ETV Bharat / state

ಲಸಿಕಾ ಕೇಂದ್ರದತ್ತ ಬಾರದ ಜನ: ಸರ್ವರಿಗೂ ಲಸಿಕೆ ನೀಡುವ ಸರ್ಕಾರದ ಚಿಂತನೆಗೆ ಸಿಗುತ್ತಿಲ್ಲ ಸಹಕಾರ

ಕೆಲ ದಿನಗಳಿಂದ ರಾಜ್ಯದಲ್ಲಿ ಕೋವಿಡ್​ ಕೇಸ್​ಗಳು ಇಳಿಕೆಯಾಗುತ್ತಿದೆ. ಇದರ ಬೆನ್ನೆಲೆ ಎರಡನೇ ಡೋಸ್ ವ್ಯಾಕ್ಸಿನ್​ ಪಡೆಯುವಲ್ಲಿ ಜನರು ನಿರ್ಲಕ್ಷ್ಯ ತೋರುತ್ತಿದ್ದಾರೆ. ಇದು ಆತಂಕ ಉಂಟು ಮಾಡಿದೆ.

People are neglected to taking of covid second dose vaccine
ವ್ಯಾಕ್ಸಿಲ್​ ಪಡೆಯಲು ಬಾರದ ಜನತೆ
author img

By

Published : Oct 28, 2021, 8:24 PM IST

ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ಗಣನೀಯವಾಗಿ ಇಳಿಕೆಯಾಗುತ್ತಿರುವ ಬೆನ್ನಲ್ಲೇ ಜನ ಎರಡನೇ ಹಂತದ ವ್ಯಾಕ್ಸಿನೇಷನ್ ಪಡೆಯಲು ನಿರ್ಲಕ್ಷ್ಯ ತೋರುತ್ತಿರುವುದು ಆತಂಕಕ್ಕೆ ಎಡೆಮಾಡಿ ಕೊಟ್ಟಿದೆ.

ಮಹಾಮಾರಿ ಕೊರೊನಾ ವೈರಸ್‌ ಪ್ರಭಾವ ಈಗ ತಗ್ಗಿದ್ದು, ಅಪಾಯಕಾರಿ ಡೆಲ್ಟಾ ವೈರಸ್‌ ರೂಪಾಂತರಗೊಂಡಿರುವ ಲಕ್ಷಣಗಳು ಕಾಣಿಸುತ್ತಿಲ್ಲ. ಹೀಗಾಗಿ ಸದ್ಯಕ್ಕೆ ಮೂರನೇ ಅಲೆ ಬರುವ ಸಾಧ್ಯತೆಗಳಿಲ್ಲ. ಬಹುತೇಕ ಮುಂದಿನ ವರ್ಷ ಜನವರಿ ವೇಳೆಗೆ ಮೂರನೇ ಅಲೆ ಕಾಡಬಹುದು ಎಂದು ಹೇಳಲಾಗುತ್ತಿದೆ. ಅದು 2ನೇ ಅಲೆಯಷ್ಟು ಅಪಾಯಕಾರಿಯಾಗಿ ಇರುವುದಿಲ್ಲ ಎಂದು ವೈರಾಣು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಇದು ಜನರಿಗೆ ವ್ಯಾಕ್ಸಿನೇಷನ್ ಪಡೆಯುವ ವಿಚಾರದಲ್ಲಿ ನಿಷ್ಕಾಳಜಿ ತೋರುವ ಹಂತಕ್ಕೆ ತಲುಪಿಸಿದೆ.

ರಾಜ್ಯದಲ್ಲಿ ಅಕ್ಟೋಬರ್‌, ನವೆಂಬರ್ ತಿಂಗಳಲ್ಲಿ ಮೂರನೇ ಅಲೆ ಬರಬಹುದು ಎಂದು ತಜ್ಞರು ಈ ಹಿಂದೆ ಅಂದಾಜಿಸಿದ್ದರು. ಆದರೆ, ಈಗಾಗಲೇ ದೊಡ್ಡ ಮಟ್ಟದಲ್ಲಿ ವ್ಯಾಕ್ಸಿನೇಷನ್ ಪೂರ್ಣಗೊಂಡಿದೆ. ಹೊಸ ಪ್ರಕರಣಗಳ ಸಂಖ್ಯೆ ಇಳಿಯುತ್ತಿದೆ. ಇದರಿಂದಾಗಿ ತಜ್ಞರು ಸಹ ರೋಗದಿಂದ ಅಂತಹ ಆತಂಕ ಪಡುವ ಅಗತ್ಯವಿಲ್ಲ ಎಂದು ವಿವರಿಸಿದ್ದಾರೆ.

