ETV Bharat / state

ಪಡಿತರ ವಿತರಿಸದ ನ್ಯಾಯಬೆಲೆ ಅಂಗಡಿ: ಹಸಿವಿನಿಂದ ಬಳಲುತ್ತಿವೆ ಬಡ ಕುಟುಂಬಗಳು - bangalore news

ಬಡ ಜನರಿಗೆ ನೀಡುವ ಅಕ್ಕಿ, ಬೇಳೆಯನ್ನು ನೆರೆ ಸಂತ್ರಸ್ತರಿಗೆ ನೀಡುವುದಾಗಿ ಆಗಸ್ಟ್ ತಿಂಗಳಲ್ಲಿ ಪ್ರತಿ ಕಾರ್ಡ್ ನಲ್ಲಿ 4 ರಿಂದ 6 ಕೆಜಿ ಅಕ್ಕಿ ಕಡಿತ ಮಾಡಿದ್ದು, ಅದನ್ನು ನೆರೆ ಸಂತ್ರಸ್ತರಿಗೆ ವಿತರಿಸದೇ ಮೋಸ ಮಾಡಿದ್ದಾರೆ ಎನ್ನಲಾಗಿದೆ.

ಪಡಿತರ ವಿತರಿಸದ ನ್ಯಾಯಬೆಲೆ ಅಂಗಡಿ:
author img

By

Published : Sep 21, 2019, 9:41 AM IST

ಬೆಂಗಳೂರು: ಬಡವರಿಗಾಗಿ ಸರ್ಕಾರ ಪಡಿತರ ವಿತರಿಸಿದರೂ ಅದನ್ನು ನ್ಯಾಯಬೆಲೆ ಅಂಗಡಿಗಳು ಸಮರ್ಪಕವಾಗಿ ವಿತರಿಸದೇ ಇರುವುದರಿಂದ ಬಡ ಕುಟುಂಬಗಳು ಹಸಿವಿನಿಂದ ಬಳಲುವಂತಾಗಿದೆ.

ಮಹದೇವಪುರ ವಿಧಾನಸಭಾ ಕ್ಷೇತ್ರದ ಮಂಡೂರು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಹುಸ್ಕೂರು ಕೋಡಿ ಗ್ರಾಮದ ನ್ಯಾಯ ಬೆಲೆ ಅಂಗಡಿಯಲ್ಲಿ ಬಡವರಿಗೆ ವಿತರಿಸುವ ಪಡಿತರವನ್ನು ಕಳೆದ ಎರಡು ಮೂರು ತಿಂಗಳಿನಿಂದ ವಿತರಿಸದೇ ವಂಚಿಸುತ್ತಿದ್ದ ಬಗ್ಗೆ ಸ್ಥಳೀಯರು ದೂರು ನೀಡಿದ್ದರು.

ಪಡಿತರ ವಿತರಿಸದ ನ್ಯಾಯಬೆಲೆ ಅಂಗಡಿ

ಇನ್ನು ಬಡ ಜನರಿಗೆ ನೀಡುವ ಅಕ್ಕಿ, ಬೇಳೆಯನ್ನು ನೆರೆ ಸಂತ್ರಸ್ತರಿಗೆ ನೀಡುವುದಾಗಿ ಆಗಸ್ಟ್ ತಿಂಗಳಲ್ಲಿ ಪ್ರತಿ ಕಾರ್ಡ್ ನಲ್ಲಿ 4 ರಿಂದ 6 ಕೆಜಿ ಅಕ್ಕಿ ಕಡಿತ ಮಾಡಿದ್ದು, ಅದನ್ನು ನೆರೆ ಸಂತ್ರಸ್ತರಿಗೆ ವಿತರಿಸದೇ ಮೋಸ ಮಾಡಿದ್ದಾರೆ ಎನ್ನಲಾಗಿದೆ.

ಈ ಹಿನ್ನೆಲೆಯಲ್ಲಿ ದಿಢೀರ್​​ ಭೇಟಿ ನೀಡಿದ ಮಂಡೂರು ಜಿಲ್ಲಾ ಪಂಚಾಯಿತಿ ಸದಸ್ಯ ಡಾ. ಕೆ. ಕೆಂಪರಾಜು, ನ್ಯಾಯಬೆಲೆ ಅಂಗಡಿಯವರನ್ನು ತರಾಟೆಗೆ ತೆಗೆದುಕೊಂಡು ಪಡಿತರ ವಿತರಿಸುವಂತೆ ಸೂಚಿಸಿದ್ದಾರೆ.

