ಬೆಂಗಳೂರು: ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಗಳ ಪಾರ್ಥಿವ ಶರೀರ ನ್ಯಾಷನಲ್ ಕಾಲೇಜು ಮೈದಾನದಿಂದ ವಿದ್ಯಾಪೀಠ ಮಠದತ್ತ ತೆರಳಿತು.
ಲಕ್ಷಾಂತರ ಭಕ್ತಾದಿಗಳ ವೀಕ್ಷಣೆಯ ನಂತರ ಸರಿಯಾಗಿ ಆರು ಗಂಟೆಗೆ ಪಾರ್ಥಿವ ಶರೀರ ನ್ಯಾಷನಲ್ ಕಾಲೇಜು ಮೈದಾನದಿಂದ ವಿಶೇಷ ವಾಹನದಲ್ಲಿ ವಿದ್ಯಾಪೀಠ ವೃತ್ತ ದತ್ತ ತೆರಳಿತು.
ಸಿಎಂ ಬಿಎಸ್ ಯಡಿಯೂರಪ್ಪ, ಸಂಸದೆ ಶೋಭಾ ಕರಂದ್ಲಾಜೆ, ಡಿಸಿಎಂ ಡಾ ಅಶ್ವಥ್ ನಾರಾಯಣ್ ಸೇರಿದಂತೆ ಹಲವು ಗಣ್ಯರು ಪಾರ್ಥಿವ ಶರೀರ ಜೊತೆ ವಿದ್ಯಾಪೀಠ ದತ್ತ ಪ್ರಯಾಣ ಬೆಳೆಸಿದರು.