ಮೊದಲ ಹಾಗೂ ಎರಡನೇ ಅಲೆ ಸಾಕಷ್ಟು ಗಂಭೀರ ಪರಿಣಾಮ ಉಂಟು ಮಾಡಿದ್ದ ವೇಳೆ ಲಸಿಕೆ ಪಡೆಯಲು ಜನ ಸಾಕಷ್ಟು ಆತುರ ಪಟ್ಟಿದ್ದರು. ಆದರೆ, ಆ ಸಂದರ್ಭ ಲಸಿಕೆ ಕೊರತೆ ಎದುರಾಗಿತ್ತು. ಇದೀಗ ಲಸಿಕೆ ಲಭ್ಯತೆ ಹೇರಳವಾಗಿದೆ. ವಿಪರ್ಯಾಸ ಎಂದರೆ, ಜನರಲ್ಲಿ ಭಯ ದೂರಾಗಿದೆ. ನಗರ ಪ್ರದೇಶಗಳಲ್ಲಿ ಒಂದಿಷ್ಟು ಆತಂಕ ಉಳಿದಿದೆಯಾದರೂ ಗ್ರಾಮೀಣ ಭಾಗಗಳಲ್ಲಿ ಹಾಗೂ ಪಟ್ಟಣಗಳಲ್ಲಿ ಜನರಿಂದ ಆಗುತ್ತಿಲ್ಲ.

ಎಲ್ಲಕ್ಕಿಂತ ಮುಖ್ಯವಾಗಿ ಪ್ರತಿಯೊಬ್ಬರ ದೇಹದಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಯಾಗಿದೆ. ಜೊತೆಗೆ ವೈರಾಣು ರೂಪಾಂತರ ಹೊಂದಿಲ್ಲದೇ ಇರುವುದರಿಂದ ಸೋಂಕಿನ ಪ್ರಭಾವ ತಗ್ಗಿದೆ ಎಂದು ವೈದ್ಯರು ಹೇಳುತ್ತಾರೆ.

ಲಸಿಕೆ ಪಡೆಯಲು ಬಾರದ ಜನತೆ:

ಕೋವಿಡ್ ಲಸಿಕೆ ಪಡೆಯದೆ ಇರುವವರನ್ನು ಲಸಿಕಾ ಕೇಂದ್ರಕ್ಕೆ ಕರೆಸುವ ವಿಚಾರದಲ್ಲಿ ಸರ್ಕಾರ ಸಾಕಷ್ಟು ಪ್ರಯತ್ನ ಮಾಡುತ್ತಿದೆ. ಜನಜಾಗೃತಿ ಮೂಡಿಸಲು ಅಗತ್ಯ ಕ್ರಮ ಕೈಗೊಳ್ಳುತ್ತಿದೆ. ಜನರನ್ನು ಸೆಳೆಯಲು ಅಗತ್ಯವಿರುವ ತಂತ್ರಗಳನ್ನು ರೂಪಿಸಲು ಆರೋಗ್ಯ ಇಲಾಖೆ ನಿರಂತರ ಪ್ರಯತ್ನ ನಡೆಸುತ್ತಿದೆ. ಮೊದಲನೇ ಡೋಸ್​ ಲಸಿಕೆ ಪಡೆದ ಅದೆಷ್ಟೋ ಮಂದಿ ಈಗ ಎರಡನೇ ಡೋಸ್​​ ಲಭ್ಯವಿದ್ದರೂ ಪಡೆಯಲು ಮುಂದೆ ಬರುತ್ತಿಲ್ಲ.

ಇದೀಗ ಮೂರನೇ ಅಲೆ ಅಪ್ಪಳಿಸಿದರೆ ಜನರ ಜೀವರಕ್ಷಣೆಗೆ ಲಸಿಕೆ ಮಾತ್ರವೇ ಪರಿಹಾರ ಆಗಿದೆ. ಸಕಾಲಕ್ಕೆ ಪ್ರತಿಯೊಬ್ಬರೂ ಎರಡು ಹಂತದ ಲಸಿಕೆ ಪಡೆಯಲಿ ಎಂಬುದು ಸರ್ಕಾರದ ಆಶಯವಾಗಿದ್ದು, ಅಗತ್ಯ ಜಾಗೃತಿ ಮೂಡಿಸುತ್ತಿದೆ. ಆದರೆ, ಜನ ಈ ಬಗ್ಗೆ ಹೆಚ್ಚಾಗಿ ತಲೆ ಕೆಡಿಸಿಕೊಳ್ಳದಿರುವುದು ಸರ್ಕಾರವನ್ನು ಚಿಂತೆಗೀಡು ಮಾಡಿದೆ.

