ETV Bharat / state

ಬೆಂಗಳೂರಿನಲ್ಲಿ ಲಸಿಕೆಗಾಗಿ ಮುಂದುವರೆದ ಪರದಾಟ: ಕೆ.ಸಿ ಜನರಲ್ ಆಸ್ಪತ್ರೆ ಗೇಟ್ ಬಂದ್

ಸಿಲಿಕಾನ್ ಸಿಟಿಯಲ್ಲಿ ಕೋವಿಡ್ ಲಸಿಕೆ ಪಡೆಯುವುದೇ ಜನರಿಗೆ ದೊಡ್ಡ ಸವಾಲಾಗಿದ್ದು, ಪ್ರತಿನಿತ್ಯ ಆಸ್ಪತ್ರೆಗಳ ಮುಂದೆ ಕಾದು ಕಾದು ವಾಪಸ್ ಹೋಗುತ್ತಿದ್ದಾರೆ. ಈ ನಡುವೆ ಲಸಿಕೆ ಪಡೆಯಲು ನೂಕುನುಗ್ಗಲು, ಗಲಾಟೆಗಳು ನಡೆಯುವುದು ಸಾಮಾನ್ಯವಾಗಿ ಬಿಟ್ಟಿದೆ. ಲಸಿಕಾ ಕೇಂದ್ರದ ಸಿಬ್ಬಂದಿ ಜನರನ್ನು ನಿಭಾಯಿಸಲಾಗದೆ ಹೈರಾಣಾಗಿದ್ದಾರೆ.

Covid vaccination in Bengaluru
ಲಸಿಕಾ ಕೇಂದ್ರದ ಮುಂದೆ ಜನ ಜಂಗುಳಿ
author img

By

Published : May 20, 2021, 12:52 PM IST

ಬೆಂಗಳೂರು: ನಗರದ ಕೆ.ಸಿ ಜನರಲ್ ಆಸ್ಪತ್ರೆ ಮುಂದೆ ಲಸಿಕೆ ಪಡೆಯಲು ಬಂದ ಜನರ ನಡುವೆ ನೂಕುನುಗ್ಗಲು ಉಂಟಾಗಿ ವಾಗ್ವಾದ ನಡೆಯಿತು. ಈ ವೇಳೆ ಜನರನ್ನು ನಿಭಾಯಿಸಲಾಗದೆ ಲಸಿಕಾ ಕೇಂದ್ರದ ಸಿಬ್ಬಂದಿ ಗೇಟ್​ ಹಾಕಬೇಕಾಯಿತು.

ಕೆ.ಸಿ ಜನರಲ್ ಆಸ್ಪತ್ರೆಗೆ ಕೋವಿಡ್ ಲಸಿಕೆ ಪಡೆಯಲು ಪ್ರತಿನಿತ್ಯ ನೂರಾರು ಜನ ಬರುತ್ತಿದ್ದಾರೆ. ಆದರೆ, ಆಸ್ಪತ್ರೆಯಲ್ಲಿ ಲಸಿಕೆ ಕೊರತೆಯಿಂದ ಎಲ್ಲರಿಗೆ ನೀಡಲಾಗ್ತಿಲ್ಲ. ಪ್ರತಿದಿನ ಬಂದು ಗಂಟೆಗಟ್ಟಲೆ ಕ್ಯೂನಲ್ಲಿ ನಿಂತು ಕೊನೆಗೆ ಲಸಿಕೆ ಸಿಗದೆ ಜನ ವಾಪಸ್ ಹೋಗುತ್ತಿದ್ದಾರೆ. ಇಂದು ಸರತಿ ಸಾಲಿನಲ್ಲಿ ನಿಂತವರ ನಡುವೆ ಲಸಿಕೆ ಪಡೆಯಲು ನೂಕುನುಗ್ಗಲು ಉಂಟಾಯಿತು. ಇದರಿಂದ ಕೋವಿಡ್ ನಿಯಮ ಉಲ್ಲಂಘನೆಯಾಗಿದ್ದಲ್ಲದೆ, ವಾಗ್ವಾದ ಕೂಡ ನಡೆಯಿತು.

ಲಸಿಕಾ ಕೇಂದ್ರದ ಮುಂದೆ ಜನಜಂಗುಳಿ

ಓದಿ : ರಾಜ್ಯ ರಾಜಧಾನಿಯಲ್ಲಿ ತಗ್ಗಿದ ಕೊರೊನಾ ಅಬ್ಬರ: 9,463 ಹೊಸ ಪ್ರಕರಣ ಪತ್ತೆ

ವಾರದ ಹಿಂದೆ ಯಾವ ಪರಿಸ್ಥಿತಿ ಇತ್ತೋ ಅದೇ ಪರಿಸ್ಥಿತಿ ಇಂದೂ ಲಸಿಕಾ ಕೇಂದ್ರಗಳ ಮುಂದೆ ಇದೆ. ಜನ ಲಸಿಕೆ ಪಡೆಯುವ ಆತುರದಲ್ಲಿ ಸಾಮಾಜಿಕ ಅಂತರ ಕಾಪಾಡದೆ ಗುಂಪು ಸೇರುತ್ತಿದ್ದು, ಲಸಿಕಾ ಕೇಂದ್ರಗಳೇ ಕೋವಿಡ್ ಹಾಟ್​ಸ್ಪಾಟ್ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ. ನಗರದ ಬೌರಿಂಗ್, ವಿಕ್ಟೋರಿಯಾ ಸೇರಿದಂತೆ ಎಲ್ಲಾ ಆಸ್ಪತ್ರೆಗಳದ್ದೂ ಇದೇ ಪರಿಸ್ಥಿತಿಯಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.