ETV Bharat / state

ಚುನಾವಣೆಯಲ್ಲಿ ಬಿಜೆಪಿಗೆ ಮತ್ತೆ ಅಧಿಕಾರ: ಶೋಭಾ ಕರಂದ್ಲಾಜೆ

ಈ ಬಾರಿ ಬಿಜೆಪಿಗೆ ಮತ್ತೆ ಅಧಿಕಾರ ಸಿಗಲಿದೆ ಎಂದು ಶೋಭಾ ಕರಂದ್ಲಾಜೆ ಭವಿಷ್ಯ ನುಡಿದಿದ್ದಾರೆ.

Union Minister Shobha Karandlaje
ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ
author img

By

Published : Mar 29, 2023, 8:02 PM IST

ಬೆಂಗಳೂರು : ಮೇ 10ರಂದು ನಡೆಯುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಜನತೆ ಡಬಲ್ ಎಂಜಿನ್ ಸರ್ಕಾರ ರಚನೆಗೆ ಮತ್ತೆ ಅವಕಾಶ ಮಾಡಿಕೊಡಲಿದ್ದಾರೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ವಿಶ್ವಾಸ ವ್ಯಕ್ತಪಡಿಸಿದರು. ಕೇಂದ್ರ ಚುಣಾವಣಾ ಆಯೋಗದಿಂದ ನೀತಿ ಸಂಹಿತೆ ಜಾರಿಯಾದ ಬಳಿಕ ರಾಜ್ಯ ರಾಜಕೀಯ ಪಕ್ಷಗಳಲ್ಲಿ ಚುನಾವಣೆ ಕಾವು ಹೆಚ್ಚಾಗಿದೆ.

ಈ ಇದರ ಬೆನ್ನಲ್ಲೇ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಶೋಭಾ ಕರಂದ್ಲಾಜೆ ಅವರು, ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದಾಗ ಹೆಚ್ಚು ವೇಗವಾಗಿ ಅಭಿವೃದ್ಧಿ ಕಾರ್ಯ ಸಾಧ್ಯ ಎಂದು ಜನರು ಅಭಿಪ್ರಾಯ ಹೊಂದಿದ್ದಾರೆ. 9.17 ಲಕ್ಷ ಯುವಜನರು ಮೊದಲ ಬಾರಿಗೆ ಮತದಾನ ಮಾಡಲಿದ್ದು, ಅವರು ಏಪ್ರಿಲ್ 1ವರೆಗೆ ಮತದಾರರ ನೋಂದಣಿ ಮಾಡಬಹುದು. ಇದು ಸ್ವಾಗತಾರ್ಹ ಎಂದು ತಿಳಿಸಿದರು.

ಕಾಂಗ್ರೆಸ್​ ಮತ್ತು ಜೆಡಿಎಸ್​ ಚುನಾವಣೆ ಬಂದಾಗ ಮಾತ್ರ ಎಚ್ಚರಗೊಳ್ಳುವ ಪಕ್ಷಗಳು- ಶೋಭಾ ಕರಂದ್ಲಾಜೆ: ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಸರ್ಕಾರದ ಯೋಜನೆಗಳು ಮತ್ತು ಕರ್ನಾಟಕದಲ್ಲಿ ಮಾಜಿ ಸಿಎಂ ಬಿ.ಎಸ್​ ಯಡಿಯೂರಪ್ಪ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಆನೇಕ ಯೋಜನೆಗಳು ರಾಜ್ಯದಲ್ಲಿ ಅಭಿವೃದ್ಧಿ ತಂದಿವೆ. ಆದರಿಂದ ಯೋಜನೆಗಳನ್ನು ನಾವು ನಿರಂತರವಾಗಿ ಜನರ ಮಧ್ಯೆ ತಿಳಿಸುವ ಕಾರ್ಯವನ್ನು ಚುನಾವಣೆ ಇಲ್ಲದ ಕಾಲದಲ್ಲೂ ಮಾಡಿದ್ದೇವೆ. ಆದರೆ, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಚುನಾವಣೆ ಬಂದಾಗ ಎಚ್ಚರಗೊಳ್ಳುವ ಪಕ್ಷಗಳು ಎಂದು ಶೋಭಾ ಕರಂದ್ಲಾಜೆ ಅವರು ಟೀಕಿಸಿದರು.

ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಚುನಾವಣೆ ಬಂದಾಗ ಗ್ಯಾರಂಟಿ ಕೊಡುವ ಪಕ್ಷಗಳು. ಚುನಾವಣೆಗಾಗಿ ಸಮಾಜದಲ್ಲಿ ಅಶಾಂತಿ ಮೂಡಿಸುವ ಈ ಎರಡು ಪಕ್ಷಗಳಾಗಿದ್ದು, 2013-18ರ ಕಾಲಾವಧಿಯಲ್ಲಿ ಕೂಡ ಕಾಂಗ್ರೆಸ್ ಆಡಳಿತವಿದ್ದಾಗ ಆ ಪಕ್ಷ ಇದನ್ನೇ ಮಾಡಿತ್ತು ಎಂದು ಕೇಂದ್ರ ಸಚಿವೆ ಆರೋಪಿಸಿದರು. ರಾಜ್ಯದಲ್ಲಿ ವಿಮಾನನಿಲ್ದಾಣ, ರೈಲ್ವೆ ನಿಲ್ದಾಣಗಳ ಅಭಿವೃದ್ಧಿ, ರೈಲ್ವೆ ಸ್ಟೇಷನ್‍ಗಳ ಸ್ವಚ್ಛತೆ, ಲೈನ್‍ಗಳ ಡಬಲಿಂಗ್, ಹೆಚ್ಚು ರೈಲುಗಳನ್ನು ಓಡಿಸಿದ್ದು, ಹೆದ್ದಾರಿಗಳ ಅಭಿವೃದ್ಧಿ, ಜಲಜೀವನ್ ಮಿಷನ್ ಸಾಧನೆ, ಆಯುಷ್ಮಾನ್ ಕಾರ್ಡ್ ಸಾಧ್ಯವಾಗಲು ಡಬಲ್ ಎಂಜಿನ್ ಸರ್ಕಾರವೇ ಕಾರಣ ಎಂದರು.

ಬಿಜೆಪಿ ಮತ್ತೆ ಅಧಿಕಾರ ಚುಕ್ಕಾಣಿ ಹಿಡಿಯುತ್ತದೆ : ನೀತಿ ಸಂಹಿತೆ ಜಾರಿಯಾದ ಬಳಿಕ ಕಮಲ ಪಾಳೆಯದಲ್ಲಿ ಮತ್ತೆ ಬಹುಮತ ಪಡೆದು ಅಧಿಕಾರಕ್ಕೆ ಬರುತ್ತೇವೆ ಎಂಬ ಭರವಸೆ ಹೆಚ್ಚಾಗಿದೆ. ಏಕೆಂದರೆ ಇಂದು ಪಕ್ಷದ ಹಲವಾರು ಸಚಿವರು, ಶಾಸಕರು ಹಾಗು ಸಿಎಂ ಬಸವರಾಜ​ ಬೊಮ್ಮಾಯಿ ಅವರು ಕೂಡ ಬಹಳ ಸ್ಪಷ್ಟವಾಗಿ ಮಾಧ್ಯಮಗಳಿಗೆ ಹೇಳಿದ್ದಾರೆ. ಚುನಾವಣೆ ಎದುರಿಸಲು ಬಿಜೆಪಿ ಸನ್ನದ್ಧವಾಗಿದ್ದು, ಬಿಜೆಪಿ ಪಕ್ಷ ಬಲಿಷ್ಠ ಕೇಡರ್ ಇರುವ ಹಾಗೂ ಅತಿ ಹೆಚ್ಚು ಸದಸ್ಯರನ್ನು ಹೊಂದಿರುವ ಪಕ್ಷ ಎಂದು ಹೇಳಿದರು.

ಈಗಾಗಲೇ ಹಲವಾರು ಅಭಿಯಾನ ಮಾಡಿದ್ದು, ನಿರಂತರವಾಗಿ ಪಕ್ಷದ ಸಂಘಟನೆ ಮಾಡಿಕೊಂಡು ಬಂದಿದೆ. ಬೂತ್ ಮಟ್ಟದ ಅಭಿಯಾನ, ಮೋರ್ಚಾಗಳ ಸಮ್ಮೇಳನ, ಸಂಕಲ್ಪ ಯಾತ್ರೆ, ವಿಜಯ ಸಂಕಲ್ಪ ಯಾತ್ರೆ ಕೈಗೊಳ್ಳಲಾಗಿದೆ. ಚುನಾವಣೆ ಎದುರಿಸಲು ಎಲ್ಲಾ ತಯಾರಿ ಮಾಡಿಕೊಂಡಿದೆ ಎಂದರು.

ಇದನ್ನೂ ಓದಿ : ಚುನಾವಣೆ ಎದುರಿಸಲು ಸನ್ನದ್ಧ, ಸ್ಪಷ್ಟ ಬಹುಮತ ಬಿಜೆಪಿಗೆ ಸಿಗಲಿದೆ : ಸಿಎಂ ಬೊಮ್ಮಾಯಿ‌

ETV Bharat Logo

Copyright © 2024 Ushodaya Enterprises Pvt. Ltd., All Rights Reserved.