ಭೂಸ್ಟರ್ ಡೋಸ್ :

ರಾಜ್ಯದಲ್ಲಿ 1.68 ಕೋಟಿ ಮಂದಿ ಎರಡೂ ಡೋಸ್‌ ಪಡೆದಿದ್ದಾರೆ. 5.59 ಕೋಟಿ ಮಂದಿ ಮೊದಲ ಡೋಸ್‌ ಪಡೆದಿದ್ದಾರೆ. 18 ವರ್ಷ ಮೀರಿದ ಎಲ್ಲರಿಗೂ ಡಿಸೆಂಬರ್‌ ಒಳಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದೆ ಎಂದು ಆರೋಗ್ಯ ಸಚಿವ ಸುಧಾಕರ್ ಮಾಹಿತಿ ನೀಡಿದ್ದಾರೆ.

ಲಸಿಕೆ ಅವಧಿ ಒಂದು ವರ್ಷದ್ದಾಗಿದ್ದು, ಇದರ ಬಳಿಕ ಎರಡು ಹಂತದ ಲಸಿಕೆ ಪಡೆದವರು ಭೂಸ್ಟರ್ ಡೋಸ್ ಪಡೆಯಬೇಕು, ಇಲ್ಲವೆ ಇನ್ನೊಂದು ಹಂತದ ಲಸಿಕೆ ಪಡೆಯುವ ಅಗತ್ಯ ಎದುರಾಗಬಹುದು. ಅಭಿವೃದ್ಧಿ ರಾಷ್ಟ್ರಗಳಾದ ಅಮೆರಿಕ, ಇಂಗ್ಲೆಂಡ್​​​ಗಳಲ್ಲಿ ಈಗಾಗಲೇ ಭೂಸ್ಟರ್ ಡೋಸ್​ಗಳನ್ನು ನೀಡಲಾಗುತ್ತಿದೆ ಎಂಬ ಮಾಹಿತಿ ನೀಡಿದ್ದಾರೆ.

ಜನವರಿ ನಂತರ 3ನೇ ಅಲೆ ಸಾಧ್ಯತೆ:

ಕೊರೊನಾ ಯಾವ ಸಂದರ್ಭದಲ್ಲಾದರೂ ರೂಪಾಂತರಗೊಳ್ಳಬಹುದು. ಹಾಗಾಗಿ 3ನೇ ಅಲೆ ಕಾಲವನ್ನು ನಿರ್ಧರಿಸಲಾಗದು. 2ನೇ ಅಲೆಯೂ ಫೆಬ್ರವರಿಯಲ್ಲಿ ಆರಂಭಗೊಂಡು ಮಾರ್ಚ್, ಏಪ್ರಿಲ್‌ ಹಾಗೂ ಮೇ ತಿಂಗಳಲ್ಲಿ ಹೆಚ್ಚು ಪರಿಣಾಮ ಬೀರಿತು. ಮೂರನೇ ಅಲೆಯೂ 2022ರ ಜನವರಿ ನಂತರ ಬರಬಹುದು ಎಂದು ವೈದ್ಯರು ಹೇಳಿದ್ದಾರೆ.

ರಾಜ್ಯ ಆರನೇ ಸ್ಥಾನದಲ್ಲಿದೆ:

ದೇಶದಲ್ಲಿ ನೂರು ಕೋಟಿ ಮಂದಿಗೆ ಕೋವಿಡ್ ಲಸಿಕೆ ನೀಡುವ ಕಾರ್ಯ ಸಂಪೂರ್ಣವಾಗಿದೆ ಎಂಬ ಮಾಹಿತಿ ಎಲ್ಲರಿಗೂ ತಿಳಿದಿದೆ. ರಾಜ್ಯದ ಸಾಧನೆ ಒಟ್ಟಾರೆ ದೇಶದಲ್ಲಿ ಗಮನಿಸಿದರೆ ಆರನೇ ಸ್ಥಾನದಲ್ಲಿದೆ. ತೆಲಂಗಾಣ ಮೊದಲ ಸ್ಥಾನದಲ್ಲಿದ್ದರೆ, ಗುಜರಾತ್, ಮಧ್ಯಪ್ರದೇಶ ಹಾಗೂ ಕೇರಳ ಇವೆ. ರಾಜ್ಯದಲ್ಲಿ ಈಗಾಗಲೇ 6,21,33,863 ಮಂದಿಗೆ ಕೋವಿಡ್ ಲಸಿಕೆ ಹಾಕಲಾಗಿದೆ. ಉಳಿದವರಿಗೂ ಸಹ ಕೋವಿಡ್ ಲಸಿಕೆ ನೀಡುವ ಕಾರ್ಯ ಡಿಸೆಂಬರ್ ಇಲ್ಲವೇ ಜನವರಿಯಲ್ಲಿ ಪೂರ್ಣಗೊಳಿಸಲು ಸರ್ಕಾರ ತೀರ್ಮಾನಿಸಿದೆ.

