಧಾರಿತ ಕಿಡಿ ಜಾಲ್ವೆಯಾಗಿ ಸ್ವರೂಪ ಪಡೆದುಕೊಂಡಿತೋ ಡಿಎಂಕೆ ಎಂಬ ಪ್ರಾದೇಶಿಕ ಪಕ್ಷ ಉದಯಿಸಿ ಅಧಿಕಾರಕ್ಕೂ ಬಂತು. ನಂತರ ಅದು ಡಿಎಂಕೆ, ಅಣ್ಣಾಡಿಎಂಕೆ ಎಂದು ಇಬ್ಬಾಗ ಆಯಿತು. ಆದರೆ, ತಮಿಳುನಾಡಿನಲ್ಲಿ ಪಕ್ಷಗಳು ಕಾಂಗ್ರೆಸ್ ಹಿಡಿತಕ್ಕೆ ಬರಲಿಲ್ಲ. ಅಲ್ಲಿಂದ ಆರಂಭವಾದ ಪ್ರಾದೇಶಿಕ ಪಕ್ಷಗಳ ಶಾಖೆ ಒಂದೊಂದೇ ರಾಜ್ಯದಲ್ಲಿ ಕಾಂಗ್ರೆಸ್​ಗೆ ಅಧಿಕಾರ ತಪ್ಪಿಸುತ್ತಾ ಹೋಯಿತು.

ಇನ್ನು ಕರ್ನಾಟಕದಲ್ಲೂ ಜನತಾ ಪಕ್ಷ ಉದಯಿಸಿತು. ನಂತರ ಅದು ಇಬ್ಭಾಗವಾಗಿ ದೇವೇಗೌಡರ ನೇತೃತ್ವದಲ್ಲಿ ಜಾತ್ಯತೀತ ಜನದಾಳವಾಯಿತು. ಜೆಡಿಯು, ನಂತರ ಹಲವು ಪ್ರಾದೇಶಿಕ ಪಕ್ಷಗಳು ಉದಯವಾದವು. ಅಷ್ಟೇ ವೇಗವಾಗಿ ತೆರೆಮರೆಗೂ ಸರಿದವು. ಪಶ್ಚಿಮ ಬಂಗಾಳದಲ್ಲಿ ಎಡಪಕ್ಷ, ನಂತರ ತೃಣಮೂಲ ಕಾಂಗ್ರೆಸ್, ಕೇರಳದಲ್ಲಿ ಎನ್ ಡಿಎಫ್, ಯುಡಿಎಫ್, ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷ, ಬಹುಜನ ಸಮಾಜಪಕ್ಷ, ಬಿಹಾರದಲ್ಲಿ ಆರ್ ಜೆಡಿ, ಜೆಡಿ(ಯು), ಒಡಿಶಾದಲ್ಲಿ ಬಿಜು ಜನತಾದಳ, ಮಹಾಷ್ಟ್ರದಲ್ಲಿ ಶಿವಸೇನೆ, ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಅಧಿಕಾರ ಹಿಡಿದವು. ಅದೇ ರೀತಿ ಈಶಾನ್ಯ ರಾಜ್ಯಗಳಲ್ಲೂ ಕಾಂಗ್ರೆಸ್ ಹಿಡಿತ ಕಳೆದುಕೊಂಡಿತು.

ಕರ್ನಾಟಕದಲ್ಲೂ ಪ್ರಾದೇಶಿಕ ಪಕ್ಷ ಅಧಿಕಾರಕ್ಕೆ : ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ಪ್ರಾದೇಶಿಕ ಪಕ್ಷಗಳು ನೆಲೆವೂರಲು ಆರಂಭಿಸಿದ್ದು 1983 ರ ನಂತರ. 1969 ರಲ್ಲಿ ಕಾಂಗ್ರೆಸ್ ಗೆ ಸೇರ್ಪಡೆಗೊಂಡಿದ್ದ ರಾಮಕೃಷ್ಣ ಹೆಗಡೆ ಅವರು, 1975 ರಲ್ಲಿ ತುರ್ತುಪರಿಸ್ಥಿತಿಯಿಂದಾಗಿ ಆಕ್ರೋಶಗೊಂಡು ಜನತಾ ಪಕ್ಷ ಸೇರಿದ್ದರು. ಎಸ್. ನಿಜಲಿಂಗಪ್ಪ ಹಾಗೂ ವೀರೇಂದ್ರ ಪಾಟೀಲ್ ಸಿಎಂ ಆಗಿದ್ದಾಗ, ಮಂತ್ರಿಯಾಗಿ ಸೇವೆ ಸಲ್ಲಿಸಿದ್ದ ರಾಮಕೃಷ್ಣ ಹೆಗಡೆ 1983 ರಲ್ಲಿ ಬಿಜೆಪಿ ಹಾಗೂ ಎಡಪಕ್ಷಗಳ ಬಾಹ್ಯ ಬೆಂಬಲದೊಂದಿಗೆ ಕಾಂಗ್ರೆಸ್ಸೇತರ ಮುಖ್ಯಮಂತ್ರಿಯಾಗಿದ್ದರು. ಹೆಗಡೆ ಅವರು ಮೌಲ್ಯಾಧಾರಿತ ರಾಜಕಾರಣಿ ಎಂದೇ ಖ್ಯಾತಿಪಡೆದಿದ್ದರು.

