ETV Bharat / state

ಆಸ್ಪತ್ರೆ ನಿರ್ಲಕ್ಷ್ಯದಿಂದ ರೋಗಿ ಸಾವು ಆರೋಪ: ತನಿಖೆಗೆ ಮುಂದಾದ ಅಧಿಕಾರಿಗಳು - Jigani Suhas Hospital, Anekal

ಜಿಗಣಿ ಸುಹಾಸ್ ಆಸ್ಪತ್ರೆಯಲ್ಲಿ ರೋಗಿಗಳಿಗೆ ಸರಿಯಾದ ಚಿಕಿತ್ಸೆ ದೊರಕುತ್ತಿಲ್ಲ ಎಂಬ ಆರೋಪದ ಮೇಲೆ ಸಂಬಂಧಪಟ್ಟ ಅಧಿಕಾರಿಗಳು ತನಿಖೆಗೆ ಮುಂದಾಗಿದ್ದಾರೆ.

dasa
ಆಸ್ಪತ್ರೆ ನಿರ್ಲಕ್ಷ್ಯದಿಂದ ರೋಗಿ ಸಾವು ಆರೋಪ
author img

By

Published : Oct 3, 2020, 9:31 AM IST

ಬೆಂಗಳೂರು: ಆನೇಕಲ್​ನ ಜಿಗಣಿ ಸುಹಾಸ್ ಆಸ್ಪತ್ರೆಯಲ್ಲಿ ಸರಿಯಾದ ಸಂದರ್ಭದಲ್ಲಿ ಚಿಕಿತ್ಸೆ ದೊರೆಯದೆ ರೋಗಿ ಮೃತಪಟ್ಟಿರುವ ಆರೋಪ ಕೇಳಿ ಬಂದಿದೆ.

ಆಸ್ಪತ್ರೆ ನಿರ್ಲಕ್ಷ್ಯದಿಂದ ರೋಗಿ ಸಾವು ಆರೋಪ

ಆನೇಕಲ್ ತಾಲೂಕಿನ ಬನ್ನೇರುಘಟ್ಟ-ಜಿಗಣಿ ಬಳಿಯ ಮೆಳೆನಲ್ಲಸಂದ್ರ ನಿವಾಸಿ ಡಾಬಾ ಮಂಜುನಾಥ್ ಮೃತ ದುರ್ದೈವಿ.‌ ಸೆಪ್ಟೆಂಬರ್ 26ರಂದು ಜಿಗಣಿಯ ಸುಹಾಸ್ ಆಸ್ಪತ್ರೆಗೆ ಬಂದಿದ್ದರು. ಆದರೆ ಸಿಬ್ಬಂದಿ ನಿರ್ಲಕ್ಷ್ಯದಿಂದ ಎದೆ ನೋವು ಹೆಚ್ಚಾಗಿ ಅಲ್ಲೇ ಕುಸಿದು ಬಿದ್ದಿದ್ದರು ಎನ್ನಲಾಗಿದೆ.

ನಂತರ ಆಸ್ಪತ್ರೆ ಸಿಬ್ಬಂದಿ ಬನ್ನೇರುಘಟ್ಟ-ಬೆಂಗಳೂರು ಮುಖ್ಯ ರಸ್ತೆಯ ಪೋರ್ಟೀಸ್ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಷ್ಷರಲ್ಲೇ ಮಂಜುನಾಥ್​ ಮೃತಪಟ್ಟಿದ್ದಾರೆ. ನಂತರ ರೋಗಿಯ ಸಂಬಂಧಿಗಳು ಆಸ್ಪತ್ರೆಯ ಸಿಸಿಟಿವಿ ದೃಶ್ಯ ಪರಿಶೀಲಿಸಿದಾಗ ಸಿಬ್ಬಂದಿ ನಿರ್ಲಕ್ಷ್ಯ ತೋರಿರುವುದು ಬೆಳಕಿಗೆ ಬಂದಿದೆ ಎನ್ನಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.