ಡಿಸೆಂಬರ್​ ಅಂತ್ಯಕ್ಕೆ ಲಸಿಕಾ ಪೂರ್ಣಗೊಳಿಸುವ ಗುರಿ:

ಬೆಂಗಳೂರು ಮಹಾನಗರದಲ್ಲಿ ಕೋವಿಡ್ ಲಸಿಕೆ ನೀಡುವ ಕಾರ್ಯವನ್ನು ಅತ್ಯಂತ ವ್ಯವಸ್ಥಿತವಾಗಿ ಬಿಬಿಎಂಪಿ ಆಡಳಿತ ಮಾಡುತ್ತಿದೆ. ಡಿಸೆಂಬರ್ ವೇಳೆಗೆ ಬಹುತೇಕ ಎಲ್ಲರಿಗೂ ಎರಡು ಹಂತದ ಲಸಿಕೆ ನೀಡುವ ಕಾರ್ಯ ಆಗಲಿದೆ ಎಂಬ ಮಾಹಿತಿ ನೀಡಲಾಗಿದೆ. ನಗರದ ಮೂಲೆ ಮೂಲೆಗೂ ಜಾಗೃತಿ ಸಂದೇಶ ತಲುಪಿಸುವ ಕಾರ್ಯ ಆಗುತ್ತಿದೆ.

ಲಸಿಕೆ ಪಡೆಯಲು ನಿರಾಕರಿಸಿದರವನ್ನು ಮನವೊಲಿಸಿ ಲಸಿಕಾ ಕೇಂದ್ರಕ್ಕೆ ಕರೆ ತರುವ ಕಾರ್ಯ ನಡೆಯುತ್ತಿದೆ. ಜನವರಿ ತಿಂಗಳಲ್ಲಿ ಕೋವಿಡ್ ಮೂರನೇ ಅಲೆ ಕಾಡುವ ಸಾಧ್ಯತೆ ಇದ್ದು, ಆ ಅವಧಿಯ ಒಳಗೆ ಎಲ್ಲರಿಗೂ ಎರಡು ಹಂತದ ಲಸಿಕೆ ನೀಡುವ ಗುರಿ ಹೊಂದಿದ್ದೇವೆ ಎಂದು ಬೃಹತ್ ಬೆಂಗಳೂರು ಮಹಾನಗರಪಾಲಿಕೆ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮೂಲಗಳ ಪ್ರಕಾರ ಖಾಸಗಿ ಆಸ್ಪತ್ರೆಗಳಿಗೆ ತೆರಳಿ ಲಸಿಕೆ ಪಡೆಯುವವರ ಪ್ರಮಾಣ ಶೇ. 90 ರಷ್ಟು ಇಳಿಕೆ ಆಗಿದ್ದರೆ, ಸರ್ಕಾರಿ ಆಸ್ಪತ್ರೆ ಹಾಗೂ ಉಚಿತ ಲಸಿಕಾ ಕೇಂದ್ರಕ್ಕೆ ಬರುವವರ ಸಂಖ್ಯೆ ಶೇ.50 ರಷ್ಟು ಕುಸಿದಿದೆ. ಒಟ್ಟಾರೆ ರಾಜ್ಯದ ರಾಜಧಾನಿ ಸೇರಿದಂತೆ ಇತರೆಡೆಗಳಲ್ಲಿಯೂ ಕೋವಿಡ್ ಲಸಿಕೆ ನೀಡುವ ವಿಚಾರದಲ್ಲಿ ಸರ್ಕಾರ ಸರ್ವ ರೀತಿಯಲ್ಲೂ ಸಜ್ಜಾಗಿದ್ದು, ಜನ ಲಸಿಕ ಕೇಂದ್ರಗಳಿಗೆ ಇಲ್ಲವೇ ವ್ಯಾಕ್ಸಿನೇಷನ್ ಪಡೆಯುವ ಸ್ಥಳಕ್ಕೆ ಆಗಮಿಸಬೇಕಿದೆ. ಈ ನಿಟ್ಟಿನಲ್ಲಿ ಮುಂಬರುವ ದಿನಗಳಲ್ಲಿ ಇನ್ನಷ್ಟು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲು ಸರ್ಕಾರ ರೂಪುರೇಷೆ ಹೆಣೆಯುತ್ತಿದೆ.

ಇದನ್ನೂ ಓದಿ: ಮನೆಬಾಗಿಲಿಗೆ ಪಡಿತರ ಹಂಚಿಕೆ ಯೋಜನೆ: ಕಾಳಸಂತೆ ಮಾರಾಟಕ್ಕೆ ಬೀಳುತ್ತಾ ಬ್ರೇಕ್ ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.