ಆದರೆ, ಹಗರಣಗಳ ವಿವಾದದಲ್ಲಿ ಸಿಲುಕಿದ್ದು ವಿಪರ್ಯಾಸ. ಹಗರಣ, ಆರೋಪ, ಒಳ ರಾಜಕೀಯದಿಂದ 1986 ರಲ್ಲಿ ರಾಜೀನಾಮೆ ನೀಡಿದ ಹೆಗಡೆ ಅವರು, ಮತ್ತೆ ಅಧಿಕಾರಕ್ಕೆ ಬಂದು 1988 ರವರೆಗೆ ಮುಖ್ಯಮಂತ್ರಿಯಾಗಿದ್ದರು. ದೇವೇಗೌಡರ ಸಲಹೆ ಮೇರೆಗೆ ಲಾಲು ಪ್ರಸಾದ್ ಯಾದವ್ ಅವರು ಜನತಾದಳದಿಂದ ಹೆಗಡೆ ಅವರನ್ನು ಉಚ್ಛಾಟಿಸಿದರು. ನಂತರ ರಾಷ್ಟ್ರೀಯ ನವನಿರ್ಮಾಣ ವೇದಿಕೆ ಮತ್ತು ಲೋಕಶಕ್ತಿ ಎಂಬ ಸಂಘಟನೆ ಕಟ್ಟಿಕೊಂಡು ಮುನ್ನೆಲೆಗೆ ಬರಲು ಯತ್ನಿಸಿದರಾದರೂ ಸಾಧ್ಯವಾಗಲಿಲ್ಲ. ಆ ಬಳಿಕ ಲೋಕಶಕ್ತಿ ಸಂಯುಕ್ತ ಜನತಾದಳದೊಂದಿಗೆ ವಿಲೀನಗೊಂಡಿತು.

1988 ರಲ್ಲಿ ಆಗಸ್ಟ್ 13 ರಂದು ಎಸ್.ಆರ್. ಬೊಮ್ಮಾಯಿ ಅವರು ಜನತಾಪಕ್ಷದಿಂದ ಮುಖ್ಯಮಂತ್ರಿಯಾದರು. ಅಧಿಕಾರಕ್ಕೆ ಬಂದ ಒಂದು ವರ್ಷದೊಳಗೆ ಜನತಾಪಕ್ಷ ಸರ್ಕಾರ ಪತನಗೊಂಡಿತು. ಬಳಿಕ 1989 ರಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂತು. ವೀರೇಂದ್ರ ಪಾಟೀಲ್, ಎಸ್. ಬಂಗಾರಪ್ಪ, ವೀರಪ್ಪ ಮೊಯಿಲಿ ಅವರು ಮೂವರು ಮುಖ್ಯಮಂತ್ರಿಗಳಾದರು. ಆ ವೇಳೆ ಜನ ಬೇಸರಗೊಂಡು ಜನತಾ ದಳಕ್ಕೆ ಅಧಿಕಾರ ನೀಡಿದ್ದರು.

90ರ ದಶಕದಲ್ಲಿ ಮುಖ್ಯಮಂತ್ರಿಯಾಗಿದ್ದ ಎಸ್.ಬಂಗಾರಪ್ಪ ಅವರು ಸಹ ಎರಡೆರಡು ಪಕ್ಷ ಕಟ್ಟಿದರೂ ತಮ್ಮ ಗುರಿ ತಲುಪಲು ಸಾಧ್ಯವಾಗಲೇ ಇಲ್ಲ. ಅವರು 1994 ರಲ್ಲಿ ಕರ್ನಾಟಕ ಕಾಂಗ್ರೆಸ್ ಪಕ್ಷ ಕಟ್ಟಿ ಆ ವರ್ಷವೇ ನಡೆದ ವಿಧಾನಸಭೆ ಚುನಾವಣೆಯಲ್ಲಿ 10 ಸ್ಥಾನಗಳಲ್ಲಷ್ಟೇ ಗೆಲುವು ಪಡೆಯಲು ಸಾಧ್ಯವಾಯಿತು. ನಂತರ ಕರ್ನಾಟಕ ವಿಕಾಸ ಪಕ್ಷ ಕಟ್ಟಿದ್ದರು. ಆದರೆ, ಅದು ಸಹ ಯಶಸ್ವಿಯಾಗಲಿಲ್ಲ.

