ಬೆಂಗಳೂರು : ಯಾರು ಸ್ಟ್ರಾಂಗ್ ಎಂದು ಮುಂದಿನ ಚುನಾವಣೆಯಲ್ಲಿ ಜನ ತೀರ್ಮಾನ ಮಾಡುತ್ತಾರೆ ಎಂದು ವಿಪಕ್ಷನಾಯಕ ಸಿದ್ದರಾಮಯ್ಯ ಅವರಿಗೆ ಬಿಜೆಪಿ ತಿರುಗೇಟು ನೀಡಿದೆ. ಜನಸಂಕಲ್ಪ ಯಾತ್ರೆಗೆ ಹೊರಟಿರುವ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಾರು-ಜೀಪು ಬಿಟ್ಟು ನಾಲ್ಕು ಕಿ.ಮೀ ಎಡವದೇ ನಡೆದುಕೊಂಡು ಹೋಗಿ ಎಂದು ಟೀಕಿಸಿದ್ದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಕಿಡಿಕಾರಿದೆ.
ಸಿದ್ದರಾಮಯ್ಯಗೆ ಬಿಜೆಪಿ ನಾಯಕರ ಭಯ : ಬೆಳಗ್ಗೆ ಎದ್ದ ತಕ್ಷಣ ಎಲ್ಲರೂ ದೇವರನ್ನು ನೆನೆಯುತ್ತಾರೆ. ಆದರೆ, "ಬಾಲಕನ" ಜೊತೆ ಓಡುವ ಸಿದ್ದರಾಮಯ್ಯ ಅವರು ಬಿಜೆಪಿ ನಾಯಕರ ಜಪ ಮಾಡುತ್ತಿರುವುದನ್ನು ನೋಡಿದರೆ, ಬಿಜೆಪಿ ನಾಯಕರನ್ನೇ ದೇವರು ಅಂದುಕೊಂಡ ಹಾಗಿದೆ.
ಬಿಜೆಪಿ ನಾಯಕರ ಬಗ್ಗೆ ಭಯ ಇರುವ ಕಾರಣದಿಂದಲೇ ಈ ಇಳಿ ವಯಸ್ಸಿನಲ್ಲಿ ಕಷ್ಟವಾದರೂ ಬಲವಂತದ ಪಾದಯಾತ್ರೆ ಮಾಡುತ್ತಿದ್ದಾರೆ. ಸಿದ್ದರಾಮಯ್ಯನವರೇ, ನೀವು ಮೋರ್ ಸ್ಟ್ರಾಂಗ್ ಎಂದು ಹೇಳಿಕೊಂಡಿದ್ದೀರಿ, ನೀವು ಸ್ಟ್ರಾಂಗ್ ಇದ್ದಿದ್ದರೆ ಸಿಎಂ ಸ್ಥಾನಕ್ಕೆ ಬೀದಿಗೆ ಬಂದು ಇಷ್ಟೊಂದು ಕಸರತ್ತು ಪಡಬೇಕಿರಲಿಲ್ಲ ಎಂದು ಸಿದ್ದರಾಮಯ್ಯಗೆ ಬಿಜೆಪಿ ಟ್ವೀಟ್ ಮೂಲಕ ಟಾಂಗ್ ನೀಡಿದೆ.
ಸಿದ್ದರಾಮಯ್ಯ ಟಾಂಗ್ ನೀಡಿದ ಬಿಜೆಪಿ: ಯಡಿಯೂರಪ್ಪ ಅವರು 70-80ರ ದಶಕದಿಂದಲೇ ರಾಜ್ಯದ ಮೂಲೆ ಮೂಲೆಗಳಲ್ಲಿ ಪಾದಯಾತ್ರೆಗಳನ್ನು ಮಾಡಿ ಜನರ ಕಷ್ಟಗಳನ್ನು ಕೇಳಿ ಪರಿಹಾರಕ್ಕಾಗಿ ಹೋರಾಡಿದವರು. ಇಷ್ಟು ವರ್ಷ ಇಟಲಿ, ಚೀನಾ ಮಾತ್ರ ನೋಡಿದ್ದ ರಾಹುಲ್ ಗಾಂಧಿ ಅವರಿಗೆ ಈಗ ಭಾರತ ಹೇಗಿದೆ ಎಂದು ನೋಡುವ ಅಗತ್ಯ ಇದೆ. ಸಿದ್ದರಾಮಯ್ಯ ತಾನೇ ಸ್ಟ್ರಾಂಗ್ ಅಂದುಕೊಂಡಿದ್ದಾರೆ.
ಜನತೆಯೇ ಮೋರ್ ಸ್ಟ್ರಾಂಗ್. ಜನತೆಯ ಮುಂದೆ ಯಾರೂ ಸ್ಟ್ರಾಂಗ್ ಅಲ್ಲ. ರಾಜಕೀಯದಲ್ಲೂ ಜನರೇ ಸ್ಟ್ರಾಂಗ್. ಭ್ರಮಾಲೋಕದಿಂದ ಸಿದ್ದರಾಮಯ್ಯ ಹೊರಬರಬೇಕು. ಯಾರು ಸ್ಟ್ರಾಂಗ್ ಎಂದು ಮುಂದಿನ ಚುನಾವಣೆಯಲ್ಲಿ ಜನ ತೀರ್ಮಾನ ಮಾಡುತ್ತಾರೆ ಎಂದು ತಿರುಗೇಟು ನೀಡಿದೆ.
ಇದನ್ನೂ ಓದಿ : ಮಂಡ್ಯ ಬಾಲಕಿ ಅತ್ಯಾಚಾರ ಕೊಲೆ ಪ್ರಕರಣ: ಕಾಮುಕನಿಗೆ ಕಠಿಣ ಶಿಕ್ಷೆ ಆಗಲೆಂದು ಸಿದ್ದರಾಮಯ್ಯ ಆಗ್ರಹ