ಬೆಂಗಳೂರು: ಬಡವರಿಗಾಗಿ ಸರ್ಕಾರ ಪಡಿತರ ವಿತರಿಸಿದರೂ ಅದನ್ನು ನ್ಯಾಯಬೆಲೆ ಅಂಗಡಿಗಳು ಸಮರ್ಪಕವಾಗಿ ವಿತರಿಸದೇ ಇರುವುದರಿಂದ ಬಡ ಕುಟುಂಬಗಳು ಹಸಿವಿನಿಂದ ಬಳಲುವಂತಾಗಿದೆ.

ಮಹದೇವಪುರ ವಿಧಾನಸಭಾ ಕ್ಷೇತ್ರದ ಮಂಡೂರು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಹುಸ್ಕೂರು ಕೋಡಿ ಗ್ರಾಮದ ನ್ಯಾಯ ಬೆಲೆ ಅಂಗಡಿಯಲ್ಲಿ ಬಡವರಿಗೆ ವಿತರಿಸುವ ಪಡಿತರವನ್ನು ಕಳೆದ ಎರಡು ಮೂರು ತಿಂಗಳಿನಿಂದ ವಿತರಿಸದೇ ವಂಚಿಸುತ್ತಿದ್ದ ಬಗ್ಗೆ ಸ್ಥಳೀಯರು ದೂರು ನೀಡಿದ್ದರು.

ಪಡಿತರ ವಿತರಿಸದ ನ್ಯಾಯಬೆಲೆ ಅಂಗಡಿ

ಇನ್ನು ಬಡ ಜನರಿಗೆ ನೀಡುವ ಅಕ್ಕಿ, ಬೇಳೆಯನ್ನು ನೆರೆ ಸಂತ್ರಸ್ತರಿಗೆ ನೀಡುವುದಾಗಿ ಆಗಸ್ಟ್ ತಿಂಗಳಲ್ಲಿ ಪ್ರತಿ ಕಾರ್ಡ್ ನಲ್ಲಿ 4 ರಿಂದ 6 ಕೆಜಿ ಅಕ್ಕಿ ಕಡಿತ ಮಾಡಿದ್ದು, ಅದನ್ನು ನೆರೆ ಸಂತ್ರಸ್ತರಿಗೆ ವಿತರಿಸದೇ ಮೋಸ ಮಾಡಿದ್ದಾರೆ ಎನ್ನಲಾಗಿದೆ.

ಈ ಹಿನ್ನೆಲೆಯಲ್ಲಿ ದಿಢೀರ್​​ ಭೇಟಿ ನೀಡಿದ ಮಂಡೂರು ಜಿಲ್ಲಾ ಪಂಚಾಯಿತಿ ಸದಸ್ಯ ಡಾ. ಕೆ. ಕೆಂಪರಾಜು, ನ್ಯಾಯಬೆಲೆ ಅಂಗಡಿಯವರನ್ನು ತರಾಟೆಗೆ ತೆಗೆದುಕೊಂಡು ಪಡಿತರ ವಿತರಿಸುವಂತೆ ಸೂಚಿಸಿದ್ದಾರೆ.

Intro:ಮಹದೇವಪುರ:

ಪಡಿತರ ವಿತರಣೆಯಲ್ಲಿ ವಂಚನೆ ಆರೋಪ.


ಮಹದೇವಪುರ ವಿಧಾನಸಭಾ ಕ್ಷೇತ್ರದ ಮಂಡೂರು ಜಿಲ್ಲಾ ಪಂಚಾಯತಿ ವ್ಯಾಪ್ತಿಯ ಹುಸ್ಕೂರು ಕೋಡಿ ಗ್ರಾಮದ ನ್ಯಾಯ ಬೆಲೆ ಅಂಗಡಿಯಲ್ಲಿ ಬಡವರಿಗೆ ವಿತರಿಸುವ ಪಡಿತರವನ್ನು ಕಳೆದ ಎರಡು ಮೂರು ತಿಂಗಳಿನಿಂದ ವಿತರಿಸದೆ ವಂಚಿಸುತ್ತಿದ್ದ ಬಗ್ಗೆ ಸ್ಥಳಿಯರಿಂದ ದೂರು ಬಂದ ಹಿನ್ನೆಲೆಯಲ್ಲಿ ದಿಡೀರ್ ಭೇಟಿ ನೀಡಿದ ಮಂಡೂರು ಜಿಲ್ಲಾ ಪಂಚಾಯತಿ ಸದಸ್ಯ ಡಾ. ಕೆ. ಕೆಂಪರಾಜು ನ್ಯಾಯಬೆಲೆ ಅಂಗಡಿಯವರನ್ನು ತರಾಟೆಗೆ ತೆಗೆದುಕೊಂಡು ಪಡಿತರ ವಿತರಿಸುವಂತೆ ಸೂಚಿಸಿದ್ದಾರೆ.