1994 ಡಿಸೆಂಬರ್ 11 ರಂದು ಜನತಾದಳದಿಂದ ಹೆಚ್.ಡಿ.ದೇವೇಗೌಡರು ಮುಖ್ಯಮಂತ್ರಿಯಾಗಿದ್ದರು. 1996 ಮೇ 31 ಕ್ಕೆ ಗೌಡರು ರಾಜೀನಾಮೆ ನೀಡಿದ್ದರು. ಆ ನಂತರ ಜೆ.ಎಚ್.ಪಟೇಲ್ ಅವರು 1996 ರಿಂದ 1999 ರವರೆಗೆ ಜನತಾದಳದಿಂದ ಮುಖ್ಯಮಂತ್ರಿಯಾಗಿದ್ದರು. 1999 ರಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬಂತು. ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿಯಾದರು. ತದನಂತರ ನಡೆದ ಚುನಾವಣೆಯಲ್ಲಿ ಯಾರಿಗೂ ಬಹುಮತ ಸಿಗದ ಕಾರಣ 2004 ರಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಸರ್ಕಾರ ರಚನೆಯಾಯಿತು. ಧರ್ಮಸಿಂಗ್ ಸಿಎಂ ಆಗಿದ್ದರು. ಆದರೆ, ಎರಡೇ ವರ್ಷಕ್ಕೆ ಮೈತ್ರಿ ಸರ್ಕಾರ ಪತನಗೊಂಡಿತು.

ಇದಾದ ಬಳಿಕ 2006 ಫೆ.3 ಕ್ಕೆ ಬಿಜೆಪಿ ಹಾಗೂ ಜೆಡಿಎಸ್ ಸಮ್ಮಿಶ್ರ ಸರ್ಕಾರ ಉದಯವಾಯಿತು. ಆಗ ಹೆಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದರು. ಮತ್ತೆ 2007 ಅಕ್ಟೋಬರ್ 8 ಕ್ಕೆ ಈ ಸರ್ಕಾರವೂ ಪತನಗೊಂಡಿತು. ನಂತರ ನಡೆದ ಚುನಾವಣೆಯಲ್ಲಿ ಬಿಜೆಪಿಗೆ 110 ಸ್ಥಾನ ಲಭಿಸಿತು. ನಂತರ ಪಕ್ಷೇತರರನ್ನು ಸೇರಿಸಿಕೊಂಡು ರಚಿಸಿದ ಸರ್ಕಾರದಲ್ಲಿ ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾದರು. ಅದೇಕೋ, ರಾಜ್ಯದ ಜನತೆ 2013 ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಜನ ಬಿಜೆಪಿ ಕೈಹಿಡಿಯಲಿಲ್ಲ. ಕಾಂಗ್ರೆಸ್ ಪರ ಒಲವು ತೋರಿದ್ದರಿಂದ ಕಾಂಗ್ರೆಸ್ ಸರ್ಕಾರ ರಚನೆಯಾಗಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾದರು. ಆದರೆ, 2018 ರಲ್ಲಿ ನಡೆದ ಚುನಾವಣೆಯಲ್ಲಿ ಮತ್ತೆ ಯಾವುದೇ ಪಕ್ಷಗಳಿಗೆ ಬಹುಮತ ಸಿಗಲಿಲ್ಲ. ಹಾಗಾಗಿ, ಕಾಂಗ್ರೆಸ್ ನವರು ಜೆಡಿಎಸ್ ಕದತಟ್ಟಿದ್ದರಿಂದ ಹೆಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾದರು.

ಆದರೆ, ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದ ಬಿಜೆಪಿಗೆ ಇದನ್ನು ಸಹಿಸಿಕೊಳ್ಳಲು ಸಾಧ್ಯವಾಗಲಿಲ್ಲ. ರಾಜಕೀಯ ದಾಳ ಉರುಳಿಸಿದ ಬಿಜೆಪಿ, ಆಪರೇಷನ್ ಕಮಲಕ್ಕೆ ಮುಂದಾಯಿತು. ಇದರಿಂದಾಗಿ ಕಾಂಗ್ರೆಸ್ ಹಾಗೂ ಜೆಡಿಎಸ್ 17 ಮಂದಿ ಆಪರೇಷನ್ ಕಮಲದ ಬಲೆಗೆ ಬಿದ್ದರು. ನಂತರ ಕುಮಾರಸ್ವಾಮಿ ಅವರು ರಾಜೀನಾಮೆ ನೀಡಬೇಕಾಯಿತು. ಬಳಿಕ ಬಿಜೆಪಿ ಸರ್ಕಾರ ರಚನೆಗೊಂಡು ಮತ್ತೆ ಯಡಿಯೂರಪ್ಪ ಮುಖ್ಯಮಂತ್ರಿಯಾದರು. ಆದರೆ, ಎರಡು ವರ್ಷ ಸಿಎಂ ಆಗಿದ್ದ ಬಿಎಸ್​ವೈ, ಹೈಕಮಾಂಡ್ ನಿರ್ದೇಶನದ ಮೇರೆಗೆ ಸಿಎಂ ಸ್ಥಾನದಿಂದ ಕೆಳಗಿಳಿಯಬೇಕಾಯಿತು. ನಂತರ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾದರು.

ಇದನ್ನೂ ಓದಿ : ನಾಳೆ ಬಿಜೆಪಿ ಕೋರ್ ಕಮಿಟಿ ಸಭೆ: ಏಪ್ರಿಲ್ 8 ರಂದು ಬಿಜೆಪಿ ಮೊದಲ ಪಟ್ಟಿ ಬಿಡುಗಡೆ..?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.