ಬೆಂಗಳೂರು : ಹಿಂದಿನ ಬಿಜೆಪಿ ಸರ್ಕಾರದಿಂದ ಬಾಕಿ ಉಳಿದುಕೊಂಡ ಭ್ರಷ್ಟಾಚಾರದ 300ಕ್ಕೂ ಅಧಿಕ ಕಡತಗಳನ್ನು ಶುಚಿಗೊಳಿಸಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ. ವಿಕಾಸಸೌಧದ ತಮ್ಮ ಕಚೇರಿಯಲ್ಲಿ ಸೋಮವಾರ 300ಕ್ಕೂ ಅಧಿಕ ಕಡತವನ್ನು ಪರಿಶೀಲಿಸಿ ಅವರು ಇತ್ಯರ್ಥಪಡಿಸಿದ್ದಾರೆ.
ಈ ವೇಳೆ ತಮ್ಮ ಕಚೇರಿಯ ಟೇಬಲ್ ಮೇಲೆ ಕಡತಗಳ ರಾಶಿಯೇ ಕಂಡುಬಂತು. ಎಲ್ಲಾ ಕಡತಗಳನ್ನು ಪರಿಶೀಲಿಸಿ ಅವುಗಳನ್ನು ವಿಲೇವಾರಿ ಮಾಡಿದರು. ಹಲವು ವರ್ಷಗಳಿಂದ ಈ ಕಡತಗಳು ವಿಲೇವಾರಿಯಾಗದೇ ಹಾಗೇ ಉಳಿದುಕೊಂಡಿದ್ದವು. ಈ ಬಗ್ಗೆ ಎಕ್ಸ್ ಪೋಸ್ಟ್ ಮೂಲಕ ಮಾಹಿತಿ ಹಂಚಿಕೊಂಡಿರುವ ಪ್ರಿಯಾಂಕ್ ಖರ್ಗೆ, 'ನನ್ನ ಕಚೇರಿಯಲ್ಲಿ ಕೆಲ ದೀಪಾವಳಿಯ ಶುಚಿ ಮಾಡಿದೆ' ಎಂದು ಬರೆದುಕೊಂಡಿದ್ದಾರೆ.
-
I did some Deepavali cleaning in the office today.
— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) November 13, 2023 " class="align-text-top noRightClick twitterSection" data="
Cleaned out over 300 files of corruption that was left pending in the previous Govt. The previous BJP Govt was called #40PercentSarakara for a very good reason. pic.twitter.com/Ye7g0kzO9V
">I did some Deepavali cleaning in the office today.
— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) November 13, 2023
Cleaned out over 300 files of corruption that was left pending in the previous Govt. The previous BJP Govt was called #40PercentSarakara for a very good reason. pic.twitter.com/Ye7g0kzO9VI did some Deepavali cleaning in the office today.
— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) November 13, 2023
Cleaned out over 300 files of corruption that was left pending in the previous Govt. The previous BJP Govt was called #40PercentSarakara for a very good reason. pic.twitter.com/Ye7g0kzO9V
ಕಳೆದ ಬಿಜೆಪಿ ಸರ್ಕಾರದಿಂದ ಬಾಕಿ ಉಳಿದುಕೊಂಡಿದ್ದ ಭ್ರಷ್ಟಾಚಾರದ ಸುಮಾರು 300ಕ್ಕೂ ಅಧಿಕ ಕಡತಗಳನ್ನು ಸ್ವಚ್ಛ ಮಾಡಿದೆ. ಹಿಂದಿನ ಬಿಜೆಪಿ ಸರ್ಕಾರವನ್ನು 40% ಸರ್ಕಾರ ಎಂದು ಸರಿಯಾದ ಕಾರಣಕ್ಕಾಗಿನೇ ಕರೆಯಲಾಗಿತ್ತು ಎಂದು ಸಚಿವರು ಟೀಕಿಸಿದ್ದಾರೆ.
ಇದನ್ನೂ ಓದಿ : 'ಬಿವೈ ವಿಜಯೇಂದ್ರ ನೇಮಕ ಬಿಎಲ್ ಸಂತೋಷ್ಗೆ ಸ್ಪಷ್ಟ ಸಂದೇಶ.. ನೀವು ಕೇಶವ ಕೃಪಾದಲ್ಲಿ ಇರಿ': ಪ್ರಿಯಾಂಕ್ ಖರ್ಗೆ ಟೀಕೆ