ದೇವರು ವರ ಕೊಟ್ಟರು ಪೂಜಾರಿ ಕೊಡುವುದಿಲ್ಲ ಅನ್ನೊ ಮಾತು ಇಲ್ಲಿ ಅನ್ವಯವಾಗುತ್ತದೆ. ಬಡವರಿಗಾಗಿ ಸರ್ಕಾರ ಪಡಿತರ ವಿತರಿಸಿದರು ಅದನ್ನು ನೀಡಲು ನ್ಯಾಯಬೆಲೆ ಅಂಗಡಿ ಗುತ್ತಿಗೆ ಪಡೆದಿರುವ ಗುತ್ತಿಗೆ ದಾರರು ಅದನ್ನು ಸಮರ್ಪಕವಾಗಿ ವಿತರಿಸದೆ ಇರುವುದರಿಂದ ಅದೆಷ್ಟೇ ಕುಟುಂಬಗಳು ಹಸಿವಿನಿಂದ ಬಳಲುವಂತಾಗಿದೆ.

ಅದೇ ರೀತಿ ಮಹದೇವಪುರ ವಿಧಾನ ಸಭಾ ಕ್ಷೇತ್ರದ ನಿಂಬೇಕಾಯಿಪುರ, ಜೋಡಿ ಹುಸ್ಕೂರು, ಕೋಡಿ ಗ್ರಾಮಗಳಿಗೆ ಪಡಿತರ ವಿತರಿಸುವ ನ್ಯಾಯ ಬೆಲೆ ಅಂಗಡಿ ಗುತ್ತಿಗೆ ಪಡೆದಿರುವ ಗುತ್ತಿಗೆ ದಾರ ಕಳೆದ ಎರಡು ವರ್ಷಗಳ ಹಿಂದೆ ಇದೇ ರೀತಿ ಪಡಿತರ ವಿತರಿಸುವಲ್ಲಿ ವಿಳಂಭ ಮಾಡಿದಾಗ ಕೆಂಪರಾಜು ರವರು ಭೇಟಿ ನೀಡಿ ಬಿಸಿ ಮುಟ್ಟಿಸಿದಾಗ ಜಾಗೃತರಾಗಿ ಸರಿಯಾಗಿ ಪಡಿತರ ವಿತರಿಸುತ್ತಿದ್ದು, ಮತ್ತೆ ಕಳೆದ ಎರಡು ಮೂರು ತಿಂಗಳುಗಳಿಂದ ಹಳೆ ಚಾಡಿಯನ್ನೆ ಮುಂದುವರೆಸಿರುವುದರಿಂದ ಬಡ ಜನರು ಪಡಿತರ ಪಡೆಯಲು ಕೆಲಸ ಕಾರ್ಯಗಳನ್ನು ಬಿಟ್ಟು ಎರಡು ಮೂರು ದಿನಗಳ ಕಾಲ ನ್ಯಾಯಬೆಲೆ ಅಂಗಡಿಗೆ ತಿರುಗುವಂತಾಗಿದೆ.

