ETV Bharat / state

ಯತ್ನಾಳ್ ವಿರುದ್ಧ ಪೋಸ್ಟರ್ ಅಂಟಿಸಿ ನಮ್ಮ ಕಾರ್ಯಕರ್ತರು ಒಳ್ಳೆ ಕೆಲಸ ಮಾಡಿದ್ದಾರೆ: ಡಿಕೆಶಿ

author img

By

Published : Aug 25, 2021, 8:45 PM IST

ನಮ್ಮ ಪಕ್ಷದವರ ವಿರುದ್ಧ ಯಾರೇ ಹೇಳಿಕೆ ಕೊಟ್ಟರೂ ಕಾರ್ಯಕರ್ತರು ಇದೇ ರೀತಿ ಹೋರಾಟ ಮಾಡಲಿದ್ದಾರೆ. ಎಷ್ಟು ಬೇಕಾದರು ಕೇಸ್ ಹಾಕಲಿ ನೋ ಪ್ರಾಬ್ಲಂ. ಬಂಧನ ಮಾಡಿದರೂ ಏನೂ ಚಿಂತೆ ಇಲ್ಲ..

DK Shivakumar
ಡಿಕೆ ಶಿವಕುಮಾರ್

ಬೆಂಗಳೂರು : ಬಿಜೆಪಿ ಶಾಸಕ ಯತ್ನಾಳ್ ವಿರುದ್ಧ ಪೋಸ್ಟರ್ ಅಂಟಿಸಿ ನಮ್ಮ ಕಾರ್ಯಕರ್ತರು ಒಳ್ಳೆ ಕೆಲಸ ಮಾಡಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಸಮರ್ಥಿಸಿಕೊಂಡರು.

ಕಾಂಗ್ರೆಸ್ ಕಾರ್ಯಕರ್ತರ ನಡೆ ಸಮರ್ಥಿಸಿಕೊಂಡ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್..

ಸದಾಶಿವನಗರದ ತಮ್ಮ ನಿವಾಸದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಮ್ಮ ಪಕ್ಷದವರ ವಿರುದ್ಧ ಯಾರೇ ಹೇಳಿಕೆ ಕೊಟ್ಟರೂ ಕಾರ್ಯಕರ್ತರು ಇದೇ ರೀತಿ ಹೋರಾಟ ಮಾಡಲಿದ್ದಾರೆ. ಎಷ್ಟು ಬೇಕಾದರು ಕೇಸ್ ಹಾಕಲಿ ನೋ ಪ್ರಾಬ್ಲಂ. ಬಂಧನ ಮಾಡಿದರೂ ಏನೂ ಚಿಂತೆ ಇಲ್ಲ ಎಂದು ಸಮರ್ಥಿಸಿಕೊಂಡರು.

ಸ್ವೆಟರ್ ಹಗರಣ ಸಂಬಂಧ ಪ್ರತಿಕ್ರಿಯಿಸಿದ ಅವರು, ನಾನು ಜಗ್ಗೇಶ್, ಕೋಮಲ್ ಬಗ್ಗೆ ಮಾತನಾಡಲ್ಲ. ಅವರು ಇನ್ವಾಲ್ ಆಗಿದ್ದಾರೋ ಇಲ್ವೋ ಗೊತ್ತಿಲ್ಲ. ಅದು ಅವರ ವೈಯುಕ್ತಿಕ ವಿಚಾರ.

ಸ್ವೆಟರ್ ಕೊಡೋದು, ಟೆಂಡರ್ ಕರೆದಿದ್ದು, ದುಡ್ಡು ಕೊಟ್ಟಿದ್ದು ಸಂತೋಷದ ವಿಚಾರವಾಗಿದೆ. ಆದರೆ, ಯಾರಿಗೆ ಸ್ವೆಟರ್ ಕೊಟ್ಟಿದ್ದಾರೆ?, ಸ್ವೆಟರ್ ಎಲ್ಲಿದೆ?, ಕೋವಿಡ್​​​ನಲ್ಲಿ ಶಾಲೆ ಎಲ್ಲಿ ಆರಂಭವಾಗಿತ್ತು ಎಂಬೆಲ್ಲ ಪ್ರಶ್ನೆಗಳಿಗೆ ಕಾರ್ಪೊರೇಷನ್, ಸರ್ಕಾರ ಉತ್ತರಿಸಬೇಕು ಎಂದು ಆಗ್ರಹಿಸಿದರು.

ಓದಿ: ಬೆಂಗಳೂರಿನಲ್ಲಿ ಮುಂದಿನ ಎರಡು ದಿನಗಳವರೆಗೆ ಮಳೆ ಸಾಧ್ಯತೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.