ಬೆಂಗಳೂರು: ಪೊಲೀಸ್ ಇಲಾಖೆಯಿಂದ ವರ್ಗಾವಣೆಯಾಗಿ ಎರಡು ತಿಂಗಳು ಕಳೆದರೂ ಈ ಐಪಿಎಸ್ ಅಧಿಕಾರಿ ಮಾತ್ರ ತಮ್ಮ ಟ್ವಿಟರ್ ಖಾತೆಯಲ್ಲಿ ಹಳೆ ಹುದ್ದೆಯನ್ನೆ ಹಾಕಿಕೊಂಡಿದ್ದು, ಸಾರ್ವಜನಿಕರಲ್ಲಿ ಗೊಂದಲ ಉಂಟು ಮಾಡಿದೆ.
ಕರ್ನಾಟಕ ರಾಜ್ಯ ಪೊಲೀಸ್ ಮೀಸಲು ಪಡೆ (ಕೆಎಸ್ಆರ್ಪಿ) ಐಜಿಪಿಯಾಗಿರುವ ಪಿ. ಹರಿಶೇಖರನ್ ಅವರು ವರ್ಗವಾದರೂ ಹಳೆ ಖಾತೆಯಲ್ಲೆ ಮುಂದುವರೆದಿದ್ದಾರೆ. ಕಳೆದ ಎರಡು ತಿಂಗಳ ಹಿಂದೆ ಹರಿಶೇಖರನ್ ಅವರು ನಗರ ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತರಾಗಿದ್ದರು. ಆದರೆ, ಬಿಜೆಪಿ ಸರ್ಕಾರ ಬಂದ ಬಳಿಕ ಅವರನ್ನು ಕೆಎಸ್ಆರ್ಪಿ ಐಜಿಪಿಯಾಗಿ ವರ್ಗಾಹಿಸಿ, ಡಾ.ಬಿ.ಆರ್.ರವಿಕಾಂತೇಗೌಡ ಅವರನ್ನು ಟ್ರಾಫಿಕ್ ಪೊಲೀಸ್ ಕಮೀಷನರ್ ಆಗಿ ನೇಮಿಸಿ ಸರ್ಕಾರ ಆದೇಶಿಸಿತ್ತು.
ವರ್ಗಾವಣೆಯಾಗಿ ಎರಡು ತಿಂಗಳಾದರೂ ತಮ್ಮ ಅಧಿಕೃತ ಖಾತೆಯಲ್ಲೇ ಟ್ರಾಫಿಕ್ ಆಯುಕ್ತರೆಂದು ಹಾಕಿಕೊಂಡಿದ್ದು, ಸಾರ್ವಜನಿಕರಿಗೆ ಟ್ರಾಫಿಕ್ ಆಯುಕ್ತ ಯಾರು ಎಂಬ ಪ್ರಶ್ನೆ ಮೂಡಿದೆ. ಇಬ್ಬರೂ ಸಂಚಾರ ಆಯುಕ್ತರು ಇರುವುದು ಜನ ಗೊಂದಲದಲ್ಲಿ ಮುಳುಗಿದ್ದಾರೆ.