ತಿಂಗಳಲ್ಲಿ ಹತ್ತು ದಿನಗಳ ಕಾಲ ಬೆಳಗ್ಗಿನಿಂದ ಸಂಜೆಯ ತನಕ ನ್ಯಾಯಬೆಲೆ ಅಂಗಡಿಯನ್ನು ತೆರೆದು ಪಡಿತರ ವಿತರಿಸಬೇಕೆಂಬ ನಿಯಮವಿದ್ದರು ಹುಸ್ಕೂರು ಕೋಡಿಯಲ್ಲಿ 120 ಕಾರ್ಡ್ ಗಳಿಗೆ ತಿಂಗಳಲ್ಲಿ ಒಂದು ದಿನದಲ್ಲಿ ಎರಡರಿಂದ ಮೂರು ಗಂಟೆಗಳ ಕಾಲ ರೇಷನ್ ವಿತರಿಸಿ ಬಾಗಿಲು ಮುಚ್ಚುವುದರಿಂದ ಮತ್ತೆ ರೇಷನ್ ಪಡೆಯಲು ಜನರು ನಿಂಬೇಕಾಯಿಪುರ ಇಲ್ಲವೆ ಜೋಡಿ ಹುಸ್ಕೂರು ಗ್ರಾಮಗಳಿಗೆ ತೆರಳಬೇಕಿರುವುದರಿಂದ ಸಾಕಷ್ಟು ತೊಂದರೆ ಉಂಟಾಗಿದೆಯೆಂದು ಇಲ್ಲಿನ ನಿವಾಸಿಗಳು ತಮ್ಮ ಅಳಲು ತೋಡಿಕೊಂಡರು.

ಇಷ್ಟೇ ಅಲ್ಲದೆ ಕೆಲವೊಮ್ಮೆ ಒಂದು ದಿನ ತಂಬ್(ಬೆರಳಚ್ಚು) ನೀಡಿದರೆ ಅಂದೇ ರೇಷನ್ ವಿತರಿಸದೆ ಮರುದಿನ ಬಂದು ರೇಷನ್ ಪಡೆಯಲು ತಿಳಿಸುವುದರಿಂದ ನಮಗೆ ಎರಡು ದಿನದ ಕೆಲಸಕ್ಕೆ ರಜೆ ಹಾಕುವಂತಾಗಿದ್ದು, ಇದರೊಟ್ಟಿಗೆ ಉಚಿತವಾಗಿ ನೀಡುವ ರೇಷನ್ ಗೆ 20 -30 ರೂ ಹಣ ಪಡೆಯುವುದರಿಂದ ಉಚಿತವಾಗಿ ನೀಡುವ ರೇಷನ್ ಗೆ ಹಣ ನೀಡಿ ಎರಡು ದಿನದ ಕೂಲಿಯನ್ನು ಕಳೆದುಕೊಳ್ಳುವಂತಾಗಿದೆ ಎಂದು ಸ್ಥಳಿಯರು ದೂರಿದರು.

ಇಷ್ಟು ಸಾಲದು ಎಂಬಂತೆ ಬಡ ಜನರಿಗೆ ನೀಡುವ ಅಕ್ಕಿ ಬೇಳೆಯನ್ನು ನೆರೆ ಸಂತ್ರಸ್ತರಿಗೆ ನೀಡುವುದಾಗಿ ಕಳೆದ(ಆಗಸ್ಟ್) ತಿಂಗಳಲ್ಲಿ ಪ್ರತಿ ಕಾರ್ಡ್ ನಲ್ಲಿ 4 ರಿಂದ 6 ಕೆಜಿ ಅಕ್ಕಿ ಕಡಿತ ಮಾಡಿದ್ದು, ಅದನ್ನು ನೆರೆ ಸಂತ್ರಸ್ತರಿಗೆ ವಿತರಿಸದೆ ಈ ಬಗ್ಗೆ ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆಯಲ್ಲಿ ಮಂಡೂರು ಜಿಲ್ಲಾ ಪಂಚಾಯತಿ ಸದಸ್ಯ ಡಾ.ಕೆ. ಕೆಂಪರಾಜು ರವರು ಪ್ರಶ್ನೇ ಮಾಡಿ ಸಾಕ್ಷಿಗಾಗಿ ನೆರೆ ಸಂತ್ರಸ್ತರಿಗೆ ಪಡಿತರ ವಿತರಿಸುವ ಪೊಟೊಗಳನ್ನು ತೋರಿಸಿ ಎಂದಾಗ ಕಕ್ಕಾಬಿಕ್ಕಿಯಾದ ನ್ಯಾಯಬೆಲೆ ಅಂಗಡಿ ಗುತ್ತಿಗೆ ದಾರ ಉತ್ತರ ನೀಡಲಾಗದೆ ತಪ್ಪೊಪ್ಪಿಕೊಂಡಿದ್ದಾನೆ.

Body:
ಇಷ್ಟಕ್ಕೆ ಸುಮ್ಮನಾಗದ ಜಿಲ್ಲಾ ಪಂಚಾಯತಿ ಸದಸ್ಯರು ಅಂಗಡಿ ಒಳಗೆ ಇರಿಸಿದ್ದ ನ್ಯಾಯಬೆಲೆ ಅಂಗಡಿಯ ಸೂಚನಾ ಪಲಕವನ್ನು ಹೊರಗೆ ತೆಗೆಸಿ ಅದರಲ್ಲಿರುವ ಸೂಚನೆಗಳ ಪ್ರಕಾರ ಎಲ್ಲರಿಗು ಪಡಿತರ ವಿತರಿಸುವಂತೆ ಸೂಚಿಸಿ, ನ್ಯಾಯಬೆಲೆ ಅಂಗಡಿಗೆ ಸುಣ್ಣ ಬಣ್ಣ ಬಳಸಿ ಸ್ವಚ್ಚವಾಗಿಟ್ಟುಕೊಳ್ಳುವಂತೆ ಸೂಚಿಸಿದ್ದು ಇಲ್ಲವಾದಲ್ಲಿ ಗುತ್ತಿಗೆಯನ್ನು ರದ್ದುಪಡಿಸುವುದಾಗಿ ಎಚ್ಚರಿಕೆ ನೀಡಿದರು.

ಆಹಾರ ಇಲಾಖೆಯ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ ತಮ್ಮ ಕ್ಷೇತ್ರ ವ್ಯಾಪ್ತಿಯ ಎಲ್ಲಾ ನ್ಯಾಯಬೆಲೆ ಅಂಗಡಿಗಳಲ್ಲಿ ಸೂಕ್ತ ರೀತಿಯಲ್ಲಿ ಜನರಿಗೆ ಪಡಿತರ ವಿತರಿಸದೆ ಇರುವ ಗುತ್ತಿಗೆದಾರರ ವಿರುದ್ದ ಕ್ರಮ ಕೈಗೊಂಡು ಇನ್ನು ಮುಂದೆ ಯಾವುದೆ ಜನರು ಪಡಿತರ ವಿತರಣೆಯಲ್ಲಿ ತೊಡಕುಂಟಾಗಿರುವ ಬಗ್ಗೆ ದೂರುಗಳು ಹೇಳದಂತೆ ವ್ಯಾವಸ್ಥಿತ ರೀತಿಯಲ್ಲಿ ಪಡಿತರ ವಿತರಿಸುವಂತೆ ಸೂಚಿಸಿದರು.

Conclusion:ಮಂಡೂರು ಜಿಲ್ಲಾ ಪಂಚಾಯತಿ ಕ್ಷೇತ್ರದಲ್ಲಿ ಕಳೆದ 35 ವರ್ಷಗಳಿಂದ ನ್ಯಾಯಬೆಲೆ ಅಂಗಡಿ ಇಲ್ಲದ ಗ್ರಾಮಗಳಲ್ಲಿ ಡಾ.ಕೆ. ಕೆಂಪರಾಜು ರವರು ಜಿಲ್ಲಾ ಪಂಚಾಯತಿ ಸದಸ್ಯರಾಗಿ ಆಯ್ಕೆಯಾದ ಮೇಲೆ ತಿರುಮೇನಹಳ್ಳಿ ಹಾಗೂ ಕಟ್ಟುಗೊಲ್ಲಹಳ್ಳಿ ಗ್ರಾಮಗಳಲ್ಲಿ ನೂತನ ನ್ಯಾಯಬೆಲೆ ಅಂಗಡಿಗಳನ್ನು ತೆರೆಸಿದ್ದು ಇದೀಗ ಮಂಡೂರು ಜಿ.ಪಂ ವ್ಯಾಪ್ತಿಗೆ ಬರುವ 13 ಗ್ರಾಮಗಳ ಪೈಕಿ ಆರು ಗ್ರಾಮಗಳಲ್ಲಿ ನ್ಯಾಯ ಬೆಲೆ ಅಂಗಡಿಗಳಿದ್ದು, ಉಳಿದ ಗ್ರಾಮಗಳಲ್ಲು ಗುತ್ತಿಗೆ ದಾರರು ಗ್ರಾಮಗಳಲ್ಲಿ ಪಡಿತರ ವಿತರಿಸುವಂತಹ ಕಾರ್ಯವನ್ನು ಕೈಗೊಂಡಿದ್ದಾರೆ.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.